22nd December 2024
Share

TUMAKURU:SHAKTHIPEETA FOUNDATION

ನಾನೊಬ್ಬ ರೈತನಾಗಿದ್ದರೂ ಕಳೆದ 1997 ರಿಂದ ಈವರೆಗೂ, ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ ವಿಶೇಷ ಗಮನ ಹರಿಸಿದ್ದೇನೆ. ನನಗೆ ಪ್ರೇರಣೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು.

ಈಗ ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮುಕ್ತ ಡಾಟಾ ಪಾಲಿಸಿ ಜಾರಿಗೆ ತಂದಿದ್ದರೂ, ನಮ್ಮ ರಾಜ್ಯದ ಕೆಲವು ಅಧಿಕಾರಿಗಳು ರಿಯಲ್ ಟೈಮ್, ಪಕ್ಕಾ ಡಾಟಾ ಘೋಶಿಸಲು ಹಿಂದೆ ಬಿದ್ದಿದ್ದಾರೆ ಎಂದರೆ ತಪ್ಪಾಗಲಾರದು.

ವಿಶ್ವದ 108 ಶಕ್ತಿಪೀಠಗಳ ನೇತೃತ್ವದಲ್ಲಿ ಶಕ್ತಿಪೀಠ ಫೌಂಡೇಷನ್ ವಾಟರ್ ಡಾಟಾ ಸಂಗ್ರಹ ಮಾಡಲು ಹರಸಾಹಸ ಮಾಡುತ್ತಿದೆ.

ಈ ಬಗ್ಗೆ ಬರೆದ ಪತ್ರದ ವಿವರ

ಕ್ರಮಾಂಕ:ಶಪೀ/ವಾಟರ್ ಡಾಟಾ/1/2022                   ದಿನಾಂಕ: 21.05.2022

ಗೆ.

ಶ್ರೀ ರಾಕೇಶ್ ಸಿಂಗ್ ರವರು

ಅಪರಮುಖ್ಯ ಕಾರ್ಯದರ್ಶಿಯವರು

ಜಲಸಂಪನ್ಮೂಲ ಇಲಾಖೆ. ವಿಕಾಸ ಸೌಧ

ಕರ್ನಾಟಕ ಸರ್ಕಾರ, ಬೆಂಗಳೂರು

ಮಾನ್ಯರೇ

ವಿಷಯ:ಡಾಟಾ ಸಂಗ್ರಹ ಮಾಡಲು ನಿಯಾಮುನುಸಾರ ಅದೇಶ ನೀಡುವ ಬಗ್ಗೆ

ನಮ್ಮ ಸಂಸ್ಥೆಯು

  1. ವಾಟರ್ ಮ್ಯೂಸಿಯಂ, (ವಿಜೆಎನ್‍ಎಲ್ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆಜಿಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಗ್ಗನಡು ಕಾವಲ್‍ನಲ್ಲಿ)
  2. ವಾಟರ್ ಡಾಟಾ ಸೆಂಟರ್,(ತುಮಕೂರು ಜಿಲ್ಲೆಯ ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್‍ನಲ್ಲಿ)
  3. ವಾಟರ್ ಡಿಜಿಟಲ್ ಲೈಬ್ರರಿ, (ಬೆಂಗಳೂರಿನಲ್ಲಿ)
  4. ವಾಟರ್ ಲೈಬ್ರರಿ
  5. ವಾಟರ್ ಯೂನಿವರ್ಸಿಟಿ
  6. ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಗಳ ಅನುಷ್ಠಾನಕ್ಕೆ  ಕೇಂದ್ರ ಸರ್ಕಾರದಿಂದ, ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ಯೋಜನಾ ಇಲಾಖೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಸ್ಟ್ರಾಟಜಿ. 
  7. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕೇಂದ್ರ ಜಲಶಕ್ತಿ ಸಚಿವಾಲಯದ ಯೋಜನೆಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಡಿಯಲ್ಲಿ ಅನುಷ್ಠಾನ ಗೊಳಿಸುತ್ತಿರುವ, ಅನುಷ್ಠಾನ ಗೊಳ್ಳಬೇಕಿರುವ ಯೋಜನೆಗಳ ಮೌಲ್ಯಮಾಪನ ವರದಿ.
  8. ನದಿ ಜೋಡಣೆ ಪ್ರಾತ್ಯಾಕ್ಷಿಕೆ.
  9. ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಸ್ಥಾಪಿಸಿರುವ ‘ಫಿಸ್ಕಲ್ ಪಾಲಿಸಿ ಇನ್‍ಸ್ಟಿಟ್ಯೂಟ್’ ಮಾದರಿಯಲ್ಲಿ ಪಿಪಿಪಿ ಯೋಜನೆಯಡಿಯಲ್ಲಿ ‘ಸೆಂಟರ್ ಆಪ್ ಎಕ್ಸ್‍ಲೆನ್ಸ್ ಆಫ್ ವಾಟರ್’ ಆರಂಭಿಸಲು ಪ್ರಾರಂಭಿಕ ಸಿದ್ಧತೆ ನಡೆಸಿದೆ.

  ಅಗತ್ಯವಿರುವ ಮಾಹಿತಿಗಳ ಬಗ್ಗೆ ಅಧ್ಯಯನ ಮತ್ತು ಸಂಗ್ರಹ ಮಾಡಲು ಈಗಾಗಲೇ  ಆರಂಭಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಗಳ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಒಂದೆಡೆ ಸಂಗ್ರಹ ಮಾಡಲು ಕೆಳಕಂಡ ಸಂಸ್ಥೆಗಳು ಹರಸಾಹಸ ಮಾಡುತ್ತಿವೆ.

  1. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್.
  2. ಎನ್.ಆರ್.ಡಿ.ಎಂ.ಎಸ್.
  3. ಎನ್.ಐ.ಸಿ.
  4. ಕೆ.ಎಂ.ಡಿ.ಎಸ್
  5. ಜಿಯೋಮೆಟಿಕ್ ಸೆಂಟರ್
  6. ಎ.ಸಿ.ಐ.ಡಬ್ಯು.ಆರ್.ಎಂ
  7. ಸ್ಟೇಟ್ ವಾಟರ್ ಇನ್‍ಫರ್‍ಮೇಷನ್ ಸೆಂಟರ್
  8. ಮಾಹಿತಿ ಕಣಜ
  9. ಅಟಲ್ ಭೂ ಜಲ್ ಯೋಜನೆಯಡಿ ವಾಟರ್ ಆಡಿಟ್-ವಾಟರ್ ಬಡ್ಜೆಟ್-ವಾಟರ್ ಸ್ಟ್ರಾಟಜಿ.
  10. ಜಲಜೀವನ್ ಮಿಷನ್ ಯೋಜನೆಯಡಿ ವಿಲೇಜ್ ಆಕ್ಷನ್ ಪ್ಲಾನ್
  11. ಪಿಎಂಕೆಎಸ್‍ವೈ ಯೋಜನೆಯಡಿ ಸ್ಟೇಟ್ ಇರಿಗೇಷನ್ ಪ್ಲಾನ್.
  12. ಕಾಂಪೋಸಿಟ್ ವಾಟರ್ ಮ್ಯಾನೇಜ್ ಮೆಂಟ್ ಇಂಡೆಕ್ಸ್.

  ಮಾಹಿತಿ ಸಂಗ್ರಹಿಸಲು ವಿವಿಧ ಇಲಾಖೆಗಳಿಗೆ ಸರ್ಕಾರವೇ ಪತ್ರದ ಮೇಲೆ, ಪತ್ರ ಬರೆದರೂ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಮೇಲ್ಕಂಡ ಸಂಸ್ಥೆಗಳು ಕೇಳಿರುವ ಮಾಹಿತಿಯನ್ನು, ಆಯಾ ಸಂಸ್ಥೆಗಳಿಗೆ ನೀಡಲು ಮತ್ತು ನಮ್ಮ ಸಂಸ್ಥೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹ ಮಾಡಿ, ಮೌಲ್ಯಮಾಪನ ವರದಿ ಸಿದ್ಧಪಡಿಸಲು ನಿರಂತರವಾಗಿ ಶ್ರಮಿಸಲು ನಮ್ಮ  ಸಂಸ್ಥೆ ಸಿದ್ಧವಿದೆ. ಆದ್ದರಿಂದ ನಿಯಾಮನುಸಾರ ಮಾಹಿತಿ ಸಂಗ್ರಹಿಸಲು ಶ್ರಮಿಸಲು ಅನುಮತಿ ನೀಡಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                           ತಮ್ಮ ವಿಶ್ವಾಸಿ                                                          

                                                       (ಕುಂದರನಹಳ್ಳಿ ರಮೆಶ್ )