19th April 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಇಬ್ಬರು ಲವ ಲವಿಕೆಯಿಂದ ಒಂದಲ್ಲಾ ಒಂದು ಸಭೆ ನಡೆಸುವ ಮೂಲಕ, ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. ಈಗ ಎರಡು ಠುಸ್ಸೆಂದಿವೆ ಎಂಬ ಮಾತು ಜನರ ಮನಸ್ಸಿನಲ್ಲಿದೆ. ಅಧಿಕಾರಿಗಳಿಗೆ ಮಾತ್ರ ಖುಷಿಯೋ ಖುಷಿ.

ಇಬ್ಬರು ಒಗ್ಗಟ್ಟಾಗಿದ್ದರೆ ಕಥೆಯೇ ಬೇರೆ ಆಗುತ್ತಿತ್ತು, ತುಮಕೂರು ಜಿಲ್ಲೆಯ ಕರ್ಮ ಉತ್ತರ-ದಕ್ಷಿಣ ಧೃವಗಳಾದರೆ ಏನು ಮಾಡಲು ಸಾಧ್ಯ?

ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಶ್ರೀ ಅರಗಜ್ಞಾನೇಂದ್ರವರಿಗೆ ಒಂದಲ್ಲ ಒಂದು ರಾಜ್ಯಮಟ್ಟದ  ಸಮಸ್ಯೆ ರೆಡಿಯಾಗುತ್ತಿದೆ.ಅವುಗಳನ್ನು ಬಗೆಹರಿಸುವುದೇ ಒಂದು ಸವಲಾಗಿದೆ.

 ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ನಾರಾಯಣಸ್ವಾಮಿರವರಿಗೆ, ಇಡೀ ದೇಶದ ಕೆಲಸದ ಒತ್ತಡ ಮತ್ತು ರಾಜ್ಯದ ದಲಿತ ಮುಖ್ಯ ಮಂತ್ರಿಯವರ ಕನಸಿಗೆ ಇಂಬು ಕೊಡುವ ಕುಲಭಾಂಧವರ/ಜನತೆಯ  ಒತ್ತಡ, ಜೊತೆಗೆ ತುಮಕೂರು ಮತ್ತು ಚಿತ್ರದುರ್ಗ ಎರಡು ಜಿಲ್ಲೆಯ ದಿಶಾ ಸಮಿತಿ ಕಾರ್ಯವೈಖರಿಗೆ ಸಮಯ ಸಿಗುವುದೇ ಕಷ್ಟ ಕರವಾಗಿದೆ.

ಹೀಗೆ ಮುಂದುವರೆದರೆ ಜಿಲ್ಲೆಯ ಅಭಿವೃದ್ಧಿ ವೇಗ ಕುಂಠಿತ ಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ಈ ಒತ್ತಡಗಳ ಮಧ್ಯೆದಲ್ಲೂ ಜಿಲ್ಲೆಯ ಚಟುವಟಿಕೆಗಳಿಗೆ ಚುರುಕಾಗುವರೇ ಕಾದು ನೋಡಬೇಕು.