25th April 2024
Share

TUMAKURU:SHAKTHIPEETA FOUNDATION

ಆಸಿಡ್ ದಾಳಿಗೆ ಒಳಗಾದ ಮಹಿಳೆಯರು ರಾಜ್ಯದ ಯಾವುದೇ ಮೂಲೆಯಲ್ಲಿರಲಿ, ಅವರಿಗೆ ಮನೆ ಇಲ್ಲದಿದ್ದರೆ ವಾಸಕ್ಕೆ ಮನೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ರೂ 5 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವುದಾಗಿ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಘೋóಶಿಸಿದರು.

ದಿನಾಂಕ:13.05.2022 ರಂದು ವಿಧಾನಸೌಧದ ಸಭಾಂಗಣಲ್ಲಿ ನಡೆದ ಹಲೋ ಕಂದಾಯ ಸಚಿವರೇ  ಉದ್ಘಾಟನಾ ಸಮಾರಂಭದಲ್ಲಿ ಆಸಿಡ್ ಒಳಗಾದ ಮಹಿಳೆಯರಿಗೆ ನೀಡುತ್ತಿದ್ದ ಮಾಸಿಕ ರೂ 3000 ಪಿಂಚಣೆಯನ್ನು ರೂ 10000 ಕ್ಕೆ ಹೆಚ್ಚುವರಿ ಮಾಡಿ, ಸ್ವತಃ ಮುಖ್ಯ ಮಂತ್ರಿಯವರಿಗೆ 5 ಜನಕ್ಕೆ ಸಾಂಕೇತಿಕವಾಗಿ ಬಿಡುಗಡೆ ಮಾಡಿದರು.

ಬಿಡುಗಡೆ ಮಾಡುವಾಗ ಪ್ರತಿಯೊಬ್ಬರ ಜೊತೆಯಲ್ಲಿಯೂ ಮುಖ್ಯಮಂತ್ರಿಯವರು ಚರ್ಚೆ ಮಾಡಿದರು. ಚರ್ಚೆ ಮಾಡುವಾಗ ನನಗೆ ಅವರು ಏನು ಕೇಳುತ್ತಿರಬಹುದು ಎಂಬ ಕುತೂಹಲವಿತ್ತು. ಅವರು ಭಾಷಣ ಮಾಡುವಾಗ ಈ ಘೋಷಣೆ ಮಾಡಿದಾಗ ಇದೊಂದು ಭಾವಾನಾತ್ಮಕ ಸಮಾರಂಭ ಎನಿಸಿತು.

ಯಾವುದೇ ಹೋರಾಟ ಇಲ್ಲ, ಪ್ರತಿಭಟನೆ ಇಲ್ಲ, ಮನವಿ ಇಲ್ಲ, ಆಡಳಿತ ನಡೆಸುವ ರಾಜನ ಹೃದಯದಿಂದ, ಮನದಾಳದಿಂದ ಬಂದ ಯೋಜನೆ ನೋಡಿ. ಇದಕ್ಕೆ ಗ್ರಾಮವಾಸ್ತವ್ಯ, ಜನಸ್ಪಂಧನ ಕಾರ್ಯಕ್ರಮ ನಡೆಸಿದರೆ ನೈಜ್ಯ ಸಮಸ್ಯೆ ಅರಿವು ಆಗಲಿದೆ.

‘ಎಸಿ ರೂಂಗಳ ಯೋಜನೆಯೇ ಬೇರೆ, ನೈಜ್ಯ ಯೋಜನೆಗಳೇ ಬೇರೆ. ಅಧಿಕಾರ ವಹಿಸಿಕೊಂಡಾಗಿನಿಂದಲೂ ಬೊಮ್ಮಾಯಿ ಸರ್ಕಾರ ಜನಸಮಾನ್ಯರ ಸಾಮಾಜಿಕ ಭಧ್ರತೆಗೆ ಒತ್ತು ನೀಡುತ್ತಿದೆ.ಇದರ ಹಿನ್ನಲೆ ಗಮನಿಸಿದರೆ ಮುಖ್ಯಮಂತ್ರಿಯವರ ಜೀವನದಲ್ಲಿ ಅಥವಾ ಅವರ ಕಣ್ಣುಮುಂದೆ ಯಾವುದೋ ಘಟನೆ ನಡೆದಿರಬೇಕು ಎನಿಸುತ್ತಿದೆ.

ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ರವರು ಅವರ ಇಲಾಖೆಯ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆಯ ಆಂದೋಲನದ ರೀತಿಯಲ್ಲಿ ಮಾಡುತ್ತಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ ಅಭಿನಂದಾರ್ಹರು.

ಆದರೇ ರೈತರು ಮಾತ್ರ ವಿವಿಧ ಕೆಲಸಗಳಿಗೆ ಬ್ರೋಕರ್ ಗಳಿಗೆ ಪ್ಯಾಕೇಜ್ ನೀಡುವುದು ಇನ್ನೂ ನಿಂತಿಲ್ಲ. ನಿಲ್ಲುವ ಮುನ್ಸೂಚನೆಯು ಕಾಣುತ್ತಿಲ್ಲ. ವಿಧಾನಸಭಾ ಕ್ಷೇತ್ರದ ರಾಜರುಗಳು ಇದಕ್ಕೆ ಉತ್ತರ ನೀಡಬೇಕು.