27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದಿಂದ ತುಮಕೂರು ಜಿಲ್ಲೆಗೆ ಸುಮಾರು 100 ಕೋಟಿ ವೆಚ್ಚದ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಅನ್ನು ಆಗಿನ ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು 2013-2014 ರಲ್ಲಿ ಮಂಜೂರು ಮಾಡಿಸಿದ್ದರು.

ನಂತರ ಬಂದ ಲೋಕಸಭಾ ಸದಸ್ಯರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರು   ಅಮಲಾಪುರದಲ್ಲಿ 15 ಎಕರೆ ಜಮೀನು ಮಾಜೂರು ಮಾಡಿಸಿದರು. ಮತ್ತೆ ಅಧಿಕಾರಕ್ಕೆ ಬಂದ ಶ್ರೀ ಜಿ.ಎಸ್.ಬಸವರಾಜ್ ರವರು ಯೋಜನೆಯ ಬಗ್ಗೆ ಗಮನಹರಿಸಿದಾಗ 100 ಕೋಟಿ ಯೋಜನೆ 20 ಕೋಟಿ ಯೋಜನೆಗೆ ಬಂದು ನಿಂತಿದ್ದು ಜಿಲ್ಲೆಯ ಧೌರ್ಭಾಗ್ಯ.

ರಾಜ್ಯ ಸರ್ಕಾರ 20000- 30000 ಚದುರ ಅಡಿ ಕಟ್ಟಡ ನೀಡಿದರೆ, ರೂ 20 ಕೋಟಿ ಬಂಡವಾಳ ಹಾಕುವÀ ಷರತ್ತು ಕೇಂದ್ರ ಸರ್ಕಾರದ್ದಾಗಿದೆ. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಗ್ರಂಥಾಲಯದ ಆವರಣದಲ್ಲಿ ಇನ್ ಕ್ಯುಬೇಷನ್ ಸೆಂಟರ್ ಗಾಗಿಯೇ ಕಟ್ಟಡ ನಿರ್ಮಾಣ ಮಾಡಿದ್ದರೂ, ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ವಿಶೇಷ ಆಸಕ್ತಿ ವಹಿಸಿದ್ದರೂ, ನಮ್ಮ ಕಟ್ಟಡ ಬಾಡಿಗೆ ಪಡೆಯಿರಿ ಎಂಬ ಖಾಸಗಿ ಕಟ್ಟಡದ ಮಾಲೀಕರ ಹಾವಳಿ ಯಿಂದ ಬಹಳ ದಿನ ನನೆಗುದಿಗೆ ಬಿದ್ದಿತ್ತು.

ತುಮಕೂರು ಜಿಲ್ಲೆಯವರೇ ಆದ ಶ್ರೀ ಬಿ.ಸಿ.ನಾಗೇಶ್ ರವರು ಎರಡು ಅಂತಸ್ತು ಕಟ್ಟಡಕ್ಕೆ ಅನುಮತಿ ನೀಡುವ ಮೂಲಕ ಅಂತು-ಇಂತು ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಸ್ಥಾಪನೆ ಕನಸು ಒಂದು ಹಂತಕ್ಕೆ ಬಂದಿದೆ.

ಇನ್ನೂ ಏನೇನು ಕಾದಿದೆಯೋ ದೇವರೇ ಬಲ್ಲ.