27th July 2024
Share

TUMAKURU:SHAKTHI PEETA FOUNDATION

ರಾಜ್ಯದಲ್ಲಿ, ಸುಮಾರು 250 ಕ್ಕೂ ಹೆಚ್ಚು, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರು ಮತ್ತು 31 ಜಿಲ್ಲೆಗಳ ದಿಶಾ ಸಮಿತಿ ಸದಸ್ಯರು ಇರುತ್ತಾರೆ. ಇವರೆಲ್ಲರೂ ಸಹ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ  ಸಿದ್ಧಪಡಿಸಲು ಮತ್ತು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಆಶಯದಂತೆ, ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯವನ್ನಾಗಿಸಲು ಕೈಜೋಡಿಸಲು ಚಿಂತನೆ ಆರಂಭವಾಗಿದೆ.

ಈ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ:11.07.2022 ರಂದು ಬೆಂಗಳೂರಿನ Bowring Institute,19 St Mark’s Road.Shanthala Nagar, Ashoknagar, Bengaluru, Karnataka-560001   ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಳಕಂಡ  ವಿಷಯಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಲಿದೆ.

  1. ಪ್ರತಿಯೊಬ್ಬ ದಿಶಾ ಸಮಿತಿ ಸದಸ್ಯರು ಕೇಂದ್ರ ಸರ್ಕಾರದ ಒಂದೊಂದು ಯೋಜನೆ ಬಗ್ಗೆ ಆಳವಾದ ಅಧ್ಯಯನ ಮಾಡುವುದು.
  2. ಒಂದೊಂದು ಯೋಜನೆಯ ನಿಖರವಾದ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.
  3. ಪ್ರತಿಯೊಬ್ಬ ಸದಸ್ಯರು ಒಂದೊಂದು ಕೇಂದ್ರ ಸರ್ಕಾರದ ಯೋಜನೆಯ ವಿಷನ್ ಗ್ರೂಪ್ ರಚಿಸಿಕೊಂಡು ನಿರಂತರವಾಗಿ ಶ್ರಮಿಸುವುದು.
  4. ನಿರ್ಧಿಷ್ಠವಾದ ಯೋಜನೆಗೆ ಸಂಭಂಧಿಸಿದ ಇಲಾಖಾ ಮುಖ್ಯಸ್ಥರಿಂದ ಆರಂಭಿಸಿ, ಕೇಸ್ ವರ್ಕರ್ ರವರ ಜೊತೆ ಉತ್ತಮ ಸಂಬಂದ ಇಟ್ಟುಕೊಳ್ಳುವುದು.
  5. ಒಂದೊಂದು ವಿಧಾನಸಭಾ ಕ್ಷೇತ್ರವಾರು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಮೌಲ್ಯಮಾಪನ ಮಾಡಲು ಸಹಕರಿಸುವುದು

ಪ್ರತಿಯೊಬ್ಬ ದಿಶಾ ಸಮಿತಿಯ ಸದಸ್ಯರ ಹೊಣೆಗಾರಿಕೆ ಜೊತೆಗೆ, ರಾಜ್ಯದ ಪ್ರತಿಯೊಂದು ಜಿಲ್ಲೆಗಳ ಜಿಲ್ಲಾ ಮಟ್ಟದ ಪೂರ್ಣ ಪ್ರಮಾಣದ ದಿಶಾ ಸಮಿತಿಗಳು ರಚನೆಯಾಗಿರುವ ಬಗ್ಗೆಯೂ ಮಾಹಿತಿ ದೊರೆಯಲಿದೆ.

—————-ಸರಣಿ ಲೇಖನ ಮುಂದುವರೆಯಲಿದೆ,

ಸಲಹೆ ಮಾರ್ಗದರ್ಶನಕ್ಕಾಗಿ ಬಹಿರಂಗ ಮನವಿ.