16th September 2024
Share

TUMAKURU:SHAKTHI PEETA FOUNDATION

ತುಮಕೂರು ನಗರದಲ್ಲಿ, ಕರ್ನಾಟಕ ರಾಜ್ಯ ಬಿಜೆಪಿಯ ರೈತ ಮೋರ್ಚಾ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಿತು. ನನಗೆ ಒಂದು ಘಂಟೆಗಳ ಕಾ¯ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಉನ್ಯಾಸಕ್ಕೆ ಅವಕಾಶ ನೀಡಿದ್ದರು. ಸಮಯ ಅವಕಾಶ ಸಾಕಾಗಲಿಲ್ಲ, ಆದರೂ ಸುಮಾರು 48 ಸ್ಲೈಡ್ ಗಳನ್ನು ಒಂದು ಗಂಟೆ ಹತ್ತು ನಿಮಿಷಕ್ಕೆ ಪೂರ್ಣಗೊಳಿಸಬೇಕಾಯಿತು. 10 ನಿಮಿಷ ಹೆಚ್ಚಿಗೆ ಟೈಮ್ ತೆಗೆದುಕೊಂಡಿದ್ದಕ್ಕೆ ಸಂಘಟಕರ ಕ್ಷಮೆ ಕೇಳಬೇಕಾಯಿತು.

ಉಪನ್ಯಾಸ ಅವಧಿಯ ಕೆಲವು ಪ್ರಮುಖ ಅಂಶಗಳ ಬಗ್ಗೆ ಬರೆಯಬೇಕಿನಿಸಿತು.

ಸಾರ್ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ, ಸಂಘ ಪರಿವಾರದ ಪ್ರಮುಖರೊಬ್ಬರಾದ ––ಜೀ ಯವರು ಪ್ಯಾನೆಲ್ ನಲ್ಲಿ ನಿಮ್ಮ ಹೆಸರು ನೋಡಿ, ಕುಂದರನಹಳ್ಳಿ ರಮೇಶ್ ಕ್ರಾಂತಿಕಾರಕ ವ್ಯಕ್ತಿ, ಎಲ್ಲಾ ಪಕ್ಷದವರನ್ನು ಟೀಕೀಸುತ್ತಾರೆ, ಪ್ರಧಾನಿಯವರು ಅಥವಾ ಮುಖ್ಯ ಮಂತ್ರಿಯವರ ಬಗ್ಗೆ ಮಾತನಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

 ಅದಕ್ಕೆ ಶಿವಪ್ರಸಾದ್ ಸಾರ್ ರವರು ಹಾಗೆ ಏನು ಆಗುವುದಿಲ್ಲ ಎಂದಾಗ, ಆತ ವಿಷಯ ತಿಳಿದುಕೊಂಡಿದ್ದಾರೆ, ಆಯಿತು ಎಂದು ಒಪ್ಪಿಗೆ ನೀಡಿದರು ಸಾರ್, ನಿಮ್ಮನ್ನು ನಾನು ನೋಡಿರಲಿಲ್ಲ, ನೀವೂ ಹೇಗೆ ಮಾತನಾಡುತ್ತಿರಾ ಎಂಬ ಕುತೂಹಲ ನನಗೂ ಇತ್ತು ಧನ್ಯವಾದಗಳು ಸಾರ್, ಚೆನ್ನಾಗಿ ವಿಷಯ ಮಂಡಿಸಿದರಿ. ನಮ್ಮ ಜಿಲ್ಲೆಗೆ ಬನ್ನಿ ಎಂದು ಆಹ್ವಾನ ನೀಡಿದರು.

ಸಾರ್ ನಿಮಗೆ ಸಮಯ ಸಾಕಾಗಲಿಲ್ಲ.

ಸಾರ್ ನೀವೂ ಪ್ರೋಫೆಸರ್ ಆಗಿದ್ದಿರಾ?

ಸಾರ್ ನೀವೂ ನಿವೃತ್ತ ಅಧಿಕಾರಿನಾ?

ಸಾರ್ ಒಂದು ಘಂಟೆ ಕಳೆದಿದ್ದೆ ಗೊತ್ತಾಗಲಿಲ್ಲ.

ಸಾರ್ ನೀವೂ ಮೊದಲು ಮಾತನಾಡುತ್ತಿದ್ದ ಹಾಗೆ ಖಡಕ್ ಆಗಿ, ಮಾತನಾಡಲಿಲ್ಲ ಏಕೆ ಎಂದು ಕೆಲವರು ಪ್ರಶ್ನೆ ಮಾಡಿದರು. ಅದು ಹೋರಾಟ ಬಾಷಣ, ಇದು ಸಂಶೋದಕನ ಉಪನ್ಯಾಸ ಸಾರ್ ಎಂದಾಗ ಹೌದಾ ಎಂದು ತಲೆಯಾಡಿಸಿದರು.

ಬಿಜೆಪಿ ನಾಯಕರಾದ ಶ್ರೀ ಶಿವಪ್ರಸಾದ್ ರವರು ನನಗೆ ಮೋದಲೇ ಹೇಳಿದ್ದರಿಂದ ಬಹಳ ಎಚ್ಚರಿಕೆ ವಹಿಸಿ ಮಾತನಾಡಿದೆ, ಎಲ್ಲೂ ಅಳಿ ತಪ್ಪಲಿಲ್ಲ ಎಂದು ನನಗನಿಸಿತು. ವಿಡಿಯೋ ನೋಡಿದ ನಂತರ ತಪ್ಪಾಗಿದ್ದಲ್ಲಿ ತಿದ್ದಿಕೊಳ್ಳ ಬೇಕು.

ಸಾರ್ ನೀರಾವರಿ ಬಗ್ಗೆ ಎಷ್ಟು ವಿಚಾರ ಹೇಳಿದಿರಿ, ಎಂದು ಏಕಾ ಏಕಿ ಕಾಲಿಗೆ ಬಿದ್ದ ರೈತನ ನಡವಳಿಕೆ ನನಗೆ ಬೆಚ್ಚಿ ಬೀಳಿಸಿತು.

  ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಕರ್ನಾಟಕ ರೈತ ಮೋರ್ಚಾದ ರಾಜ್ಯಾಧ್ಯಕ್ಷರು ಆದ ಶ್ರೀ ಈರಣ್ಣ ಕಡಾಡಿಯವರು ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಲು ಆಹ್ವಾನ ನೀಡಿದ್ದಾರೆ. ಹಾಗೆಯೇ ಕೊಡಗು, ಉತ್ತರಕನ್ನಡ ಜಿಲ್ಲೆಯ ಪ್ರಮುಖರು ಆಹ್ವಾನ ನೀಡಿದ್ದಾರೆ.

ನಮ್ಮ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಸಭೆಯಲ್ಲಿ ಕುಳಿತು ವೀಕ್ಷಣೆ ಮಾಡಿದ್ದಾರೆ. ಅವರ ಸಲಹೆಗಳನ್ನು ಪಡೆದುಕೊಳ್ಳಬೇಕು.

ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿಯವರು ಎಲ್ಲಾ ಕೇಳಿದ ನಂತರ ಇನ್ನೂ ಕೆಲವು ಅಂಶಗಳ ಸೇರ್ಪಡೆ ಮಾಡ ಬೇಕು ಸಾರ್, ಇನ್ನೊಂದು ಸಿಟಿಂಗ್ ಕುಳಿತು ಅಫ್ ಡೇಟ್ ಮಾಡೋಣ ಎಂದು ಸಲಹೆ ನೀಡಿದರು.

ಸಲಹೆ ನೀಡಲು ಎಲ್ಲರಿಗೂ ಮನವಿ ಮಾಡಲಾಗಿದೆ.