TUMAKURU:SHAKTHIPEETA FOUNDATION
ಹೌದು! ತುಮಕೂರು ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿನ ಶತಮಾನಗಳ (ವಯಸ್ಸು ಗೊತ್ತಿಲ್ಲ)À ಆಲದ ಮರಗಳನ್ನು, ತುಮಕೂರು ಸ್ಮಾರ್ಟ್ ಸಿಟಿ ಸಂರಕ್ಷಣೆ ಮಾಡುವ ಮಹತ್ಕಾರ್ಯ ಮಾಡಿರುವುದನ್ನು, ಸ್ವತಃ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ದಿನಾಂಕ:16.05.2022 ರಂದು ಬೆಳಿಗ್ಗೆ 12.25 ಕ್ಕೆ ಬಂದು ನಿರ್ವಹಣೆ ಮಾಡಲು ತುಮಕೂರು ಪ್ರೆಸ್ ಕ್ಲಬ್ ನವರಿಗೆ ಹಸ್ತಾಂತರ ಮಾಡಲಿದ್ದಾರೆ.
ಇದೊಂದು ಪರಿಸರವಾದಿಗಳಿಗೆ, ವಾಯು ವಿಹಾರಿಗಳಿಗೆ, ವಿಧ್ಯಾರ್ಥಿಗಳಿಗೆ, ಪೋಷಕರಿಗೆ, ಪ್ರೇಮಿಗಳಿಗೆ, ಹಿರಿಯ ನಾಗರೀಕರಿಗೆ ಸಂತೋಷ ನೀಡುವ ಸ್ಥಳವಾಗಿದೆ. ಯಾವುದೇ ಕಾಟವಿಲ್ಲದೆ ಕೆಲವು ನಿಮಿಷ ಮೌನವಾಗಿ ಕಾಲ ಕಳೆಯುವ ತಾಣವಾಗಿದೆ.
ನಾನು ಬೇಟಿ ನೀಡಿದಾಗಲೆಲ್ಲಾ ಅಲ್ಲಿ ಓಡಾಡುವ ಜನರನ್ನು ಪ್ರಶ್ನೆ ಮಾಡುವುದು ಸಹಜ. ಈ ಆಲದ ಮರದ ಪಾರ್ಕ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಯಾರೊಬ್ಬರೂ ವಿರೋಧವಾಗಿ ಮಾತನಾಡಿಲ್ಲ.ಇದೊಂದು ಒಳ್ಳೆಯ ಕೆಲಸ ಸಾರ್ ಎಂದು ಪ್ರಸಂಸೆ ಮಾಡಿದ್ದಾರೆ.
ಆದರೇ ನಿರ್ವಹಣೆ ಬಗ್ಗೆ ಒಂದು ದೊಡ್ಡ ತಲೆನೋವಾಗಿತ್ತು. ತುಮಕೂರಿನ ಮಾಧ್ಯಮ ಮಿತ್ರರರು ನಿರ್ವಹಣೆಗೆ ಮುಂದೆ ಬಂದಾಗ ನನಗೂ ನಿಜಕ್ಕೂ ಸಂತೋಷವಾಯಿತು.
ಇಷ್ಟು ಸಣ್ಣ ಕಾಮಗಾರಿಗೆ ಮುಖ್ಯ ಮಂತ್ರಿಗಳು ಒಪ್ಪಿಕೊಂಡರಾ? ಈ ಪ್ರೆಶ್ನೆ ಮೂಡುವುದು ಸರ್ವೇ ಸಾಮಾನ್ಯ. ಈ ಕಾಮಗಾರಿ ಎಷ್ಟು ಕೋಟಿ ಯೋಜನೆ ಎಂಬುದಕ್ಕಿಂತ, ಹೆರಿಟೇಜ್ ಮರಗಳನ್ನು ಸಂರಕ್ಷಣೆ ಮಾಡುವ ಕಾಮಗಾರಿಗೆ ಬೆಲೆ ಕಟ್ಟಲು ಸಾಧ್ಯವೇ? ಎಂಬ ಆಲೋಚನೆ ನಮ್ಮ ಕಾಮನ್ ಮ್ಯಾನ್ ಮುಖ್ಯಮಂತ್ರಿಯವರಿಗೆ, ಅವರ ಕಚೇರಿ ಸಿಬ್ಬಂದಿಗೆ, ಸಚಿವರಿಗೆ, ಸಂಸದರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಇರುವುÀರದರಿಂದ ಮುಖ್ಯ ಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ನನಗನಿಸುತ್ತಿದೆ.
‘ಮುಖ್ಯ ಮಂತ್ರಿಯವರು ಇಡೀ ರಾಜ್ಯದ ಜನತೆಗೆ/ಅಧಿಕಾರಿಗಳಿಗೆ, ರಾಜ್ಯದ ಸುಮಾರು 30000 ಗ್ರಾಮಗಳಲ್ಲಿ ಸರ್ವೇನಂಬರ್ ವಾರು 100 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮರಗಳ ಡಿಜಿಟಲ್ ಗಣತಿ ಮಾಡಿ, ಅವುಗಳನ್ನು ಸಂರಕ್ಷಣೆ ಮಾಡಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಲ್ಲಿ ಇತಿಹಾಸ ಸಹಿತ ಜಿಯೋಟ್ಯಾಗ್ ಮಾಡಲು ಮತ್ತು ಗ್ರೀನ್ ಆಡಿಟ್ ಮಾಡಿ ಮಾಹಿತಿ ಕಣಜದಲ್ಲೂ ಡಾಟಾ ಅಫ್ ಲೋಡ್ ಮಾಡಲು, ಒಂದು ಸ್ಪಷ್ಟ ಸಂದೇಶ ನೀಡುವ ವೇದಿಕೆ ಇದಾಗಲೂ ಬಹುದು.’
ಇದು ಒಂದು ಪ್ಯಾರೀಸ್ ಒಪ್ಪಂದದ ಪ್ರಮುಖ ಅಂಶವಲ್ಲವೇ, ಹೆರಿಟೇಜ್ ಮರಗಳನ್ನು ಸಂರಕ್ಷಣೆ ಮಾಡುವುದು ಒಂದು ಸಣ್ಣ ಕೆಲಸವೇ? ಮುಖ್ಯ ಮಂತ್ರಿಯವರು ಇಂಥಹ ಕೆಲಸವಲ್ಲದೆ ಇನ್ನೇನು ಮಾಡಬೇಕು?
ನಾನು ಸ್ಮಾರ್ಟ್ ಸಿಟಿ ಎಂಡಿ. ಶ್ರೀ ರಂಗಸ್ವಾಮಿಯವರಿಗೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜಕುಮಾರ್ ರವರಿಗೆ, ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ರೇಣುಕರವರಿಗೆ ಅರಣ್ಯ ಇಲಾಖೆಯ ಡಿಎಫ್‍ಓ ಶ್ರೀ ರಮೇಶ್ ರವರಿಗೆ ಒಳ್ಳೆಯ ನಾಮಫಲಕ ಮತ್ತು ಲೋಕಾರ್ಪಣೆ ಕಲ್ಲು ಹಾಕಿಸಿ, ಮರಗಳ ಸಂಖ್ಯೆ, ಆಯುಸ್ಸು, ಕಾಮಗಾರಿ ವಿವರ, ಸ್ವತ್ತಿನ ವಿವರ ಇರಲಿ.ಗೂಗಲ್ ನಕ್ಷೆಯಲ್ಲಿ ಗುರುತಿಸಿ, ಕಾಲೇಜಿನ ಮುಂಬಾಗ ಇರುವ ಅನಧಿಕೃತ ಅಂಗಡಿಗಳ ಬಗ್ಗೆ ನಿಯಾಮುನುಸಾರ ಸೂಕ್ತ ನಿರ್ಣಯ ಕೈಗೊಳ್ಳಿ ಮತ್ತು ಸ್ವಚ್ಚತೆ ಇರಲಿ ಎಂಬ ಸಲಹೆ ನೀಡಿದ್ದೇನೆ.
ತುಮಕೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳೊಂದಿಗೆ ನಿಮ್ಮ ಭವಿಷ್ಯದ ಪರಿಕಲ್ಪನಾ ವರದಿ ಬಗ್ಗೆ ಮುಖ್ಯ ಮಂತ್ರಿಯವರಿಗೆ ಮನವಿ ನೀಡಿ ಅಥವಾ ಒಂದೊಂದು ವಿಷಯದ ಬಗ್ಗೆ ಜಿಲ್ಲೆಯ ಪರಿಣಿತರೊಂದಿಗೆ ಸಮಾಲೋಚನೆ ಮಾಡಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳಿ.
ಇದೊಂದು ತುಮಕೂರು ಜಿಲ್ಲೆಯ ಅಭಿವೃದ್ಧಿ, ಕಲೆ, ಸಾಹಿತ್ಯ, ಇತಿಹಾಸ, ಪರಿಸರ, ಪರಂಪರೆ ಇತ್ಯಾದಿ ಮಾಹಿತಿ ಕಣಜವಾಗಲಿ. ಒಂದು ಜ್ಞಾನ ದೇಗುಲವಾಗಲಿ, ಗುಂಪುಗಾರಿಕೆ ಬಿಟ್ಟು ಎಲ್ಲಾ ಮಾಧ್ಯಮದವರು ನಗುಮೊಗದಿಂದ ಮುಖ್ಯ ಮಂತ್ರಿಯವರನ್ನು ಬರಮಾಡಿಕೊಳ್ಳಿ, ‘ನಮಗೆ ಮಾರ್ಗದರ್ಶಕವಾಗಿರಿ,’ ಎಂಬ ಬಗ್ಗೆ ಚರ್ಚೆ ನಡೆಸಿದ್ದೇನೆ, ಅವರ ಅಭಿಪ್ರಾಯ ಏನಿದಿಯೋ ಯಾರಿಗೆ ಗೊತ್ತು?
ಇಲ್ಲಿ ಮುಖ್ಯ ಮಂತ್ರಿಯವರು ಇನ್ನೊಂದು ಆಲದ ಗಿಡ ಹಾಕುವರಂತೆ, ಈ ಗಿಡದ ಸಂರಕ್ಷಣೆ ತುಮಕೂರು ಪ್ರೆಸ್ ಕ್ಲಬ್ ಪದಾಧಿಕಾರಿಗಳದ್ದು, ‘ಎಲ್ಲರನ್ನೂ ಟೀಕಿಸುವ ಮಾಧ್ಯಮದವರಿಗೆ ಇದೊಂದು ಒಳ್ಳೆಯ ಅನುಭವವಾಗಲಿದೆ.’
ಆಲದ ಮರಗಳ ಬೇರು ಭೂಮಿಯ ಒಳಕ್ಕೆ ಹೋಗಲು ಅವಕಾಶ ಬೇಡವೇ ಎಂಬ ಬಗ್ಗೆ ಮಾಹಿತಿ ನೀಡುವರು ಯಾರು? ಈ ಪ್ರೆಶ್ನೆ ನನಗಿದೆ.