TUMAKURU:SHAKTHIPEETA FOUNDATION
ತುಮಕೂರು ನಗರದ ಉಧ್ಯಾನವನಗಳ ಬಗ್ಗೆ ಹರಿಕಥೆ ಹೇಳುವುದನ್ನು ನಿಲ್ಲಿಸಿ, ನಗರದಲ್ಲಿ ಇದೂವರೆಗೂ ಲೇಔಟ್ ಆಗಿರುವ ಎಲ್ಲಾ ಲೇಔಟ್ ಗಳಲ್ಲಿರುವ ಉಧ್ಯಾವನಗಳ ಇತಿಹಾಸ ಸಹಿತ ಪಕ್ಕಾ ಜಿಐಎಸ್ ಲೇಯರ್ ನೀಡಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಕಿಡಿಕಾರಿದರು.
ಅವರು ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ಯಲ್ಲಿ ದಿನಾಂಕ:21.05.2022 ರಂದು ನಡೆದ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ದಿಶಾ ಸಮಿತಿ ಸದಸ್ಯ ಹಾಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ರವರು ಸಭೆಯಲ್ಲಿ 2001 ರಿಂದ 2022 ರವರೆಗೂ, ಸುಮಾರು 21 ವರ್ಷಗಳ ಕಾಲ ತಮ್ಮ ನೇತೃತ್ವದಲ್ಲಿ ಅಧಿಕಾರ ಇರಲಿ-ಇಲ್ಲದಿರಲಿ ನಿರಂತರ ಹೋರಾಟ ನಡೆಸಿದರೂ, ಉಧ್ಯಾವನಗಳ ಮಾಹಿತಿ ಇಲ್ಲ ಎಂದರೆ ಹೇಗೆ ಸಾರ್ ಎಂಬ ಮಾತಿಗೆ ಅಕ್ಷರಷಃ ಸಿಟ್ಟಾದ ಪ್ರಸಂಗ ನಡೆಯಿತು.
- 2010 ರಲ್ಲಿ ಘೋಷಣೆಯಾದ ಉಧ್ಯಾನವನಗಳ ಪಕ್ಕಾ ಮಾಹಿತಿ ಇಲ್ಲ?
- 2010 ರಿಂದ 2015 ರವರೆಗೂ ಲೇಔಟ್ ಆಗಿರುವ ಉಧ್ಯಾವನಗಳ ಪಟ್ಟಿ ಇಲ್ಲ?
- 2015 ರಿಂದ 2022 ರವರೆಗೂ ಲೇಔಟ್ ಆದ ಉಧ್ಯಾನವನಗಳಿಗೆ ಮುಳ್ಳು ತಂತಿಹಾಕಬೇಕು ಎಂದಿದ್ದರೂ ಇದೂವರೆಗೂ ಪಾಲಿಕೆಗೆÉ ಹಸ್ತಾಂತರ ಮಾಡಿಲ್ಲ?
- ಸರ್ವೆ ನಂಬರ್ವಾರು ಲೇಔಟ್ ಆಗಿರುತ್ತದೆ, ಉಧ್ಯಾನ ವನ ಸಿಗುವುದಿಲ್ಲಾ ಎಂದರೆ ಕೈಕಾಲು ಬಂದು ಕದ್ದು ಹೋಗಿವಿಯಾ?
ಇಲ್ಲಿಯವರೆಗೂ 4 ಸಭೆಗಳನ್ನು ನಡೆಸಿ ಮುಂದಿನ 2022 ರ ವಿಶ್ವ ಪರಿಸರ ದಿನಾಚರಣೆ ವೇಳೆಗೆ ಉಧ್ಯಾನವನಗಳ ಪಕ್ಕಾ ಜಿಐಎಸ್ ಲೇಯರ್ ಸಿದ್ಧಪಡಿಸಲು ಪದೇ ಪದೇ ಹೇಳಿದರೂ, ಇಲಾಖೆಗಳ ಸಮನ್ವಯ ಇಲ್ಲದೆ ಕೆಲಸ ಮಾಡಿಲ್ಲ ಎಂದರೆ ಹೇಗೆ? ಇದೇನು ಹುಡುಗಾಟವೇ? ಒಬ್ಬ ಎಂಪಿ ಬಂದು ಉಧ್ಯಾನವನಗಳ ಲೆಕ್ಕಾ ನೀಡಿ ಎಂದರೆ ನಾಚಿಕೆ ಆಗುವುದಿಲ್ಲವೇ? ಎಂದು ಹರಿಹಾಯ್ದರು.
ದಿನಾಂಕ:05.06.2022 ರಂದು ತುಮಕೂರು ನಗರದ ಎಲ್ಲಾ ಉಧ್ಯಾನವನಗಳ ಜಿಐಎಸ್ ಲೇಯರ್ ನೀಡಿದರೆ ಅಧಿಕಾರಿಗಳಿಗೆ ಸನ್ಮಾನ ಮಾಡುವುದಾಗಿ ಅಥವಾ ನೀಡದಿದ್ದರೆ ಧರಣಿ ಕೂರುವುದಾಗಿ ಕುಂದರನಹಳ್ಳಿ ರಮೇಶ್ ಹೇಳಿದ್ದಾರೆ. ಅವರು ಧರಣಿ ಕುಳಿತರೆ ನಾನು ಎಂಪಿ, ನನ್ನ ಮಗ ಶ್ರೀ ಜಿ.ಬಿ.ಜ್ಯೋತಿಗಣೇಶ್ ನಗರದ ಶಾಸಕ ಆಗಿರುವಾಗ ಯಾರ ಮರ್ಯಾದೆ ಹೋಗುತ್ತದೆ? ಎಂದು ತಿಳಿದಿದ್ದಿರಾ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ತುಮಕೂರು ನಗರದಲ್ಲಿ ಗಿಡ ಹಾಕಲು ಇನ್ನೂ ಮುಂದೆ ಜಾಗ ಇಲ್ಲ ಎನ್ನುವ ರೀತಿಯಲ್ಲಿ ಗಿಡ ಹಾಕಲು ಹಸಿರು ತುಮಕೂರು-3 ಯೋಜನೆ ರೂಪುರೇಷೆ ಸಿದ್ಧಪಡಿಸಿ, ಅದಕ್ಕೆ ಎಷ್ಟು ಹಣ ಬೇಕೋ ಅಷ್ಟು ಹಣ ಕೊಡಿಸುವ ವಿಚಾರ ನನಗೆ, ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗೆ ಬಿಡಿ.
ಈ ವರ್ಷ ಸುಮಾರು 35 ಸಾವಿರ ಗಿಡ ಕೊಡಿಸುವ ಕೆಲಸ ನನ್ನದು, ಗಿಡಹಾಕಿಸುವ ಕೆಲಸ ಅಧಿಕಾರಿಗಳದ್ದು ಎಂದು ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕಾಲ ಮಿತಿ ನಿಗದಿ ಗೊಳಿಸಿದರು.
ಎರಡು ತಿಂಗಳ ಒಳಗಾಗಿ, ತುಮಕೂರು ನಗರದ ಉಧ್ಯಾನವನಗಳ ಮತ್ತು ಹಸಿರು ತುಮಕೂರು ಯೋಜನೆಯ ಮೌಲ್ಯ ಮಾಪನ ವರಧಿ ಸಿದ್ಧಪಡಿಸಲು ಅಗತ್ಯ ಕ್ರಮಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸಂಸದರು ಸೂಚಿಸಿದರು.
ತುಮಕೂರು ನಗರಾಭಿವೃದ್ಧಿಕಾರದ ಅಧ್ಯಕ್ಷ ಶ್ರೀ ನಾಗೇಶ್‍ರವರು ಸಮೀಕ್ಷೆ ನಡೆಸಲು ಸರ್ವೇಯರ್ ಕೊರತೆ ಇದೆ, ನಾವೂ ಹಣ ಖರ್ಚು ಮಾಡಲು ಅವಕಾಶ ಇಲ್ಲ ಎಂದಾಗ, ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಮಧ್ಯೆ ಪ್ರವೇಶಿಸಿ ಅದೇ ರೀತಿ ಸಭೆ ನಡವಳಿಕೆ ಮಾಡಿ, ಸರ್ಕಾರಕ್ಕೆ ಸಲ್ಲಿಸಿ, ಹಣ ಕೊಡಿಸುವ ಜವಾಬ್ಧಾರಿ ನಮಗೆ ಬಿಡಿ ಇದೊಂದು ಹಾಸ್ಯಾಸ್ಪದ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಊರಿಗೊಂದು ಪವಿತ್ರವನ ನಿರ್ಮಾಣ ಮಾಡುವ ಮಾದರಿಯಲ್ಲಿ, ವಾರ್ಡ್ ಗೊಂದು ಪವಿತ್ರವನ ನಿರ್ಮಾಣ ಮಾಡಲು ಸಂಸದರು ಸಲಹೆ ನೀಡಿದರು.
ಉಪವಿಭಾಗಾಧಿಕಾರಿ ಶ್ರೀ ಅಜಯ್ ಮಾತನಾಡಿ, ತುಮಕೂರು ನಗರದ ಎಲ್ಲಾ ಸರ್ವೇ ನಂಬರ್ ವಾರು ಮಾಹಿತಿಯನ್ನು ಎರಡು ದಿವಸದಲ್ಲಿ ಪಾಲಿಕೆಗೆ ನೀಡುವುದಾಗಿ ತಿಳಿಸಿದರು.
ಕುಂದರನಹಳ್ಳಿ ರಮೇಶ್, ಬೇವಿನಮರದ ಶ್ರೀ ಸಿದ್ಧಪ್ಪ, ಶ್ರೀ ಗುರುಸಿದ್ಧರಾಧ್ಯ, ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಸಮಿತಿಯ ಸದಸ್ಯರುಗಳು ಪಿಪಿಪಿ ಯೋಜನೆಯಡಿ ಗಿಡಹಾಕಲು ಪ್ರಸ್ತಾವನೆ ಸಲ್ಲಿಸಿದರು.
ಪ್ರತಿಯೊಂದು ಅಂಶವಾರು ಸಾಧಕ-ಭಾಧಕ ಪರಿಶೀಲಿಸಿ, ನಗರದ ಆಸಕ್ತರ ಸಲಹೆ, ಮಾರ್ಗದರ್ಶನ ಪಡೆದು, ಪಿಪಿಪಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರಿಗೆ ಮೂರು ದಿವಸದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಂಸದರು ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ, ತಹಶೀಲ್ದಾರ್ ಶ್ರೀ ಮೋಹನ್ , ಜಿಲ್ಲಾ ಆಯುಷ್ ಅಧಿಕಾರಿ ಶ್ರೀ ಸಂಜಿವರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.