22nd November 2024
Share

   

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಸಮಗ್ರ ನೀರಾವರಿಯ ಪಕ್ಕಾ ಡಿಜಿಟಲ್ ಮಾಹಿತಿಗಳನ್ನು ಒಳಗೊಂಡ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಜಲಗ್ರಂಥದ ಕರಡು ಪಿಪಿಟಿ ಯ ಬಗ್ಗೆ ಪ್ರಥಮ ಸಭೆ, ಕರ್ನಾಟಕ ರಾಜ್ಯ ಮಟ್ಟದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಇಂದು (ದಿನಾಂಕ:29.05.2022) ಮಂಡನೆಯಾಗಲಿದೆ. ಅವರು ನೀಡುವ ಸಲಹೆಗಳನ್ನು ಸೇರ್ಪಡೆ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ.

  ರಾಜ್ಯದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಪರಿಸರ ಸಂಘಟನೆಗಳ, ವಿವಿಧ ವರ್ಗದ ಸಂಘಟನೆಗಳ, ಪ್ರಗತಿ ಪರ ಸಂಘಟನೆಗಳ, ಅಭಿವೃದ್ಧಿ ಪರ ಸಂಘಟನೆಗಳ, ಎಡ ಪಂಥೀಯ ಮತ್ತು ಬಲಪಂಥೀಯ ಹೀಗೆ ಎಲ್ಲಾ ವರ್ಗದವರು ಒಪ್ಪುವ ಜಲಗ್ರಂಥ ಸಿದ್ಧಪಡಿಸುವ ಗುರಿ ನಮ್ಮದಾಗಿದೆ.

ತುಮಕೂರು ಜಿಲ್ಲೆಯ ಬಿಜೆಪಿ ಹಿರಿಯ ನಾಯಕರಾದ ಶ್ರೀ ಪಾವಗಡದ ಶಿವಪ್ರಸಾದ್ ರವರು ನನಗೆ ಆಹ್ವಾನ ನೀಡಿದಾಗ ಅಚ್ಚರಿಯಾಯಿತು. ಕಾರಣ ದಿನಾಂಕ:08.05.2022 ರಂದು ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಪ್ರವಾಸ ಮಾಡುವ ಜನಜಾಗೃತಿ ಸಭೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ  ಚಾಲನೇ ನೀಡಲಾಗಿತ್ತು.

  ನನಗೆ ಸ್ನೇಹಿತರಾದ ಶ್ರೀ ಸಿ.ಕೆ.ಮಹೇಂದ್ರವರು ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಸಭೆ ಆಯೋಜಿಸುತ್ತೇವೆ. ನಿಮ್ಮ ಜಲಗ್ರಂಥದ ಪರಿಕಲ್ಪನೆಯನ್ನು ಮಂಡಿಸಿ, ನಮ್ಮ ಸಲಹೆಗಳನ್ನು ಸೇರ್ಪಡೆ ಮಾಡಿಕೊಳ್ಳಿ ಎಂಬ ಆಹ್ವಾನ ನೀಡಿದ್ದಾರೆ. ನಾನು ಅವರಿಗೆ ಅಂದೇ ಹೇಳಿದ್ದೆ, ನಾನು ರಾಜ್ಯದ ಪ್ರತಿಯೊಂದು ರಾಜಕೀಯ ಪಕ್ಷಗಳ ಸಭೆಯಲ್ಲಿ ಮಂಡಿಸಿ ಅವರ ಅಭಿಪ್ರಾಯಗಳನ್ನು ಲಿಖಿತವಾಗಿ ಪಡೆದು ಜಲಗ್ರಂಥದಲ್ಲಿ ಪ್ರಸ್ತಾವನೆ ಮಾಡುತ್ತೇನೆ.

‘ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ  ಮುಖಾಂತರ, ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಸಲ್ಲಿಸುವ ಜಲಗ್ರಂಥ, ರಾಜ್ಯ ಯೋಜನಾ ಇಲಾಖೆಯ ಮುಖಾಂತರ, ದೇಶದ ನೀತಿ ಆಯೋಗಕ್ಕೆ ಸಲ್ಲಿಸುವ ಜಲಗ್ರಂಥ, ರಾಜ್ಯದ ಸಾವಿರಾರು ಜನರ ಚಿಂತನೆಗಳ ಹೂರಣವಾಗ ಬೇಕಿದೆ.

ಪ್ರಧಾನಿ ಶ್ರೀ ನರೇಂದ್ರಮೋದಿಯವರು ಮತ್ತು ಮಾಜಿ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ರವರ ಕನಸಿನ ಜಲಶಕ್ತಿ ರಿಯಲ್ ಡಾಟಾ ಮತ್ತು ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರ ಜನತಾ ಜಲಧಾರೆಯ ಪಕ್ಕಾ ಮಾಹಿತಿಯೂ ಈ  ಜಲಗ್ರಂಥದಲ್ಲಿ ಇರಲಿದೆ. ಜೊತೆಗೆ ಒಬ್ಬ ಹಳ್ಳಿಯ ಬಡ ಬೋರೇ ಗೌಡರವರು ನೀಡಿದ ಸಲಹೆ ಇಲ್ಲಿ ಇರಲಿದೆ.

ಪ್ರಧಾನಿಯವರಾದ ಶ್ರೀ ಮೋದಿಯವರು 8 ವರ್ಷ ಪೂರೈಸಿದ್ದಾರೆ, ಕೊರೊನಾ ಸಮಯದಲ್ಲಿ 9 ದೀಪಗಳನ್ನು ಹಚ್ಚಿಸಿ ದೇಶದ ಜನರ ಮನಗೆದ್ದಿದ್ದಾರೆ, 9 ವರ್ಷ ಪೂರೈಸುವ ವೇಳೆಗೆ ಜಲಗ್ರಂಥ ಅವರ ಕೈ ಸೇರಲೇ ಬೇಕು.

75 ನೇ ವರ್ಷದ ಸ್ವಾತಂತ್ರ್ಯ ಉತ್ಸವವನ್ನು ಭರದಿಂದ ದೇಶಾಧ್ಯಾಂತ ಆಚರಿಸುತ್ತಿದ್ದೇವೆ, 100 ನೇ ವರ್ಷದ ವೇಳೆಗೆ ಜಲಗ್ರಂಥದ ಯೋಜನೆಗಳು ಜಾರಿಯಾಗಲೇ ಬೇಕು ಎಂಬ ನಿರ್ಧಿಷ್ಠ ಗುರಿ ನಮ್ಮದಾಗ ಬೇಕಿದೆ.

 ತುಮಕೂರು ಜಿಲ್ಲೆಯ ಪೈಲಟ್ ಯೋಜನೆ ಬಗ್ಗೆ ಬಿಜೆಪಿ ಜಿಲ್ಲಾಧ್ಯಾಕ್ಷರಾದ ಶ್ರೀ ಹೆಬ್ಬಾಕ ರವಿರವರು, ಶ್ರೀ ಬಿ.ಕೆ.ಮಂಜುನಾಥ್ ರವರು ಸೇರಿದಂತೆ ಜಿಲ್ಲೆಯ ಸರ್ವ ಪಕ್ಷಗಳ ಜಿಲ್ಲಾಧ್ಯಕ್ಷರ ಸಹಕಾರವೂ ಅಗತ್ಯವಾಗಿದೆ.

ಈ ಕರಡು ಪಿಪಿಟಿ ಸಿದ್ಧಪಡಿಸಲು ಹಲವಾರು ಜನರು ಶ್ರಮಿಸಿದ್ದಾರೆ, ಚಿ.ಕೆ.ಆರ್.ಸೋಹನ್, ಶ್ರೀ ಬಸವರಾಜ್ ಸುರಣಗಿ, ಶ್ರೀ ಕೃಷ್ಣಮೂರ್ತಿ, ಶ್ರೀ ಪ್ರಮೋದ್, ಶ್ರೀ ಸತ್ಯಾನಂದ್, ಶ್ರೀ ಮಲ್ಲೇಶ್, ಶ್ರೀ ಟಿ.ಆರ್.ರಘೋತ್ತಮರಾವ್ ಸೇರಿದಂತೆ ಹಲವರ ಶ್ರಮ ಇಲ್ಲಿದೆ.

 ‘ಈ ಜಲಗ್ರಂಥದ ನಿರ್ಮಾಣ, ನಿರ್ದೇಶನ ಸಿದ್ಧಗಂಗಾ ಶ್ರೀಗಳಾದ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮಿಗಳು, ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಮಾಜಿ ಮುಖ್ಯ ಮಂತ್ರಿಯವರಾದ ದಿ.ಜೆ.ಹೆಚ್. ಪಾಟೀಲ್ ರವರು, ಶ್ರೀ ಎಸ್.ಎಂ.ಕೃಷ್ಣರವರು, ಶ್ರೀ ಬಿ.ಎಸ್.ಯಡಿಯೂರಪ್ಪನವರು, ಶ್ರೀ ಸಿದ್ಧರಾಮಯ್ಯನವರು, ಶ್ರೀ ಜಗದೀಶ್ ಶೆಟ್ಟರ್ ರವರು, ಅವರ ಧರ್ಮಪತ್ನಿ ಶ್ರೀಮತಿ ಶಿಲ್ಪಶೆಟ್ಟರ್ ರವರು, ಶ್ರೀ ಡಿ.ವಿ.ಸದಾನಂದ್ ಗೌಡರವರು, ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು, ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು, ಶ್ರೀ ಎಂ.ಬಿ.ಪಾಟೀಲ್ ರವರು, ಶ್ರೀ ರಮೇಶ್ ಜಾರಕಿಹೊಳೆರವರು, ಶ್ರೀ ಡಿಕೆ.ಶಿವಕುಮಾರ್ ರವರು, ದಿ. ನಾಗೇಗೌಡರವರು, ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು, ಮಾಜಿ ಸ್ಪೀಕರ್ ದಿ.ಎಂ.ವಿ.ವೆಂಕಟಪ್ಪನವರು ಮತ್ತು ಅವರ ಧರ್ಮ ಪತ್ನಿಯವರು. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಪ್ರೇರಣೆ ಎಂದರೆ ತಪ್ಪಾಗಲಾರದು. ಇವರೆಲ್ಲರ ಸಹಕಾರ ಮತ್ತು ಘಟನೆಗಳು ನನ್ನ ಮನಸ್ಸಿನಲ್ಲಿ ಹಚ್ಚೆ ಹೊತ್ತಿದೆ.’

  ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಕರ್ನಾಟಕ ರೈತ ಮೋರ್ಚಾದ ರಾಜ್ಯಾಧ್ಯಕ್ಷರು ಆದ ಶ್ರೀ ಈರಣ್ಣ ಕಡಾಡಿಯವರ ನೇತೃತ್ವದ ಸಮಿತಿ ಜಲಗ್ರಂಥದ ಬಗ್ಗೆ ಯಾವ ನಿರ್ಣಯ ಕೈಗೊಳ್ಳುತ್ತಾರೆ ಕಾದು ನೋಡೋಣ.