22nd December 2024
Share

TUMAKURU:SHAKTHIPEETA FOUNDATION

ಬರದನಾಡು ಚಿತ್ರದುರ್ಗ ಜಿಲ್ಲೆಯ, ಬಗ್ಗನಡು ಕಾವಲ್ ನಲ್ಲಿರುವ ಶಕ್ತಿಪೀಠ ಕ್ಯಾಂಪಸ್‍ನಲ್ಲಿನ ಕೃತಕ ಹಿಂದೂ ಮಹಾಸಾಗರ, ಅರಬ್ಭಿ ಸಮುದ್ರ ಮತ್ತು ಬಂಗಾಳಕೊಲ್ಲಿ ಸಮುದ್ರಗಳು, ನಿರ್ಮಾಣ ಮಾಡಿದ ನಂತರ ಸತತವಾಗಿ ನಾಲ್ಕು ವರ್ಷವೂ ಕೋಡಿ ಬಿದ್ದಿದೆ ಹೇಳಲು ಸಂತೋಷವಾಗುತ್ತದೆ.

ಇಲ್ಲಿ ಸಮಾರು ಒಂದು ಕೋಟಿ ಅರವತ್ತೆಂಟು ಲಕ್ಷ ಲೀಟರ್ ಮಳೆ ಕೊಯ್ಲು ನೀರು ಸಂಗ್ರಹವಾಗಲಿದೆಯಂತೆ. ನಾನು ಈ ಕಾಮಗಾರಿ ಆರಂಭಿಸಿದಾಗ ಇವನೊಬ್ಬ ಹುಚ್ಚ ಬಂದು ಇಲ್ಲಿ ಸ್ವಂತ ಜಮೀನಿನಲ್ಲಿ ಗುಂಡಿ ಮಾಡುತ್ತಿದ್ದಾನೆ, ಇಷ್ಟು ದೊಡ್ಡ ಗುಂಡಿಗೆ ನೀರು ಎಲ್ಲಿ ಬರುತ್ತೆ ಎಂದು ನಗುತ್ತಿದವರು ಈಗ ನೋಡಿ ಖುಷಿ ಪಡುತ್ತಿರಬಹುದು.

ಇದೇ ನನ್ನ ಕನಸಿನ ಶಕ್ತಿಪೀಠ ಕ್ಯಾಂಪಸ್‍ನ ಮೊದಲ ಗಂಗಾಮಾತೆ ದೇವಾಲಯ. ನಾನು ಹಾಕಿರುವ ಗಿಡಗಳೂ ಆನಂದವಾಗಿ ಬೆಳೆಯುತ್ತಿವೆ.ಕಟ್ಟಡ ಮಾತ್ರ ನಾನು ಮೇಲೆ ಹೇಳುವುದಿಲ್ಲ ಎಂದು ಹಠ ಮಾಡಿರುವ ಹಾಗೆ ಕಾಣುತ್ತಿದೆ. ನೋಡೋಣ ಶಕ್ತಿದೇವತೆ ಯಾವಾಗ ಮನಸ್ಸು ಮಾಡುವರು.