22nd November 2024
Share

TUMAKURU: SHAKTHIPEETA FOUNDATION

ಇಂಧನ ಸಚಿವರಾದ ಸನ್ಮಾನ್ಯ ಶ್ರೀ ವಿ.ಸುನಿಲ್ ಕುಮಾರ್ ರವರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬರೆದ ಪತ್ರ.

ಮಾನ್ಯರೇ,

       ವಿಷಯ: ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನಲ್ಲಿ ತಮ್ಮ ಇಲಾಖೆಯಿಂದ

               ತುರ್ತಾದ ಆಗಬೇಕಿರುವ ಕೆಲಸಗಳ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಮತ ಕ್ಷೇತ್ರ ವ್ಯಾಪ್ತಿಯ ತುಮಕೂರು ಮತ್ತು ಗುಬ್ಬಿ ತಾಲ್ಲೂಕುಗಳು ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ತಾಲ್ಲೂಕುಗಳಾಗಿದ್ದು ವಿಶ್ವ ಭೂಪಟದಲ್ಲಿ ಗುರುತಿಸಿ ಕೊಂಡಿರುತ್ತದೆ. ಗುಬ್ಬಿ ತಾಲ್ಲೂಕಿನ ಭಾರತದ ಹೆಮ್ಮೆಯ ಸಂಸ್ಥೆ ಎಚ್‍ಎಎಲ್ ತನ್ನ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು ಆರು ತಿಂಗಳಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀನರೇಂದ್ರ ಮೋದಿಯವರು ಉದ್ಟಾಟನೆ ಮಾಡಲಿದ್ದಾರೆ ಮತ್ತು ಕರ್ನಾಟಕದಲ್ಲಿ ಅತೀ ಹೆಚ್ಚು ನೀರಾವರಿ ಪಂಪ್‍ಸೆಟ್‍ಗಳನ್ನು  ಹೊಂದಿರುವ ತಾಲ್ಲೂಕ್ ಆಗಿರುತ್ತದೆ.

     ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಗುಬ್ಬಿ ತಾಲ್ಲೂಕಿನ ಕುಂದರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ದಿಪಡಿಸಿ ಡಾಟಾ ವಿಲೇಜ್ ಆಗಿ ಉನ್ನತೀಕರಿಸಲು  ಕ್ರಮಕೈಗೊಳ್ಳಲಾಗಿದೆ. ತುಮಕೂರಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಪ್ರಾರಂಭವಾದ ಕೋರ-ವಸಂತನರಸಾಪುರ ಕೈಗಾರಿಕಾ ಪ್ರದೇಶ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳಿಂದ ಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಕೈಗಾರಿಕೆಗಳು ಚಾಲ್ತಿಯಲ್ಲಿದ್ದು ಮುಂದಿನ ವರ್ಷಗಳಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಲಿದೆ.

  ಈಗಾಗಲೇ ತುಮಕೂರು ನಗರದಲ್ಲಿ ವಿಶ್ವಪ್ರಸಿದ್ದ ಇಸ್ರೋ ಸಂಸ್ಥೆಯವರು ಘಟಕವನ್ನು ಪ್ರಾರಂಭಿಸಿರುತ್ತಾರೆ. ತುಮಕೂರು  ನಗರವನ್ನು ಈಗಾಗಲೇ ಸ್ಮಾಟ್ ಸಿಟಿ ಯೋಜನೆ ಅಡಿಯಲ್ಲಿ  ಅಭಿವೃದ್ದಿಪಡಿಸಲಾಗಿದೆ. ಮೇಲಿನ ಎಲ್ಲಾ ಕಾರಣಗಳಿಂದ ತುಮಕೂರು ತಾಲ್ಲೂಕುಗಳು ವೇಗವಾಗಿ ಪ್ರಗತಿ ಹೊಂದುತ್ತಿದ್ದು ಇದಕ್ಕೆ ಪೂರಕವಾಗಿ ತಮ್ಮ ಇಲಾಖೆಯ ವತಿಯಿಂದಲೂ ಕೂಡ ಈ ಕೆಳಕಂಡ ಕಾಮಗಾರಿಗಳು/ಯೋಜನೆಗಳಿಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅತ್ಯಂತ ಜರೂರಾಗಿ ಮಂಜೂರು ಮಾಡಿಕೊಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಬೇಕಾಗಿ ಕೋರುತ್ತೇನೆ.

ಗುಬ್ಬಿ ತಾಲ್ಲೂಕಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಆಗಬೇಕಾಗಿರುವ ಕೆಲಸಗಳ ವಿವರ

1. ನಿಟ್ಟೂರು 220 ಕೆವಿ ಸ್ವೀಕರಣ ಕೇಂದ್ರವು ಓವರ್ಲೋಡ್ ಆಗಿರುವುದರಿಂದ

   ಗುಬ್ಬಿ ತಾಲ್ಲೂಕಿನಲ್ಲಿ  ಮತ್ತೊಂದು 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ

   ವನ್ನು ಸ್ಥಾಪಿಸಲು ಕೋರಲಾಗಿದೆ.

2. ಹೆಚ್ಚುವರಿ ವಿದ್ಯುತ್ ಉಪಕೇಂದ್ರಗಳ ಪ್ರಸ್ತಾವನೆಯನ್ನು ಕಳೆದು ಮೂರ್ನಾಲ್ಕು

   ವರ್ಷಗಳಿಂದ ಸತತವಾಗಿ ಸಲ್ಲಿಸಿದ್ದರು ಸಹ ಇದುವರೆಗೂ ನಂದಿಹಳ್ಳಿ

  (ಗಂಗಾ ಸಸ್ಯಕ್ಷೇತ್ರ), ಕಿಟ್ಟದಕುಪ್ಪೆ (ತೊರೆಹಳ್ಳಿ ಕ್ರಾಸ್), ಎಂಎಂಎ ಕಾವಲ್,

   ಭೋಗ ಸಂದ್ರ, ಮಂಚಲದೊರೆ , ಮಾದೇನಹಳ್ಳಿ. ತಾಳೆ ಕೊಪ್ಪ, ಅಮ್ಮನಘಟ್ಟ, ಮುಂತಾದ

   ಗ್ರಾಮಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ 

   ಕೈಗೊಂಡಿರುವುದಿಲ್ಲ. ತುರ್ತಾಗಿ ಕೈಗೆತ್ತಿಕೊಳ್ಳಲು ಕೋರುತ್ತೇನೆ.

ಗುಬ್ಬಿ ತಾಲ್ಲೂಕಿನಲ್ಲಿ ಬೆಸ್ಕಾಂ ಇಲಾಖೆಯಿಂದ ಆಗಬೇಕಾಗಿರುವ ಕೆಲಸಗಳು ಕೆಳಗಿನಂತಿವೆ.

1. ನಿಟ್ಟೂರು ಹೋಬಳಿ ಕುಂದರನಹಳ್ಳಿ ಗ್ರಾಮವನ್ನು ಸಂಸದರ ಆದರ್ಶ

   ಗ್ರಾಮವನ್ನಾಗಿ ಆಯ್ಕೆ ಮಾಡಿರುವುದರಿಂದ ಸದರಿ ಗ್ರಾಮ ಮತ್ತು

   ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕ

   ಟ್ರಾನ್ಸ್ಪಾರ್ಮರ್ ಗಳನ್ನು ಹಾಕಿಕೊಡಲು ಮನವಿ ಮಾಡುತ್ತೆನೆ

2. ಈಗಾಗಲೇ ತಿಳಿಸಿರುವಂತೆ ಗುಬ್ಬಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ನೀರಾವರಿ

   ಪಂಪ್‍ಸೆಟ್‍ಗಳನ್ನು ಹೊಂದಿರುವುದರಿಂದ ಮತ್ತು ಎಚ್‍ಎಎಲ್ ಘಟಕ

   ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಚೇಳೂರು ಶಾಖೆಯನ್ನು

   ಉಪವಿಭಾಗವನ್ನಾಗಿ ಪರಿವರ್ತಿಸಿ ಇದರ ಜೊತೆಗೆ ನಿಟ್ಟೂರು ಮತ್ತು ಗುಬ್ಬಿ

   ಮೂರು ಉಪವಿಭಾಗಗಳನ್ನು ಒಳಗೊಂಡು ತಾಲ್ಲೂಕ್ ಕೇಂದ್ರದಲ್ಲಿ ಬೆಸ್ಕಾಂ

   ವಿಭಾಗ  ಕಛೇರಿಯನ್ನು ಹೊಸದಾಗಿ ಸ್ಥಾಪನೆ ಮಾಡಲು ಕೋರುತ್ತೇನೆ.

3. ನಿಟ್ಟೂರು ಉಪವಿಭಗಕ್ಕೆ ಕಳೆದ ಎರಡು ವರ್ಷಗಳಿಂದ ಯಾವುದೇ ಸಹಾಯಕ

   ಕಾರ್ಯನಿರ್ವಾಹಕ ಇಂಜಿನಿಯರ್ ರನ್ನು ನೇಮಕ ಮಾಡದೇ ಇರುವುದರಿಂದ

   ಮತ್ತು ಇಡೀ ತಾಲ್ಲೂಕಿಗೆ  ಕೇವಲ ಒಬ್ಬ ಸಹಾಯಕ ಕಾರ್ಯನಿರ್ವಾಹಕ

   ಇಂಜಿನಿಯರ್ ಇರುವುದರಿಂದ ಅತಿ ಹೆಚ್ಚು ದೂರುಗಳು ಮತ್ತು ಇಲಾಖೆಯ

   ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು

   ಸಾಧ್ಯವಾಗುತ್ತಿಲ್ಲ.ಆದ್ದರಿಂದ ತಕ್ಷಣ ನಿಟ್ಟೂರು ಉಪವಿಭಾಗಕ್ಕೆ ಸಹಾಯಕ

   ಕಾರ್ಯನಿರ್ವಾಹಕ ಇಂಜಿನಿಯರ್ ಅನ್ನು ನೇಮಕಗೊಳಿಸಲು ವಿನಂತಿಸುತ್ತೇನೆ.

4. ತಾಲ್ಲೂಕಿನಾದ್ಯಂತ ತುಂಬಾ ಹಳೆಯದಾದ ವಿದ್ಯುತ್ ತಂತಿಗಳನ್ನು ಮತ್ತು

   ಕಂಬಗಳನ್ನು ಬದಲಿಸಲು ಸಂಬಂಧಪಟ್ಟವರಿಗೆ ಆದೇಶಿಸಲು ಕೋರುತ್ತೇನೆ.

5.ಗುಬ್ಬಿ ತಾಲ್ಲೂಕಿನಲ್ಲಿ ಸಿಬ್ಬಂದಿಗಳ ಕೊರತೆ ಅತೀ ಹೆಚ್ಚು ಇರುವುದರಿಂದ

  ಅವಶ್ಯವಿರುವಷ್ಟು ಸಿಬ್ಬಂದಿಗಳನ್ನು ನೇಮಿಸಲು ಮನವಿ ಮಾಟುತ್ತೇನೆ.

6.ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಹಣ ಪಾವತಿಸಿರುವ ಪ್ರತಿಯೊಬ್ಬ

  ರೈಯತರಿಗೆ ತುರ್ತಾಗಿ ಮೂಲಭೂತ  ಸೌಕರ್ಯ ಕಲ್ಪಿಸಲು ಮಾನ್ಯ

  ವ್ಯವಸ್ಥಾಪಕ ನಿರ್ದೇಶಕರುವ್ಯವಸ್ಥಾಪಕ ನಿರ್ದೇಶಕರು ಬೆಸ್ಕಾಂ ರವರಿಗೆ

  ಆದೇಶಿಸಲು ವಿನಂತಿಸುತ್ತೇನೆ.

7.ತಾಲ್ಲೂಕಿನಲ್ಲಿ 11 ಕೆವಿ ವಿದ್ಯುತ್ ಮಾರ್ಗಗಳು ಅತ್ಯಧಿಕ ಹೊರೆಯಿಂದ

  ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಆಗಾಗ್ಗೆ ವಯರ್ಗಳು ತುಂಡಾಗಿ

  ಬೀಳುತ್ತಿರುವುದು ಗಮನಕ್ಕೆ ಬಂದಿರುತ್ತದೆ ಇಂತಹ ಸಮಸ್ಯೆಗಳನ್ನು

  ಇತ್ಯರ್ಥಪಡಿಸಲು ಹೆಚ್ಚುವರಿ ವಿದ್ಯುತ್ ಮಾರ್ಗಗಳನ್ನು ನಿರ್ಮಾಣ ಮಾಡಲು

  ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಲು ಕೋರುತ್ತೇನೆ.

ತುಮಕೂರು ತಾಲ್ಲೂಕಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ   ಆಗಬೇಕಾಗಿರುವ ಕೆಲಸಗಳ ವಿವರ

1. ತುಮಕೂರು ನಗರವನ್ನು ಈಗಾಗಲೇ ಸ್ಮಾರ್ಟ್ ಸಿಟಿಯನ್ನಾಗಿ

   ಪರಿವರ್ತಿಸಿರುವುದರಿಂದ ಮತ್ತು ನಗರಕ್ಕೆ ನಗರವು ಅತ್ಯಂತ ವೇಗವಾಗಿ

   ಬೆಳೆಯುತ್ತಿರುವುದರಿಂದ ನಗರಕ್ಕೆ ಅವಶ್ಯವಿರುವ ಎರಡು (ದಿಬ್ಬೂರು ಹತ್ತಿರ

   ಮತ್ತು ಇಸ್ರೋ ಘಟಕ ಕ್ಯಾಸಂದರದ ಹತ್ತಿರ) ವಿದ್ಯುತ್ ಉಪಕೆಂದ್ರಗಳನ್ನು

   ತುರ್ತಾಗಿ ಸ್ಥಾಪಿಸಿ ಕೊಡಲು ಮನವಿ ಮಾಡುತ್ತೆನೆ.

2. ಹೆಬ್ಬೂರು ಹೋಬಳಿ ಸಿರಿವರ ಗ್ರಾಮದ ಬಳಿ ಸ್ಥಾಪಿಸಲು ಉದ್ದೇಶಿಸಿರುವ

  220 ಕೆವಿ ಸ್ವೀಕರಣ ಕೇಂದ್ರದ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲು

  ಅಧಿಕಾರಿಗಳಿಗೆ ಆದೇಶ ಬೇಕಾಗಿ ವಿನಂತಿ.

   ವಂದನೆಗಳೊಂದಿಗೆ.                             ತಮ್ಮ ವಿಶ್ವಾಸಿ

                                             (ಜಿ. ಎಸ್. ಬಸವರಾಜ್)

ಮಧುಗಿರಿ ಮತ್ತು ತಿಪಟೂರು ಇಇ ರವರಿಗೆ ಅವರವರ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಮಾಹಿತಿ ನೀಡಲು ಸೂಚಿಸಿದ್ದಾರೆ.