5th December 2024
Share

TUMAKURU:SHAKTHIPEETA FOUNDATION

ತುಮಕೂರಿನ ಕನ್ನಡ ಪ್ರಭ ವರದಿಗಾರಾರದ ಶ್ರೀ ಅದಲಗೆರೆ ನಾಗೇಂದ್ರರವರು ಸುಮಾರು 14 ವರ್ಷಗಳ ಹಿಂದೆ, 2008 ರಲ್ಲಿ ನನಗೆ ಹೇಳಿದ ಮಾತು ಕುಂದರನಹಳ್ಳಿಯವರೇ ನೀವೂ ತುಮಕೂರು ಖಾಲಿ ಮಾಡಿ, ಬೆಂಗಳೂರಿಗೋ ಅಥವಾ ದೆಹಲಿಗೆ ಹೋಗಿ ನಿಮ್ಮ ಶ್ರಮಕ್ಕೆ ಬೆಲೆ ಸಿಗುತ್ತದೆ.

ಈ ಬಾವಿಯಂತೆ ಇರುವ ತುಮಕೂರಿನಲ್ಲಿ ನಿಮಗೆ ಬೆಲೆ ಇಲ್ಲ, ಸಮುದ್ರದಲ್ಲಿ ಈಜಾಡಿ, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನವನ್ನಾದರೂ ತರಬಹುದು ಎಂಬ ಖಡಕ್ ಮಾತು ಹೇಳಿದ್ದರು. ಅಂದು ಅವರ ಮಾತಿಗೆ ನನ್ನ ಮೌನವೇ ಉತ್ತರವಾಗಿತ್ತು.

ಕಳೆದ ಆಗಸ್ಟ್‍ನಲ್ಲಿ ನಾನು ನಮ್ಮ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಉತ್ತರಖಂಡ ರಾಜ್ಯದ ಸಂಶೋಧಕರೊಬ್ಬರೂ ನೀಡಿದ್ದ 4 ರುದ್ರಾಕ್ಷಿಗಳನ್ನು ಭೂಮಿಯಲ್ಲಿ ಊಳಬೇಕಿತ್ತು, ಮಣ್ಣಿನ ಮಡಿಕೆ ಮತ್ತು ಇತರೆ ಸಾಮಾನು ತರಲು ಹೊರಪೇಟೆಗೆ ಹೋಗುತ್ತಿದ್ದೆ. ಅವರು ದಾರಿಯಲ್ಲಿ ಸಿಕ್ಕರು ನನ್ನ ಜೊತೆ ಬಂದರು.

( ರುದ್ರಾಕ್ಷಿ ಹಿನ್ನಲೆ.

ನಾನು ಮತ್ತು ನಮ್ಮ ಸ್ನೇಹಿತರಾದ ಶ್ರೀ ಹರೀಶ್ ಮತ್ತು ಶ್ರೀ ಅಶೋಕ್ ದಂಪತಿಗಳು 2019 ರಲ್ಲಿ  ಶಕ್ತಿಪೀಠಗಳ ಅಧ್ಯಯನಕ್ಕೆ ಉತ್ತರಖಂಡ ರಾಜ್ಯಕ್ಕೆ ಹೋಗಿದ್ದಾಗ, ಹರಿಧ್ವಾರದಲ್ಲಿ ಅವರು ರುದ್ರಾಕ್ಷಿ ಸರ ಕೊಂಡು ಕೊಳ್ಳುತ್ತಿದ್ದರು.

 ನಾನು ದೂರದಲ್ಲಿ ನಿಂತಿದ್ದೆ. ಆ ಸಂಶೋಧಕರಿಗೆ ನಮ್ಮ ಶಕ್ತಿಪೀಠ ಕ್ಯಾಂಪಸ್ ಬಗ್ಗೆ ಅಶೋಕ್ ರವರು ಹೇಳಿದ್ದರಿಂದ ಅವರು ನನ್ನನ್ನು ಕರೆದರು. ನಿಮ್ಮನ್ನು ಎಲ್ಲೋ ನೋಡಿದ್ದೇನೆ ಎಂದಾಗ, ನಾನು ಅವರಿಗೆ ಹೇಳಿದ ಮಾತು ಸತಿ ಯಜ್ಞಕುಂಡಕ್ಕೆ ಬಿದ್ದಾಗ ನಾನು ಮತ್ತು ನೀವೂ ಯಜ್ಞಕುಂಡದ ಬಳಿ ಇದ್ದೆವಲ್ಲಾ ಎಂದು ಜೋಕ್ ಮಾಡಿದೆ.

ನಂತರ ಅವರಿಗೆ ನನ್ನ ಪರಿಕಲ್ಪನೆಯ ಬಗ್ಗೆ ಹೇಳಿದೆ, ಈ ಕ್ಯಾಂಪಸ್ ಮಾಡಲು ನನ್ನಿಂದ ಸಾಧ್ಯವಾ  ಗುರೂಜಿ ಎಂದು ಕೇಳಿದೆ. ಅವರು ಜ್ಯೋತಿಷ್ಯ ಗಾರರೂ ಹೌದು. ಅವರು ಹೇಳಿದ ಮಾತು ಶಕ್ತಿದೇವತೆಯ ಬಗ್ಗೆ ಶಾಸ್ತ್ರ ಹೇಳುವವರು ಯಾರೂ ಈ ಭೂಮಿಯ ಮೇಲೆ ಇನ್ನೂ ಹುಟ್ಟಿಲ್ಲ.

ಅಷ್ಟಕ್ಕೂ ಶಕ್ತಿಪೀಠ ಕ್ಯಾಂಪಸ್ ಮಾಡಲು, ನೀವೂ ಯಾರು? ದೇವಿಯ ಆದೇಶದಂತೆ ನೀವೂ ಮಾಡುತ್ತಿದ್ದೀರಿ. ಆ ತಾಯಿ ನಿಲ್ಲಿಸು ಎಂದರೆ ನಿಲ್ಲಿಸಲೇ ಬೇಕು ಎಂಬ ಕಟು ಸತ್ಯದ ಮಾತು ಹೇಳಿದರು.

 ನಂತರ 4 ರುದ್ರಾಕ್ಷಿಗಳನ್ನು ನೀಡಿದರು, ನಾಲ್ಕು ದಿಕ್ಕಿನಲ್ಲಿ ಇಡಲು ತಿಳಿಸಿದರು. ಶಕ್ತಿಪೀಠ ಕ್ಯಾಂಪಸ್ ಪೂಜೆಗೆ ನನ್ನನ್ನು ಕರೆಯಿರಿ ಇನ್ನೊಂದು ರುದ್ರಾಕ್ಷಿಯನ್ನು ತಂದು ನಾನೇ ಇಟ್ಟು ಬರುತ್ತೇನೆ ಎಂದು ಹೇಳಿದರು. ನಾನು ರುದ್ರಾಕ್ಷಿಗೆ ಹಣ ಎಷ್ಟು ಎಂದು ಕೇಳಿದಾಗ ಅವರು ಹೇಳಿದ ಮಾತು ತಾಯಿ ನನಗೆ ಹೇಳಿದ್ದಾರೆ, ಇದು ನನ್ನ ಸೇವೆ, ಹಣ ಕೊಡಲು ನೀವೂ ಯಾರು? ಎಂದು ಪ್ರಶ್ನೆ ಮಾಡಿದ ರೀತಿ ಅಚ್ಚರಿಯಂತಿತ್ತು.)

ವಿವಿಧ ಸಾಮಾನುಗಳನ್ನು ಖರೀಸಿದ ನನಗೆ ಕುಡಿಕೆಕೊಂಡು ಕೊಳ್ಳಲು ಬೇಕಾದ ರೂ 375 ನನ್ನ ಬಳಿಯೂ ಇರಲಿಲ್ಲ. ಜೇಬು ಖಾಲಿಯಾಯಗಿತ್ತು. ಅದನ್ನು ಗಮನಿಸಿದ ನಾಗೇಂದ್ರ ಅವರ ಜೇಬಿನಲ್ಲಿದ್ದ ರೂ 400 ತೆಗೆದು ಕೊಟ್ಟರು. ನೋಡಿ ಕುಡಿಕೆಗೆ ಅವರ ಹಣದ ಋಣವಿತ್ತು.

ನಾನು ಅವರಿಗೆ ಒಂದು ವಾರದ ನಂತರ ಅವರ ಸಾಲ ತೀರಿಸಲು ಹೋದಾಗ ಅವರು ಮತ್ತೆ ನನಗೆ ಹೇಳಿದ ಮಾತು, ಈ ರೀತಿ ಆದರೆ ನೀವೂ ಶಕ್ತಿಪೀಠ ಕ್ಯಾಂಪಸ್ ಪೂರ್ಣಗೊಳಿಸಲು ಸಾಧ್ಯಾವಿಲ್ಲ, ಎಲ್ಲರಿಂದ ಹಣ ಪಡೆದರೆ ಮಾತ್ರ ಸಾಧ್ಯಾ ಎಂಬ ಮಾತು ಹೇಳಿದ್ದರು.

ಒಮ್ಮೆ ನಾನು ಮತ್ತು ಅವರು ಸೋಮೇಶ್ವರಪುರಂ ನಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಅವರ ಚಪ್ಪಲಿ ಕಿತ್ತು ಹೋಯಿತು. ಅಲ್ಲಿಯೇ ಇದ್ದ ಚಪ್ಪಲಿ ಅಂಗಡಿಗೆ ಹೋದೆವು, ಚಪ್ಪಲಿಗೆ ಬೇಕಾದ ರೂ 250 ಅಂದು ಅವರ ಜೇಬಿನಲ್ಲಿ ಇರಲಿಲ್ಲ. ನಾನೇ ಕೊಟ್ಟಿದ್ದೆ, ಕೆಲವು ದಿನಗಳ ನಂತರ ಅರ್ಜೆಂಟಾಗಿ ಮಾತನಾಡಬೇಕಿತ್ತು ಎಲ್ಲಿದ್ದೀರಿ ಕುಂದರನಹಳ್ಳಿ ಎಂದರು. ನಾನು ನಾಳೆ ಸಿಗುತ್ತೇನೆ ಎಂದು ಹೇಳಿದ್ದೆ.

ಏನೋ ಹೇಳಲು ಕರೆಯುತ್ತಾರೆ ಎಂದು ಹೋದರೆ, ಚಪ್ಪಲಿ ಸಾಲ ರೂ 250 ವಾಪಸ್ಸು ಕೊಡಲು ಬಂದರು. ನಾನು ಜಗಳ ಆಡಿದೆ, ಬೇಡ ಬಿಡಿ ಎಂದರೂ ನನ್ನ ಜೇಬಿಗೆ ಇಟ್ಟಿದ್ದರು. ಇದು ಅವರ ಸ್ವಾಭಿಮಾನದ ಸಂಕೇತವಾಗಿತ್ತು.

ಈಗ ಇಷ್ಟೆಲ್ಲಾ ಏಕೆ ಹೇಳುತ್ತೀದ್ದಾರೆ ಎಂದು ನಿಮಗೆ ಅನಿಸಬಹುದು.

ಹೌದು ಈಗ ನಾನು ತುಮಕೂರು ಖಾಲಿ ಮಾಡುವ ಸಮಯ ಬಂದಿದೆ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಮಾಡುವ ಹೊಣೆಗಾರಿಕೆ ನನ್ನದಾಗಿದೆ.

 ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್, ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡುವ ಪರಿಕಲ್ಪನೆಯು ನನ್ನದಾಗಿದೆ.

ಈ ಹಿನ್ನಲೆಯಲ್ಲಿ ದಿನಾಂಕ:06.07.2022 ನೇ ಬುಧವಾರ ಮಧ್ಯಾಹ್ನ 1 ಗಂಟೆಗೆ ತುಮಕೂರು ನಗರದ ಮಾಧ್ಯಮ ಸ್ನೇಹಿತರೊಂದಿಗೆ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಇರುವ ಸ್ಟ್ರಾಟಜಿ ಬಗ್ಗೆ ಸಮಾಲೋಚನೆ ಮಾಡಲು, ಮಾಧ್ಯಮ ಸ್ನೇಹಿತರ ಸಹಕಾರ ಪಡೆಯಲು, ತುಮಕೂರಿನ ಜಯನಗರದಲ್ಲಿರುವ ನಮ್ಮ ಕಚೇರಿಗೆ ಆಹ್ವಾನಿಸುತ್ತಿದ್ದೇನೆ. ಆಸಕ್ತರು ಬಂದು ನನಗೆ ಸೂಕ್ತ ಸಲಹೆ ಸಹಕಾರ ನೀಡಲು ಈ ಮೂಲಕ ಬಹಿರಂಗ ಮನವಿ.

ಈ ಸಭೆಯಲ್ಲಿ ಶ್ರೀ ಅದಲಗೆರೆ ನಾಗೇಂದ್ರರವರು ಅಂದು 2008 ರಲ್ಲಿ ಯಾವ ಕಾರಣಕ್ಕೆ  ಈ ರೀತಿ ಹೇಳಿದ್ದರು ಎಂಬ ಬಗ್ಗೆ ಮಾತನಾಡಲು ಮನವಿ ಮಾಡಲು ಇಚ್ಚಿಸಿದ್ದೇನೆ. ನಾನು 2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆ ಮಾಡುವಾಗ ನನಗೆ ಸಹಕಾರ ನೀಡಿದ್ದ ಶ್ರೀ ಅಯ್ಯರ್ ಅವರನ್ನು ಮಾತನಾಡಲು ಆಹ್ವಾನಿಸುತ್ತಿದ್ದೇನೆ. ಜೊತೆಗೆ ತುಮಕೂರು ಪ್ರೆಸ್ ಕ್ಲಬ್ ನ ಸ್ನೇಹಿತರು ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಸ್ನೇಹಿತರನ್ನು ಆಹ್ವಾನಿಸುತ್ತಿದ್ದೇನೆ. ನನ್ನ ಕೆಲವು ಅಭಿವೃದ್ಧಿ ಚಿಂತನೆಗಳಿಗೆ ಸಹಕಾರ ನೀಡುತ್ತಿರುವ ಪ್ರಜಾ ಪ್ರಗತಿ ಶ್ರೀ ನಾಗಣ್ಣನವರನ್ನು ಮಾತನಾಡಲು ಆಹ್ವಾನಿಸುತ್ತಿದ್ದೇನೆ.

ಬೆಳಿಗ್ಗೆ ನಮ್ಮ ಕಚೇರಿಯಲ್ಲಿ ನವಗ್ರಹ ದಾನ ಪೂಜೆ ನಡೆಯಲಿದೆ. ನಂತರ 11 ಗಂಟೆಯಿಂದ ನಿರಂತರವಾಗಿ  ಸಂಜೆವರೆಗೂ ಮಾಧ್ಯಮದವರೊಂದಿಗೆ ನನ್ನ ಸಂಭಂಧಿಕರೊಂದಿಗೆ  ಚರ್ಚೆ ನಡೆಸುವ ಚಿಂತನೆ ಇದೆ.

 ಕಳೆದ 34  ವರ್ಷಗಳ ಸುದೀರ್ಘ ಕಾಲ, ಕುಂದರನಹಳ್ಳಿ ಮತ್ತು ತುಮಕೂರಿನಲ್ಲಿ ನನ್ನ ಕಾರ್ಯಕ್ಷೇತ್ರ ಸೀಮಿತವಾಗಿತ್ತು. ಈಗ ಅಧಿಕೃತವಾಗಿ ಬೆಂಗಳೂರು, ದೆಹಲಿ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಯಾಂಪಸ್ ನಲ್ಲಿ ನನ್ನ ಅಧ್ಯಯನ ಆರಂಭವಾಗಲಿದೆ. ನನಗೆ ಸದಾ ಕಾಲ ಬೆಂಬಲ ನೀಡಿದ ತುಮಕೂರು ಮಾಧ್ಯಮ ಮಿತ್ರರನ್ನು ಮರೆಯಲು ಸಾದ್ಯಾವಿಲ್ಲ.

ಇದೂವರೆಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಟಿ.ಆರ್.ರೋಘೊತ್ತಮರಾವ್ ರವರು ಮತ್ತು ನನ್ನ ಇಷ್ಟದಂತೆ, ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದ ಅನುದಾನ ತರಲು ಶ್ರಮಿಸುತ್ತಿದ್ದೆನು.

ಇನ್ನೂ ಮುಂದೆ ಕರ್ನಾಟಕ ರಾಜ್ಯ ಸರ್ಕಾರದ ಯೋಜನಾ ಇಲಾಖೆಯ ಅಧೀನದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಬಾಗಿತ್ವದಲ್ಲಿ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು, 75 ಜನ ವಿಧಾನಸಭಾ ಸದಸ್ಯರ, 31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿ, 31 ಜಿಲ್ಲಾಧಿಕಾರಿಗಳು, 31 ಜನ ಜಿಲ್ಲಾ ಪಂಚಾಯತ್ ಸಿಇಓಗಳ ಸಲಹೆ ಮೇರೆಗೆ ಶ್ರಮಿಸುವುದು ನನ್ನ ಗುರಿಯಾಗಿದೆ.

 ಮುಖ್ಯಮಂತ್ರಿಗಳ ಅಧ್ಯಕ್ಷತೆಯ  ರಾಜ್ಯ ಮಟ್ಟದ ದಿಶಾ ಸಮಿತಿಯ ಮತ್ತು ಲೋಕಸಭಾ ಸದಸ್ಯರ ಅಧ್ಯಕ್ಷತೆಯ 31 ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವ ಅಲೋಚನೆ ನನ್ನದಾಗಿದೆ. ಈ ದಿಶಾ ಸಮಿತಿಗಳ ರಾಷ್ಟ್ರದಲ್ಲಿಯೇ ಮಾದರಿ ದಿಶಾ ಸಮಿತಿಗಳು ಆಗಬೇಕು ಎಂಬ ಹಂಬಲ ನನ್ನದಾಗಿದೆ.

ಮುಂದಿನ ಅಧಿವೇಶನ ನಡೆಯುವ ವೇಳೆ, ದೆಹಲಿಯಲ್ಲಿ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರೊಂದಿಗೆ ಸಮಾಲೋಚನೆ ಮಾಡುವ ಹಿನ್ನಲೆಯಲ್ಲಿ ಈ ಸಭೆ ನನಗೆ ಮಹತ್ವದ್ದಾಗಿದೆ.

ತುಮಕೂರು ಜಿಲ್ಲಾ ಜಲಗ್ರಂಥದ’ ಪರಿಕಲ್ಪನೆಯ ಬಗ್ಗೆ ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಲು ಸುಮಾರು ನಾಲ್ಕೈದು ದಿವಸ ರಾತ್ರಿ ಹಗಲು ಶ್ರಮಿಸಿದ ತಂಡದೊಂದಿಗೆ, ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ರವರನ್ನು ದಿನಾಂಕ:01.07.2022 ರಂದು ಬೆಂಗಳೂರಿನಲ್ಲಿ ಭೇಟಿಯಾಗಲು, ಹೊರಟಾಗ ತುಮಕೂರು ವಿಶ್ವ ವಿದ್ಯಾನಿಲಯದ ಮುಂಭಾಗ ರಸ್ತೆಯಲ್ಲಿ ತೆಗೆದ ಚಿತ್ರ.