12th April 2024
Share

TUMAKURU:SHAKTHIPEETA FOUNDATION

ತುಮಕೂರು ಮಹಾನUರÀ ಪಾಲಿಕೆಯಲ್ಲಿ ರಚಿತವಾಗಿರುವ ಜೀವ ವೈವಿಧ್ಯ ನಿರ್ವಹಣಾ ಸಮಿತಿ ದೇಶದಲ್ಲಿಯೇ ಆಕ್ಟೀವ್ ಆಗಿದೆ ಎಂದರೆ ತಪ್ಪಾಗಲಾರದು. ಇಲ್ಲಿನ ಸಮಿತಿಯ ಸದಸ್ಯಕಾರ್ಯದರ್ಶಿ ಶ್ರೀಮತಿ ರೇಣುಕರವರು ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.

ನನಗೆ ತಿಳಿದಿರುವ ಪ್ರಕಾರ ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 330 ಗ್ರಾಮಪಂಚಾಯಿತಿಗಳಲ್ಲಿ, 11 ನಗರ ಸ್ಥಳೀಯ ಸಂಸ್ಥೆಗಳ್ಲಿ, 10 ತಾಲ್ಲೋಕು ಪಂಚಾಯಿತಿಗಳಲ್ಲಿ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಒಂದು ಜೀವ ವೈವಧ್ಯ ಸಮಿತಿ ಇದೆ ಎಂಬ ಭಾವನೆ ನನ್ನದಾಗಿದೆ. ಇವುಗಳು ಕೇಂದ್ರ ಸರ್ಕಾರದ ಕಾನೂನು ಬದ್ಧ ಸಮಿತಿಗಳು. ಇಡೀ ದೇಶದಲ್ಲಿ ಈ ರೀತಿ ಸಮಿತಿಗಳು ರಚನೆಯಾಗಿವೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಈ ಸಮಿತಿಗಳ ಬಗ್ಗೆ ಚರ್ಚೆ ನಡೆಸಿ ಚುರುಕುಗೊಳಿಸಲು ಸಲಹೆ ನೀಡಿದ್ದರೂ, ತುಮಕೂರು ಮಹಾನUರÀ ಪಾಲಿಕೆಯಲ್ಲಿ ಬಿಟ್ಟರೆ ಇದೂವರೆಗೂ ಯಾವುದೇ ಒಂದು ಸಮಿತಿ ಸಭೆ ನಡೆದ ಉದಾಹರಣೆ ತಿಳಿದಿಲ್ಲ. ಯಾವುದಾದರೂ  ಸಮಿತಿ ಆಕ್ಟೀವ್ ಆಗಿದ್ದಲ್ಲಿ ತಿಳಿಸಿದರೆ ಅವರಿಗೆ ನನ್ನ ಧನ್ಯವಾದಗಳು.

ತುಮಕೂರು ನಗರದ ಉಧ್ಯಾನವನಗಳು ಮತ್ತು ಹಸಿರು ತುಮಕೂರು   ಮೌಲ್ಯಮಾಪನ ವರದಿ ತಯಾರಿಸಲು ದಿನಾಂಕ:21.05.2022 ರಂದು ನಡೆಯುವ ಸಭೆ ಮಹತ್ವದ್ದಾಗಿದೆ. ಈ ಸಮಿತಿ ಸಭೆಯ ಮಾರ್ಗದರ್ಶನದಂತೆ ಉಳಿದ ಜಿಲ್ಲೆಯಲ್ಲಿನ ಸಭೆಗಳು ಕಾರ್ಯ ಪ್ರವೃತ್ತರಾಗಲು ಬಹಿರಂಗ ಮನವಿ.

 ಆಸಕ್ತ ಸಾರ್ವಜನಿಕರು, ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರು, ಜ್ಞಾನಿಗಳು, ಪರಿಣಿತರು, ಮುಂದೆ ಬಂದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಲೋಕಸಭಾ ವ್ಯಾಪ್ತಿಯ ವಿವಿಧ ಸಮಿತಿಗಳಲ್ಲಿ ಅವರನ್ನು ಸದಸ್ಯರನ್ನಾಗಿ ನೇಮಿಸಿ ಕಾರ್ಯ ನಿರ್ವಹಿಸಲು ಸಹಕಾರ ನೀಡುವರು.

ನಾನು ನನ್ನ ಹೂಟ್ಟೂರಿನ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ  ಗ್ರಾಮಪಂಚಾಯಿತಿ ಪಿಡಿಓ ಶ್ರೀಮತಿ ತನುಜ ರವರಿಗೆ, ಈ ಸಮಿತಿ ಆಕ್ಟೀವ್ ಮಾಡಲು ಸಲಹೆ ನೀಡಿದ್ದೆ. ಊರಿಗೊಂದು ಪವಿತ್ರವ£, ಊರಿಗೊಂದು ಕೆರೆ ಕೆರೆಗೆ ನದಿ ನೀರು, ಊರಿಗೊಂದು ಪುಸ್ತಕದ ಬಗ್ಗೆ ಚರ್ಚೆ ಮಾಡಲು ಹೇಳಿದ್ದೆ. ಅವರು ವಿಶೇಷ ಆಸಕ್ತಿ ವಹಿಸಿ ಸಭೆ ಕರೆದಿದ್ದರು. ನನಗೂ ಮೌಖಿಕವಾಗಿ ಆಹ್ವಾನ ನೀಡಿದ್ದರು. ನಾನೂ ಮೌಖಿಕ ಆಹ್ವಾನದ ಯಾವುದೇ ಸರ್ಕಾರಿ ಸಮಿತಿಗಳಿಗೆ ಬರುವುದಿಲಾ,್ಲ ಲಿಖಿತವಾಗಿ ಆಹ್ವಾನ ನೀಡಿದರೆ ಮಾತ್ರ ಬರುವೆ ಎಂದು ಹೇಳಬೇಕಾಯಿತು.

 ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಗ್ರಾಮಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಚಿಂತನೆ ನಡೆಸಿದ್ದೇನೆ.