27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಇದೊಂದು ವಿಶಿಷ್ಠ ರೀತಿಯ ಹುಚ್ಚು. ಆದರೂ ಇದರ ಅವಶ್ಯಕತೆ ಬಹಳ ಇದೆ. ಬಾಯಿದ್ದವನೂ ಬರದಲ್ಲೂ ಬದುಕಿz ಹಾಗೂ ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣÀ ಎಂಬ ಗ್ರಾಮೀಣ ಗಾದೆಯಂತೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಿದೆ.

ತುಮಕೂರು ಜಿಲ್ಲೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಈಗ ಯಾರು ಬೇಕಾದರೂ ಹೇಳ ಬಹುದು,ಬೆಂಗಳೂರಿಗೆ ತುಮಕೂರು ಹತ್ತಿರವಿದೆ, ಆದಕ್ಕೆ ಯೋಜನೆಗಳು ಬಂದಿವೆ ಎಂದು ಉಡಾಫೆ ಹೊಡೆಯಬಹುದು.

ಏಕೆ ಬೆಂಗಳೂರಿಗೆ ಇನ್ನೂ ಹತ್ತಿರವಿರುವ ಜಿಲ್ಲೆಗಳು ಇರಲಿಲ್ಲವಾ? ಜಮೀನು ಬೆಲೆ ಕಡಿಮೆ ಇರುವ ಜಿಲ್ಲೆಗಳು ಇರಲಿಲ್ಲವಾ? ಗಟಾನುಘಟಿ ರಾಜಕಾರಣಿಗಳು ಇರುವ ಜಿಲ್ಲೆಗಳು ಇರಲಿಲ್ಲವಾ? ತುಮಕೂರು ಜಿಲ್ಲೆಯಲ್ಲಿ  ಕಳೆದ 21 ವರ್ಷಗಳಿಂದ ಒಂದು ಅಭಿವೃದ್ಧಿ ಲಾಭಿ ಕಾರ್ಯ ನಿರ್ವಹಿಸುತ್ತಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಇದರ ನೇತೃತ್ವ ವಹಿಸಿದೆ. ಸ್ವತಃ ಈಗಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪೋಷಕರಾಗಿರುವುದು ಒಂದು ವಿಶೇಷ. ಅಧಿಕಾರ ಇರಲಿ, ಇಲ್ಲದಿರಲಿ ಜಿಎಸ್‍ಬಿ ರವರು ಸದಾ ಫೋರಂ ಜೊತೆ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗ ಶಕ್ತಿಪೀಠ ಫೌಂಡೇಷನ್ ರಾಜ್ಯದ 28 ಜನ ಲೋಕಸಭಾ ಸದಸ್ಯರು ಹಾಗೂ 12 ಜನ ರಾಜ್ಯಸಭಾ ಸದಸ್ಯರ ಮಾರ್ಗದರ್ಶನದಲ್ಲಿ  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಅಭಿವೃದ್ಧಿ ಲಾಭಿ ನಡೆಸಲು ಸನ್ನದವಾಗುತ್ತಿದೆ.

ಈ ಕಾರ್ಯಕ್ಕೆ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಯೋಜನಾ ಇಲಾಖೆಯ ಅಧೀನದಲ್ಲಿರುವ ‘ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಲು ಎರೆಯಲು ಮುಂದೆ ಬಂದಿದೆ. ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ನಮ್ಮ ಶಕ್ತಿಪೀಠ ಫೌಂಡೇಷನ್ ಪರಿಕಲ್ಪನೆಗೆ ಅಸ್ತು ಎಂದಿದ್ದಾರೆ.

ಕಳೆದ 34 ವರ್ಷದ ಅಭಿವೃದ್ಧಿ ಲಾಭಿ ಮಾಡುತ್ತಿರುವ ನನಗೆ ಈ ಅವಕಾಶ ದೊರೆತಿರುವುದು ನಿಜಕ್ಕೂ ಹೆಮ್ಮೆಯೆನಿಸಿದೆ. ನನ್ನ ಪ್ರಕಾರ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಮತ್ತು ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯ ದಿಶಾ ಸಮಿತಿ, ಚುರುಕಾದರೆ, ನಮ್ಮ ಚಿಂತನೆಗೆ ಆನೆ ಬಲ ಬರಲಿದೆ.

—————-ಸರಣಿ ಲೇಖನ ಮುಂದುವರೆಯಲಿದೆ,

ಸಲಹೆ ಮಾರ್ಗದರ್ಶನಕ್ಕಾಗಿ ಬಹಿರಂಗ ಮನವಿ.