22nd December 2024
Share

TUMAKURU:SHATKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕುಂದರನಹಳ್ಳಿ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಡಾಟಾ ವಿಲೇಜ್ ಮೌಲ್ಯಮಾಪನ ಮಾಡಲು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮುಂದಾಗಿದೆ.

ಸಂಸದರ ಆದರ್ಶ ಗ್ರಾಮ ಯೋಜನೆಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ನಾಯಕತ್ವದಲ್ಲಿಯೇ ನಡೆಯಬೇಕಿದೆ. ಈ ಬಗ್ಗೆ ಈಗಾಗಲೇ ಸಂಸದರ ಅಧ್ಯಕ್ಷತೆಯಲ್ಲಿ ದಿನಾಂಕ:08.05.2022 ರಂದು ಕುಂದರನಹಳ್ಳಿಯಲ್ಲಿ ಜನಜಾಗೃತಿ ಸಭೆ ನಡೆದಿದೆ.

ಡಾಟಾ ವಿಲೇಜ್ ಜಿಐಎಸ್ ಡಾಟಾ ಬೇಸ್ ಬಗ್ಗೆ ರಾಣಿಬೆನ್ನೂರಿನ ಶ್ರೀ ಬಸವರಾಜ್ ಸುರಣಗಿಯವರಿಂದ ಮತ್ತು ತುಮಕೂರಿನ ಶ್ರೀ ಸತ್ಯಾನಂದ್ ರವರಿಂದ ಮಾಡಿಸಲು ಆರಂಭಿಸಲಾಗಿದೆ. ಅವರು ಈಗಾಗಲೇ ಕುಂದರನಹಳ್ಳಿ ಗ್ರಾಮದ 449 ಎಕರೆ ಪ್ರದೇಶದ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.ಯಾರು ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಇವರಿಗೆ ಸರ್ಕಾರದಿಂದ ಸಲಹಾ ಶುಲ್ಕ ಮಂಜೂರು ಮಾಡಿಸ ಬೇಕೆ ಅಥವಾ ಎಕರೆವಾರು, ಕಟ್ಟಡವಾರು ಮಾಲೀಕರಿಂದಲೇ ಸಂಗ್ರಹ ಮಾಡಿಸಲು ಸರ್ಕಾರದಿಂದ ಅದೇಶ ಮಾಡಿಸ ಬೇಕೆ ಅಥವಾ ಸಂಸದರ ಅನುದಾನದಲ್ಲಿ ಡಾಟಾ ವಿಲೇಜ್ ಪುಸ್ತಕ ಮಾಡಲು ಅವಕಾಶವಿದೆಯೇ ಅಥವಾ ಸಿ.ಎಸ್.ಆರ್ ಫಂಡ್ ನೀಡಲು ಯಾರಾದರೂ ಮುಂದೆ ಬರುತ್ತಾರೆಯೇ ಎಂಬ ಬಗ್ಗೆಯೂ ಚಿಂತನೆ ಆರಂಭವಾಗಿದೆ.ಶೀಘ್ರದಲ್ಲಿ ಕುಂದರನಹಳ್ಳಿ ಗ್ರಾಮಸ್ತರ ಸಮ್ಮುಖದಲ್ಲಿ ಎಂ.ಓ.ಯು ಮಾಡಿಕೊಳ್ಳಲಾಗುವುದು.

ಕುಂದರನಹಳ್ಳಿ ಸರ್ವೆ ನಂಬರ್‍ವಾರು ಹದ್ಧು ಬಸು,್ತ ಬಾಂದುಗಳು, ಪಹಣೆ ಕಲ್ಲುಗಳಿಂದ ಆರಂಭಿಸಿ, ಜಮೀನಿನನಲ್ಲಿ ಇರುವ ಗಿಡ ಮರಗಳು ಸೇರಿದಂತೆ, ಕಟ್ಟಡಗಳು, ರಸ್ತೆಗಳು, ವಿದ್ಯುತ್ ಕಂಬಗಳು.ಟಿಸಿಗಳು, ಜಲಸಂಗ್ರಹಾಗಾರಗಳು, ಕರಾಬು ಹಳ್ಳ, ದಾರಿ ಹೀಗೆ ಪ್ರತಿಯೊಂದರ ಇತಿಹಾಸ ಸಹಿತ ಜೀಯೋ ಟ್ಯಾಗಿಂಗ್ ಮಾಡಬೇಕಿದೆ.

1947 ರಿಂದ ಅಥವಾ ದಾಖಲೆ ದೊರೆಯುವ ಸಮಯದಿಂದ ದಾಖಲೆಗಳ ಡಿಜಿಟಲೈಷನ್ ಮಾಡಬೇಕಿದೆ. ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿ, ಕುಟುಂಬವಾರು ಸರ್ಕಾರಿ ಸಾಮಾಜಿಕ ಭಧ್ರತೆ ಮಾಹಿತಿ, ವಿವಿಧ ಗಣತಿ ಮಾಹಿತಿ ಹೀಗೆÉ ಮೊದಲನೇ ಹಂತದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಮಾಹಿತಿಗಳ ಸಂಗ್ರಹ ಮಾಡಬೇಕಿದೆ.

ಮುಂದೆ ಕೈಗೊಳ್ಳಬಹುದಾದ ಯೋಜನೆ, ವೆಚ್ಚ, ಯಾವ ಇಲಾಖೆಯಿಂದ ಅನುದಾನ ಪಡೆಯಬಹುದು ಎಂಬ ಬಗ್ಗೆಯೂ ಮಾಹಿತಿ ಸಿದ್ಧವಾಗಲಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ 4 ಜಿ ರಿಯಾಯಿತಿ ಪಡೆಯಲು ಸರ್ಕಾರದೊಂದಿಗೆ ಮಾತುಕತೆ ಆರಂಭವಾಗಿದೆ.

  ನಿಖರವಾದ ಪಕ್ಕಾ ತಾಜಾ ಮಾಹಿತಿ ಇಲ್ಲವೋ ಅಂತಹ ಮಾಹಿತಿಗಳನ್ನು ಆಯಾ ಇಲಾಖೆಯಡಿಯಲ್ಲಿ ಮಾಡಿಸಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ಮಾಹಿತಿ ಕಣಜಕ್ಕೆ ಆಯಾ ಇಲಾಖಾ ಅಧಿಕಾರಿಗಳಿಂದಲೇ ಅಫ್ ಲೋಡ್ ಮಾಡಿಸ ಬೇಕಿದೆ.

ಆಸ್ತಿ ದಾಖಲೆಗಳ ತೊಂದರೆ ಇರುವವರು ಅವರ ಸಂಕಟವನ್ನು ಹೇಳಲು ಆರಂಭಿಸಿದ್ದಾರೆ. ಕುಂದರನಹಳ್ಳಿಯಲ್ಲಿರುವ ಎಲ್ಲಾ 16 ಮನೆತನದ ಪ್ರತಿ ನಿಧಿಗಳು ಮತ್ತು ಕಾಲೋನಿಗಳ ಪ್ರತಿನಿಧಿಗಳ ವಿಷನ್ ಗ್ರೂಪ್ ರಚಿಸಲು ಆರಂಭಿಸಲಾಗಿದೆ.

ವಿವಿಧ ಸಮಸ್ಯೆಗಳ ಬಗ್ಗೆ ಕಾನೂನು ಅರಿವು ಮೂಡಿಸಲು ವಕೀಲರ ವಿಷನ್ ಗ್ರೂಪ್ ರಚಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕೆಲವು ಖ್ಯಾತ ವಕೀಲರೊಂದಿಗೂ ಚರ್ಚೆ ನಡೆಸಲಾಗಿದೆ. ಕುಂದರನಹಳ್ಳಿಯವರೇ ಒಬ್ಬರು ನ್ಯಾಯಾದೀಶರಾಗಿದ್ದಾರೆ, ಅವರ ಸಹಕಾರ ಪಡೆಯಲು ಯೋಚಿಸಲಾಗಿದೆ.

ಶೀಘ್ರದಲ್ಲಿ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ್ ರವರಿಗೆ ಮತ್ತು ಯೋಜನಾ ಇಲಾಖೆ ಸಚಿವರಾದ ಶ್ರೀ ಮುನಿರತ್ನರವರಿಗೆ ಪರಿಕಲ್ಪನೆ ವರದಿ ಸಲ್ಲಿಸಿ ಕುಂದರನಹಳ್ಳಿಯಲ್ಲಿ ಗ್ರಾಮ ವಾಸ್ತಾವ್ಯ ಮಾಡಲು ಮನವಿ ಮಾಡಲಾಗುವುದು.

ಬಹಿರಂಗ ಘೋಷಣೆ

ಶಕ್ತಿಪೀಠ ಪೌಂಡೇಷನ್ ಜನಜಾಗೃತಿ ಸಭೆಯಲ್ಲಿ ನಾನಂತೂ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಮ್ಮೂರಿನ ಗ್ರಾಮಸ್ಥರ ಮುಂದೆಯೇ ಬಹಿರಂಗವಾಗಿ ಘೋಷಣೆ ಮಾಡಿದ್ದೇನೆ. ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಗ್ರಾಮದ ಯಾರೊಬ್ಬರ ಮೇಲೂ ದ್ವೇಷ ಸಾಧಿಸುವುದಿಲ್ಲ. ಯಾರಿಗೂ ಕೆಡುಕು ಬಯಸುವುದಿಲ್ಲಾ, ಒಂದು ವೇಳೆ ನೀವೇ ಬೈದರೂ ಮೌನವೇ ನನ್ನ ಉತ್ತರ.

ಇದೂವರೆಗೂ ಯಾರಿಗಾದರೂ ನನ್ನಿಂದ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವೆ, ಅಷ್ಟೆ ಅಲ್ಲ ಬಹಳ ಜನರಿಗೆ ಜಮೀನು, ಕಟ್ಟಡ, ನಿವೇಶನ, ಅದಲು ಬದಲು ಸಮಸ್ಯೆಗಳಿವೆ, ಕಾನೂನಿನ ಚೌಕಟ್ಟಿನಡಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಮುಂದೆ ತಂದಾದರೂ ಬಗೆಹರಿÀಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದೇನೆ.

ಪ್ರತಿಯೊಂದು ವ್ಯವಹಾರವೂ ಪಾರದರ್ಶಕವಾಗಿರಲಿದೆ. ಕಲ್ಬುರ್ಗಿಯ ಆರ್ಥಿಕ ತಜ್ಞರೊಬ್ಬರೂ ಇಂಗ್ಲೀಷ್ ಗೆ ಬಾಷಾಂತರ ಮಾಡಿ ಎಲ್ಲ ಪ್ರಕ್ರೀಯೆಗಳನ್ನು ದೇಶದ ಪ್ರಧಾನ ಮಂತ್ರಿಯವರಿಗೆ ರವಾನಿಸಲು ಮುಂದೆ ಬಂದಿದ್ದಾರೆ.

ಸಂಸದರ ಆದರ್ಶ ಗ್ರಾಮ ಪೋರ್ಟಲ್ ಗೆ  ಅಫ್ ಲೋಡ್ ಮಾಡಲು, ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್ ಮತ್ತು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಪಿಡಿಒ ಗಳಿಗೆ ಸಂಸದರು ಸೂಚಿಸಿಲಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಸಭೆ ಆಯೋಜಿಸ ಬೇಕಿದೆ.

ರಾಜ್ಯ ಸರ್ಕಾರದ ಮಾಹಿತಿ ಕಣಜ ಮತ್ತು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಾಗಿದೆ.

ತಮ್ಮ ಸಲಹೆಗಳಿಗಾಗಿ ಮನವಿ ಮಾಡಲಾಗಿದೆ.

ರಾಜ್ಯದ ಯಾವುದೇ ಗ್ರಾಮದ ತಂಡ ಅವರ ಗ್ರಾಮವನ್ನು ಡಾಟಾ ವಿಲೇಜ್ ಮಾಡಲು ಮುಂದೆ ಬಂದಲ್ಲಿ ಸಲಹೆ ಸಹಕಾರ ನೀಡಲಾಗುವುದು.