22nd December 2024
Share

 

TUMAKURU:SHAKTHIPEETA FOUNDATION

2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆಯಾದ ನಂತg, ಮೊಟ್ಟ ಮೊದಲು ಹೋರಾಟ ತುಮಕೂರು ನಗರದ ಉಧ್ಯಾನವನಗಳ ಸಂರಕ್ಷಣೆ ಮತ್ತು ಅಭಿವೃದ್ಧಿ. ಅಂದಿನ ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಸಾಥ್ ನೀಡಿದ್ದರು. ಈಗಲೂ ಸಾಥ್ ನೀಡುತ್ತಿದ್ದಾರೆ.

ನಮ್ಮ ಪ್ರಥಮ ಸಭೆ ಮಾರುತಿ ನಗರದ ದಿ.ಪ್ರಹ್ಲಾದ್ ರಾವ್ ರವರ ಪಾರ್ಕ್ ನಿಂದ ಆರಂಭವಾಗಿದ್ದು ಇತಿಹಾಸ. ಇಲ್ಲಿಯವರೆಗೂ ನಗರದ ಉಧ್ಯಾನವನಗಳ ಶೇ 100 ರಷ್ಟು ಜಿಐಎಸ್ ಲೇಯರ್ ಮಾಡಲು ಸಾಧ್ಯಾವಾಗಿಲ್ಲ, ಎಲ್ಲಾ ಉಧ್ಯಾನವನಗಳಿಗೂ ಕಡೇ ಪಕ್ಷ ಮುಳ್ಳುತಂತಿ ಹಾಕಿ ಗಿಡ ಹಾಕಲು ಆಗಿಲ್ಲ ಎಂದರೆನಮ್ಮ ಫೋರಂ ಸೋಲು ಕಂಡಿದೆ ಎಂಬ ಭಾವನೆ ನನ್ನದು. ಇದರಲ್ಲಿ ಎರಡು ಮಾತಿಲ್ಲ.

ಟೂಡಾ ಆಢಳಿತಾಧಿಕಾರಿಯಾಗಿದ್ದ ಹಿಂದಿನ ಜಿಲ್ಲಾಧಿಕಾರಿ ಶ್ರೀ ಉಮಾಶಂಕರ್ ರವರು ಸುಮಾರು ರೂ 75000 ಹಣ ಮೀಸಲಿಟ್ಟು, ನಗರದ ಉಧ್ಯಾನವನಗಳ ಪಟ್ಟಿ ಮಾಡಿ ನೋಟಿಫೀಕೇಷನ್ ಮಾಡಲು ಚಾಲನೆ ನೀಡಿದ್ದು ಇತಿಹಾಸ. ಟೂಡಾ ಆಯುಕ್ತರಾಗಿದ್ದ ಶ್ರೀ ಆದರ್ಶಕುಮಾರ್ ರವರು ನೋಟಿಫೀಕೇಷನ್ ಮಾಡುವ ಮೂಲಕ ನನ್ನ ಕನಸಿಗೆ ಸ್ಪಂಧಿಸಿದ್ದೂ ಇತಿಹಾಸ.

ಆದರೇ ಹಸಿರು ಮೋಸ ಮಾಡಿದ ಕೀರ್ತಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶ್ರೀ ಷರೀಫ್ ರವರು ಮತ್ತು ಈಗಿನ ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರಾದ ಶ್ರೀ ರಂಗಸ್ವಾಮಿಯವರಿಗೆ ಸಲ್ಲ ಬೇಕು. ನಾನು ಇವರಿಬ್ಬರಿಗೂ ಗ್ರೀನ್ ತುಮಕೂರುಕೂಲ್ ತುಮಕೂರು ಯೋಜನೆಗೆ ಒತ್ತು ನೀಡಿ ಎಂದು ಸ್ಮಾರ್ಟ್ ಸಿಟಿ ಆರಂಭದಲ್ಲಿಯೇ ಮನವಿ ಮಾಡಿದ್ದೆ, ಸ್ಪಂಧಿಸುವ ನಾಟಕ ಆಡಿದ ಕೀರ್ತಿ ಇವರಿಬ್ಬರಿಗೆ ಸಲ್ಲುತ್ತದೆ.

ಈಗಿನ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರಿಗೆ ನಾನು ಆರಂಭದಲ್ಲಿ ಮೂರು ಮನವಿ ಮಾಡಿದ್ದೆ. ವಸತಿ ಮತ್ತು ಮನೆ ಇಲ್ಲದವರಿಗೆ ಮನೆ, ಜಿಐಎಸ್ ಲೇಯರ್ ಮತ್ತು ಹಸಿರು ತುಮಕೂರು3  ಯೋಜನೆಯಡಿ ನಗರದ ತುಂಬ ಗಿಡ ಹಾಕುವುದಾಗಿತ್ತು. ಪ್ರಗತಿ ಬಗ್ಗೆ ಅವರೇ ಆತ್ಮಾವಾಲೋಕನ ಮಾಡಿಕೊಳ್ಳಬೇಕು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಹಲವಾರು ಭಾರಿ ಸಭೆ ನಡವಳಿಕೆ ಆಗಿದೆ. ಅಧ್ಯಕ್ಷರಾಗಿರುವ ತಾವು ನನ್ನ ಮನವಿ ಪರ ಹಲವಾರು ಭಾರಿ ಬ್ಯಾಟಿಂಗ್ ಮಾಡಿದ್ದೀರಿ. ಆದರೇ ಪಾಲಿಕೆ ಆಯಕ್ತರಾದ ರೇಣುಕರವರು, ಟೂಡಾ ಆಯುಕ್ತರಾದ ಶ್ರೀ ಯೋಗಾನಂದ್ ರವರು ಮತ್ತು ಸ್ಮಾರ್ಟ್ ಸಿಟಿ ಎಂಡಿಯವರಾದ ರಂಗಸ್ವಾಮಿರವರು, ಇನ್ನೂ ಹಸಿರು ನಾಟಕ ವಾಡುತ್ತಿದ್ದಾರೆ ಸಾರ್. ಇನ್ನೂ ಎಷ್ಟು ಹಸಿರು ಜಗಳ ಮಾಡ ಬೇಕು ಸಾರ್.

ಬಿಎಂಸಿ ಸಮಿತಿ ಸಭೆಯಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ  ಮುಂದಿನ ವಿಶ್ವ ಪರಿಸರ ದಿನದ ಒಳಗೆ ಶೇ 100 ರಷ್ಟು ಉಧ್ಯಾನವನಗಳ ಜಿಐಎಸ್ ಲೇಯರ್ ಮಾಡಿದರೆ ಪಾಲಿಕೆ ಆಯುಕ್ತರಿಗೆ ನಾಗರೀಕ ಸನ್ಮಾನ, ಮಾಡದೇ ಇದ್ದರೆ ಅವÀಮಾನ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದೇನೆ.

ತುಮಕೂರು ಪ್ರೆಸ್ ಕ್ಲಬ್ ರವರಿಗೆ ಆಲದ ಮರದ ಪಾರ್ಕ್ ಹಸ್ತಾಂತರ ಮಾಡುವ ಸಭೆಯಲ್ಲಿ ನಾಡಿನ ದೊರೆ, ಶ್ರೀ ಬಸವರಾಜ್ ಬೊಮ್ಮಾಯಿರವರು ಸಹ ಉಧ್ಯಾನವನಗಳ ಸಂರಕ್ಷಣೆಗೆ ನಾಗರೀಕರ ಸಹಕಾರದ ಬಗ್ಗೆ ಘೋಷಣೆ ಮಾಡಿದ್ದಾರೆ’.

ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಬಹಿರಂಗವಾಗಿ 100 ದಿವಸದಲ್ಲಿ ಉಧ್ಯಾನವನಗಳ ಬಗ್ಗೆ ಒಂದು ಅಂತಿಮ ನಿರ್ಧಾgದ ಪುಸ್ತಕ ಬಿಡುಗಡೆ ಮಾಡುವುದಾಗಿ, ಮಾನ್ಯ ಮುಖ್ಯ ಮಂತ್ರಿಯವರ ಸಮ್ಮುಖದಲ್ಲಿ, ತಮ್ಮ ಉಪಸ್ಥಿತಿಯಲ್ಲಿ ಬಹಿರಂಗವಾಗಿ ಪ್ರಕಟಿಸಿದ್ದೇನೆ.

ಘೋಷಣೆ ಮಾಡಿದ ನಂತರ ಈಗಾಗಲೇ ಮೂರನೇ ದಿವಸಕ್ಕೆ ಕಾಲಿಟ್ಟಿದ್ದೇವೆ. ಇನ್ನು ಬಾಕಿ ಇರುವುದು 97 ದಿನಗಳು ಮಾತ್ರ. ನಾನು ಪಾಲಿಕೆ ಆಯಕ್ತರಾದ ರೇಣುಕರವರು, ಟೂಡಾ ಆಯುಕ್ತರಾದ ಶ್ರೀ ಯೋಗಾನಂದ್ ರವರು ಮತ್ತು ಸ್ಮಾರ್ಟ್ ಸಿಟಿ ಎಂಡಿಯವರಾದ ರಂಗಸ್ವಾಮಿರವರ ಬಳಿ ನಿನ್ನೆ ಮತ್ತೊಮ್ಮೆ ಸಮಾಲೊಚನೆ ನಡೆಸಿ ಹಸಿರು ಭಿಕ್ಷೆ ಬೇಡಿದ್ದೇನೆ.

ಗುಜರಾತ್‍ನ ಅಹಮದಾಬಾದ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರಿನವರೇ ಆದ ಪರಿಸರ ತಜ್ಞ ಶ್ರೀ ಡಾ.ಡಿ.ಜೆ ಮೋಹನ್ ರವರು ಆಲದ ಮರದ ಪಾರ್ಕ್ ಸಮಾರಂಭದಲ್ಲಿ ನನ್ನ ಸೇವೆ ತುಮಕೂರು ನಗರಕ್ಕೆ ಬೇಡವಾ ಸಾರ್ ಎಂದು ನನಗೆ ಛೇಡಿಸಿದರು.

ನಾನು ಅವರಿಗೆ

  1. ಉಧ್ಯಾನವನಗಳ ಜಿಐಎಸ್ ಲೇಯರ್.
  2. ಲೇ – ಔಟ್ ಆದ ಸರ್ವೇ ನಂಬರ್ ವಾರು ದಾಖಲೆಯಲ್ಲಿ ಇರುವ ಉಧ್ಯಾನವನಗಳ ಪಟ್ಟಿ,
  3. ಫಿಸಿಕಲ್ ಆಗಿ ದೊರೆತಿರುವ ಉಧ್ಯಾನವನಗಳ ಪಟ್ಟಿ,
  4. ನಾಪತ್ತೆಯಾಗಿರುವ ಉಧ್ಯಾನವನಗಳ ಪಟ್ಟಿ,
  5. ನಾಗರೀಕ ಸಂಘ ಸಂಸ್ಥೆಗಳು, ಕುಟುಂಬಗಳು, ವ್ಯಕ್ತಿಗಳು ನಿರ್ವಹಣೆ ಮಾಡುತ್ತಿರುವ ಪಟ್ಟಿ,
  6. ಗಿಡ ಮತ್ತು ಮುಳ್ಳು ತಂತಿ ಹಾಕಬೇಕಾಗಿರುವ ಉಧ್ಯಾನವನಗಳ ಪಟ್ಟಿ.
  7. ಉಧ್ಯಾನವನಗಳ ನಿರ್ವಹಣೆಗೆ ಆಸಕ್ತಿ ಹೊದಿರುವವರ ಪಟ್ಟಿ.
  8. ಅಭಿವೃದ್ಧಿ ಹೊಂದಿರುವ ಉಧ್ಯಾನವನಗಳ ಪಟ್ಟಿ.
  9. ಅಪೂರ್ಣ ಅಭಿವೃದ್ಧಿ ಹೊಂದಿರುವ ಉಧ್ಯಾನವನಗಳ ಪಟ್ಟಿ.

 ಬಗ್ಗೆ ಒಂದು ವರದಿ ನೀಡುವಿರಾ ಎಂದು ಮನವಿ ಮಾಡಿದಾಗ, ಅವರು ಸಹ ನಗುಮೊಗದಿಂದ ಒಪ್ಪಿದ್ದಾರೆ. ಪರಿಸರ ತಜ್ಞರಾದ ಶ್ರೀ ಎಂ.ಎಸ್.ರುದ್ರಮೂರ್ತಿ ರವg, ಶ್ರೀ ಟಿ.ವಿ.ಎನ್. ಮೂರ್ತಿರವರÀ ಮತ್ತು ಆಸಕ್ತ ಸಂಘಸಂಸ್ಥೆಗಳ ಸಹಕಾರ ಪಡೆಯಲು ಚರ್ಚೆ ಮಾಡಿದ್ದೇವೆ. ಒಂದು ವಾರ ಗುಜರಾತ್ ಪ್ರೋಗ್ರಾಂ ಮುಂದೂಡುವುದಾಗಿ ಅವರು ತಿಳಿಸಿದ್ದಾರೆ.

ದಿನಾಂಕ:17.05.2022 ರಂದು ನಾನು, ಶ್ರೀ ಸತ್ಯಾನಂದ್, ಶ್ರೀ ಶಿವಪ್ರಸಾದ್, ಶ್ರೀ ಶಿವಕುಮಾರ್ ರವರು ತುಮಕೂರು ನಗರದ ಮಹಾತ್ಮ ಗಾಂಧಿ ಸ್ಟೇಡಿಯಂಗೆ ಭೇಟಿ ನೀಡಿದ್ದೇವು. ಅಲ್ಲಿ ‘ಸುತ್ತಲೂ ಔಷಧಿ ಗಿಡ ಹಾಕಲು ಹೇಳಿ ಮಾಡಿಸಿದ ಸ್ಥಳ ಸಿಂಗಾರ ಗೊಂಡಿದೆ’ ಸಾರ್.

ಅಧಿಕಾರಿಗಳನ್ನು ಕರೆದು ಮಾತನಾಡಿದೆವು. ಹಾಳು ಗಿಡ ಹಾಕಬೇಡಿ, ಇಲ್ಲಿ ಔಷಧಿ ಗಿಡ ಹಾಕಿ, ಯಾರಿಗಾದರೂ ನಿರ್ವಹಣೆಗೆ ನಿಡೋಣ, ಶಾಸಕರು, ಸಂಸzರು ಮತ್ತು ತಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಬಂದಿದ್ದೇನೆ.

ಈಗಾಗಲೇ ಹಲವಾರು ಜನರ ಬಳಿ ಚರ್ಚೆ ಮಾಡಿದ್ದೇನೆ, ನಿರ್ವಹಣೆ ಹೊಣೆಹೊರಲು ಕೆಲವರು ಮುಂದೆ ಬಂದಿದ್ದಾರೆ. ಮೊದಲು ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ಎಂದು ನಾನು ಅವರಿಗೆ ಹೇಳಿದ್ದೇನೆ. ಇಲ್ಲಿ ‘ಉಧ್ಯಾನ ವನಕ್ಕೊಂದು ಜಾತಿಯ ಔಷಧಿ ಗಿಡ ಹಾಕಿಸಿ, ಇಲ್ಲೇ ಸಮಾರಂಭ ಮಾಡಬಹುದು’ ಸಾರ್.

ಜಿಲ್ಲಾಧಿಕಾರಿಯವರಾದ ತಮಗೆ  ನನ್ನ ಬಹಿರಂಗ ಮನವಿ, ಸಾರ್ ನೂರು ದಿವಸದಲ್ಲಿ ನಗರದ ಎಲ್ಲಾ ಉಧ್ಯಾನವನಗಳ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಒಂದು ರೂಪುರೇಷೆ ನಿರ್ಧರಿಸಿ, ಒಂದು ಪುಸ್ತಕ ಹೊರತಂದು, ಸುಮಾರು 530 ಕ್ಕೂ ಹೆಚ್ಚು ಉಧ್ಯಾನವನಗಳ ಮಿತ್ರರ ಒಂದು ಸಮಾವೇಶ ಮಾಡಿ, ಅವರೆಲ್ಲರಿಗೆ ನಿರ್ವಹಣೆ ಪತ್ರವನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಂದಲೇ ಕೋಡಿಸೋಣ ಸಾರ್.

ನಮ್ಮ 21 ವರ್ಷಗಳ ಹೋರಾಟಕ್ಕೆ ಅಂತಿಮ ವಿರಾಮ ಹಾಕಿ ಸಾರ್, ಇದು ನಿಮ್ಮಿಂದ ಮಾತ್ರ ಸಾಧ್ಯ. ಸಂಸದರು ಮತ್ತು ಶಾಸಕರು ಇಬ್ಬರ ಕನಸಿಗೆ ಒಂದು ದಿಟ್ಟ ನಿರ್ಧಾರ ಆಗಲೇ ಬೇಕು ಸಾರ್. ನಾನು ಈಗಾಗಲೇ ಪ್ರಕಟಿಸಿರುವಂತೆ ಮುಂದಿನ ವಿಶ್ವ ಪರಿಸರ ದಿವಸದ ಸನ್ಮಾನ ಅಥವಾ ಅವಮಾನ. ಪಲಿತಾಂಶ ಕಾದು ನೋಡ ಬೇಕಿದೆ ಸಾರ್.

ನಾಗರೀಕರು ಕೈಜೋಡಿಸಲು ಮನವಿ.