12th October 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥವನ್ನು ಅವರ 60 ನೇ ವರ್ಷದಲ್ಲಿ ಬರೆಸಬೇಕು ಎಂಬ ಆಲೋಚನೆ ಅವರ ಅಭಿಮಾನಿಗಳಲ್ಲಿ ಮೂಡಿದ್ದು ಇತಿಹಾಸ. ಕ್ಯಾತ್ಸಂದ್ರದ ಸಾಹಿತಿ ಶ್ರೀ ಕವಿತಾ ಕೃಷ್ಣಾರವರು ಬರೆಯಲು ಆರಂಭಿಸಿದ್ದೂ ಇತಿಹಾಸ.

ನಂತರ 80 ನೇ ವರ್ಷದಲ್ಲಿ ಮತ್ತೆ ಚಿಗುರು ಒಡೆಯಿತು. ಈ ಸಮಯದಲ್ಲಿ ತಿಪ್ಪೂರು ಪಾಳ್ಯದ ಶ್ರೀ ಚಂದ್ರಪ್ಪನವರು, ಕಂಬತ್ತನಹಳ್ಳಿಯ ಶ್ರೀ ಪರಮಶಿವಯ್ಯನವರ ತಂಡ ಗ್ರಂಥ ಬರೆಯುವ ಇಂಗಿತ ವ್ಯಕ್ತ ಪಡಿಸಿ ಅವರು ಬರೆಯಲು ಆರಂಭಿಸಿದ್ದಾರೆ.

ಶ್ರೀ ಟಿ.ಆರ್.ರಘೋತ್ತಮರಾವ್ ರವರು ಅಭಿವೃದ್ಧಿ ಬೇಟೇಗಾರಬಸವರಾಜ್ ಎಂಬ ಗ್ರಂಥವನ್ನು ಬರೆಯಲು ಆರಂಭಿಸಿದ್ದಾರೆ. ಶ್ರೀ ಬಾಪೂಜಿ ಬಸವಯ್ಯನವರು ಅಭಿನಂದನಾ ಗ್ರಂಥ ಬರೆಯುವ ಇಂಗಿತವನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.

ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಪ್ಪನವರು ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಒಂದು ಅಂತಿಮ ರೂಪುಕೊಟ್ಟು ಅಭಿನಂಧನಾ ಗ್ರಂಥ ಬಿಡುಗಡೆ ಮಾಡಲೇ ಬೇಕು ಎಂದು, ನಿವೃತ್ತ ಪ್ರಾಂಶುಪಾಲರಾದ ಮಣುವಿನಕುರಿಕೆ ಶ್ರೀ ಶಿವರುದ್ರಯ್ಯನವರು, ಶ್ರೀ ಸಾಯಿಬಾಬಾ ಗುರುಸಿದ್ದಪ್ಪನವರು ನನ್ನ ಬಳಿ ಹಲವಾರು ಭಾರಿ, ಈ ಬಗ್ಗೆ ಪ್ರೀತಿಯ ಜಗಳ ಕಾದಿದ್ದಾರೆ.

ಶ್ರೀ ಸಿ.ಕೆ.ಮಹೇಂದ್ರರವರು ಸಹ ಅಭಿನಂದನಾ ಗ್ರಂಥದ ಬಗ್ಗೆ ಹಲವಾರು ಭಾರಿ ಚರ್ಚೆ ಮಾಡಿದ್ದಾರೆ. ಶ್ರೀ ರೆಡ್ಡಿ ಚಿನ್ನಯಲ್ಲಪ್ಪನವರು ಬಸವರಾಜ್ ರವರ ರಾಜಕೀಯ ತಂತ್ರಗಾರಿಕೆ ಬಗ್ಗೆ ನಾನು ಬರೆಯಲೇ ಬೇಕು ಎಂದು ಹಾಸ್ಯಮಾಡಿದ್ದಾರೆ. ನೀನೂ ಬಸವರಾಜ್ ರವರ ಗರಡಿಗೆ 1990 ರ ನಂತರ ಬಂದವನು, ನಾನೂ 1990 ರವರೆಗಿನ ‘ತಂತ್ರಕುತಂತ್ರಗಳÀ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಇವರೆಲ್ಲರೂ ನನ್ನ ಬಳಿ ಚರ್ಚೆ ಮಾಡಿದಾಗ ನಾನು ಅವರಿಗೆ ನೇರವಾಗಿ ಹೇಳಿದ್ದು, ಜಿ.ಎಸ್.ಬಸವರಾಜ್ ರವರ ಮನದಾಳದಲ್ಲಿ ಏನಿದೆ ಎಂಬ ಬಗ್ಗೆ, ಅರಿತ ನಂತರ ಒಂದು ನಿರ್ಧಾರಕ್ಕೆ ಬರುವುದಾಗಿ ಎಲ್ಲರಿಗೂ ತಿಳಿಸಿದ್ದೆ. ಮೊನ್ನೆ ಶ್ರೀ.ಜಿ.ಎಸ್.ಬಸವರಾಜ್ ರವರ ಅಭಿಮಾನಿ ಬಳಗ ಅವರಿಗೆ, ಅಭಿನಂಧನಾ ಸಮಾರಂಭ ಏರ್ಪಡಿಸಿದ ನಂತರ ಅಭಿನಂಧನಾ ಗ್ರಂಥಕ್ಕೆ ಚಾಲನೆ ದೊರಕಿದೆ ಎಂದರೆ ತಪ್ಪಾಗಲಾರದು.

 ನಾನು ಈ ಬಗ್ಗೆ ನೇರವಾಗಿ ಬಸವರಾಜ್ ರವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಅವರ ಮನದಾಳದ ಬಗ್ಗೆ ಖಾತರಿ ಪಡಿಸಿಕೊಂಡಿದ್ದೇನೆ. ಈಗ ಒಂದು ಅಂತಿಮ ತೀರ್ಮಾನ ಕೈಗೊಂಡು ಅಭಿನಂಧನಾ ಗ್ರಂಥ ಬರೆಯಲು ಇಚ್ಚಿಸಿದ ಎಲ್ಲರನ್ನೂ ಒಳಗೊಂಡ ಸಂಪಾದಕ ಮಂಡಳಿ’ ರಚಿಸಿ, ಎಲ್ಲರ ಅನಿಸಿಕೆಗಳಿಗೆ ಇಂಬು ಕೊಡಲು ಅವರ ಅಪಾರ ಅಭಿಮಾನಿಗಳೂ ಮುಂದೆ ಬಂದಿದ್ದಾರೆ. ಅವರ ಕುಟುಂಬ ಮತ್ತು ಹುಟ್ಟೂರು ಗಂಗಸಂದ್ರದವರ ಅಭಿಪ್ರಾಯ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಈ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ:01.06.2022 ರಂದು ಬೆಳಿಗ್ಗೆ 10 ಗಂಟೆಗೆ ಕುಣಿಗಲ್ ರಸ್ತೆ ರಾಮಕೃಷ್ಣಾ ನಗರದಲ್ಲಿರುವ ಸಾಯಿಬಾಬಾ ಮಂದಿರದ ಕಚೇರಿಯಲ್ಲಿ ಒಂದು ಸಭೆ ಕರೆಯಲಾಗಿದೆ. ಆಸಕ್ತರು ಭಾಗವಹಿಸಲು ಈ ಮೂಲಕ ಮನವಿ ಮಾಡಲಾಗಿದೆ.

  1. ಅಭಿನಂಧನಾ ಗ್ರಂಥದ ಸಂಪಾದಕ ಮಂಡಳಿ,
  2. ಅಭಿನಂಧನಾ ಸಮಾರಂಭದ ವಿವಿದ ಉಪಸಮಿತಿಗಳ ರಚನೆ.
  3. ಪೂರಕವಾಗಿ ಹಲವಾರು ಕಡೆ ವಿವಿಧ ಕಾರ್ಯಕ್ರಮದ ಉಪಸಮಿತಿಗಳ ರಚನೆ

  ಬಗ್ಗೆಯೂ ಪೂರ್ವಭಾವಿ ಚರ್ಚೆ ಆರಂಭವಾಗಿದೆ. ಬಸವರಾಜ್ ರವರಿಗೆ ಬಹಳ ಅಭಿಮಾನಿಗಳು ಇದ್ದಾರೆ, ಎಲ್ಲಾ ಪಕ್ಷಗಳಲ್ಲೂ, ಎಲ್ಲಾ ಜಾತಿಗಳಲ್ಲೂ, ಎಲ್ಲಾ ವರ್ಗದವರೂ ಇದ್ದಾರೆ, ಅವರ ಅಭಿಮಾನಿಗಳಲ್ಲಿ ವಿಷಯಾಧರಿತ, ಹಲವಾರು ಗುಂಪುಗಳಿದ್ದರೂ, ಬಸವರಾಜ್‍ರವರ ವಿಚಾರ ಬಂದರೆ ಪ್ರಾಣಕೊಡುವ ಅಭಿಮಾನಿಗಳೂ  ಇದ್ದಾರೆ.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ವೈಯಕ್ತಿಕವಾಗಿ ಹಲವಾರು ಭಿನ್ನಾಭಿಪ್ರಾಯಗಳಿದ್ದರೂ,  ಇದು ಬಸವರಾಜ್ ರವರ ಕಾರ್ಯಕ್ರಮವಾದ್ದರಿಂದ ಎಲ್ಲರನ್ನೂ ಒಳಗೊಂಡ ಕಾರ್ಯಕ್ರಮ ನಡೆಸುವುದು ಅವರ ಅಭಿಮಾನಿಗಳ ಇಚ್ಚೆ ಆಗಿದೆ. ಆದ್ದರಿಂದ ಎಲ್ಲರೂ ಒಂದಲ್ಲ ಒಂದು ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಜಿ.ಎಸ್.ಬಸವರಾಜ್ ರವರ ಅಭಿಮಾನಿ ಬಳಗದ  ಮನವಿ.