TUMAKURU:SHAKTHI PEETA FOUNDATION
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದಿಶಾ ಸಮಿತಿಗಳನ್ನು ರಚಿಸಿರುವುದು, ದೇಶದ ಪ್ರತಿಯೊಂದು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ಅನುದಾನದ ಸಮರ್ಪಕ ಬಳಕೆಗಾಗಿ. ಎಲ್ಲಾ ಜಿಲ್ಲೆಗಳಿಗೂ ಮೋದಿಯವರ ಬರಲು ಸಾಧ್ಯಾವಿಲ್ಲ. ಪಕ್ಷಾತೀತವಾಗಿ, ಸಂಸದರು ಅವರªರÀ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಅಧಿಕಾರ ನೀಡಿದ್ದಾರೆ.
ಆದರೇ ಕಾರಣ ಗೊತ್ತಿಲ್ಲ, ದೇಶದ ಹಲವಾರು ಜನ ಲೋಕಸಭಾ ಸದಸ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಯವರು, ಈ ಬಗ್ಗೆ ಕಾಳಜಿ ವಹಿಸಿಲ್ಲ, ವಹಿಸಿದ್ದರೂ ಕಾಟಚಾರಕ್ಕೆ ಸಭೆ ನಡೆದಿರುವ ಮಾಹಿತಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ನಡೆಯುತ್ತಿರುವ ದಿಶಾ ಸಮಿತಿ ಸಭೆಗಳನ್ನು ಅವಲೋಕನ ಮಾಡಿದಾಗ ತಿಳಿಯುತ್ತಿದೆ.
ಕರ್ನಾಟಕ ರಾಜ್ಯದ ದಿಶಾ ಸಮಿತಿಗಳು, ದೇಶದಲ್ಲಿಯೇ ಮಾದರಿಯಾಗಿರಲು ಹಾಗೂ ‘ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ’ ಸಿದ್ಧಪಡಿಸಲು, ಸಂಸದರ ಪಾತ್ರ ಮಹತ್ತರವಾಗಿದೆ.
ಈ ಕೆಳಕಂಡ ವಿಷಯಗಳ ಬಗ್ಗೆ ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯ ಸಭಾ ಸದಸ್ಯರು ಸೇರಿದಂತೆ 40 ಜನರೊಂದಿಗೂ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ.
ನಾನು 2014 ರಲ್ಲಿ ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೋಕಿಗೆ ಮಂಜೂರಾಗಿದ್ದ ಹೆಚ್.ಎ.ಎಲ್ ಘಟಕವನ್ನು ಗೋವಾಕ್ಕೆ ಸ್ಥಳಾಂತರಿಸುವ ವಿಷಯ ಹೊರಬಿದ್ದಾಗ, ದೆಹಲಿಯಲ್ಲಿ ಸುಮಾರು 35 ಜನ ಸಂಸದರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ಕೇಂದ್ರದ ಹಾಲಿ ಸಚಿವರು ಮತ್ತು ಮಾಜಿ ಸಚಿವರಿಂದ ಪ್ರಧಾನಿಯವರಿಗೆ ಪತ್ರ ಬರೆಸಿದ ಮಾದರಿಯನ್ನು ಮತ್ತೊಮ್ಮೆ ಅನುಸರಿಸಲು ಸಿದ್ಧತೆ ನಡೆಯುತ್ತಿದೆ.
ಈ ತಿಂಗಳು ಲೋಕಸಭಾ ಹಾಗೂ ರಾಜ್ಯ ಸಭಾ ಅಧಿವೇಶನ ನಡೆಯುವಾಗ, ದೆಹಲಿಯಲ್ಲಿ ಎಲ್ಲಾ ಸಂಸದರನ್ನು ಬೇಟಿ ಮಾಡಲಾಗುವುದು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರೊಂದಿಗೆ ಚರ್ಚೆಸಿದಾಗ ಅವರು ಸಹ ವಿಶೇಷ ಕಾಳಜಿ ವಹಿಸಿದ್ದರು. ಅವರೇ ಸಂಸದರ ಸಭೆ ನಡೆಸುವ ಬಗ್ಗೆಯೂ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಈಗ ಮತ್ತೊಮ್ಮೆ ಅವರೊಂದಿಗೂ ಸಮಾಲೋಚನೆ ನಡೆಸಲಾಗುವುದು.
- ಜಿಲ್ಲಾ ಮಟ್ಟದಲ್ಲಿ ಇರುವ ದಿಶಾ ಸಮಿತಿಗಳನ್ನು, ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೀಮೀತ ಗೊಳಿಸಿ ದಿಶಾ ಸಮಿತಿ ರಚಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯುವುದು.
- ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ದಿಶಾ ಸಮಿತಿ ರಚಿಸುವವರೆಗೂ, ಆಯಾ ಲೋಕಸಭಾ ಸದಸ್ಯರು, ಅಗತ್ಯ ಬಿದ್ದಾಗ ಅವರ ಅಧ್ಯಕ್ಷತೆಯಲ್ಲಿ ಯೋಜನಾವಾರು, ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಲು, ಇರುವ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು.
- ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ ಕಡ್ಡಾಯವಾಗಿ, ಪ್ರತಿಯೊಂದು ಯೋಜನೆಯ ಹಣ ಬಳಕೆ(ಯುಸಿ) ಪತ್ರಗಳ ಬಗ್ಗೆ ನಿರ್ಣಯ ಮಾಡುವ ವಿಚಾರ ಸೇರ್ಪಡೆ ಮಾಡುವುದು.
- ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ, ಆಯಾ ಜಿಲ್ಲೆಗೆ, ರಾಜ್ಯಕ್ಕೆ, ಮಂಜೂರಾಗಿರುವ ಪ್ರತಿಯೊಂದು ಯೋಜನೆಯ ಅನುದಾನದ ಇಂಡೆಕ್ಸ್ ಮಾಡಿ, ಶೇಕಡವಾರು ಹಣ ಬಳಕೆ ಬಗ್ಗೆ ಚರ್ಚೆ ನಡೆಸುವುದು.
- ಕೇಂದ್ರ ಸರ್ಕಾರದ ಪ್ರತಿಯೊಂದು ಘೋಷಣೆಗಳ ಬಗ್ಗೆ ಆಯಾ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ ಕಡ್ಡಾಯವಾಗಿ ಚರ್ಚೆ ನಡೆಸುವುದು.
- ಆಯಾ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಧ್ಯಯನ ತಂಡ ಆಗಮಿಸುವ ಮುನ್ನ ಎಲ್ಲಾ ದಿಶಾ ಸಮಿತಿ ಸದಸ್ಯರ ಗಮನಕ್ಕೆ ತರುವುದು ಹಾಗೂ ಮುಂದಿನ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
- ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಪಿಪಿಪಿ ಮಾದರಿಯಲ್ಲಿ ಸಂಸದರ ಪೋರ್ಟಲ್ ಆರಂಭಿಸುವುದು, 1947 ರಿಂದಲೂ ಆಯಾ ಸಂಸದರ ಕಾಲದಲ್ಲಿನ ಯೋಜನೆಗಳ ಮಾಹಿತಿ ಸಂಗ್ರಹಿಸಿ, ಅಪ್ ಲೋಡ್ ಮಾಡುವುದು.
- ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಪ್ರತಿಯೊಂದು ಯೋಜನೆಯ, ರಿಯಲ್ ಟೈಮ್ ಡಾಟಾ ಬಗ್ಗೆ ಕಡ್ಡಾಯವಾಗಿ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
- ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಪ್ರತಿಯೊಂದು ಯೋಜನೆಯ, ಜಿಐಎಸ್ ಲೇಯರ್ ಬಗ್ಗೆ ಕಡ್ಡಾಯವಾಗಿ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
- 40 ಜನ ಸಂಸದರ ಸಭೆಗೆ ಅಗತ್ಯವಿರುವ ಕೇಂದ್ರದ ವಿವಿಧ ಖಾತೆಗಳ ಸಚಿವರನ್ನು ಆಹ್ವಾನಿಸಿ, ಆಯಾ ಇಲಾಖೆಯ ಯೋಜನೆಗಳ ಕಡತಗಳು ನೆನೆಗುದಿಗೆ ಬಿದ್ದಿರುವ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವುದು.
- ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯೋಜನೆಗಳ ಮಾಹಿತಿಯನ್ನು, ಪ್ರತಿಯೊಬ್ಬ ಸಂಸದರಿಗೂ ಮೊಬೈಲ್‍ನಲ್ಲಿ ನೋಡಿಕೊಳ್ಳುವಂತೆ ಮಾಹಿತಿ ಅಪ್ ಡೇಟ್ ಮಾಡುವುದು.
- ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದರ ನೇತೃತ್ವದಲ್ಲಿ ದಿಶಾ ಅಧ್ಯಯನ ಪೀಠ ಸ್ಥಾಪಿಸುವುದು.
- ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ, ದಿಶಾ ಭವನ ನಿರ್ಮಾಣ ಮಾಡುವುದು.
- ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದ ಬಗ್ಗೆ ಮತ್ತು ನಾಮ ನಿರ್ದೇಶನ ದಿಶಾ ಸಮಿತಿ ಸದಸ್ಯರ ತಂಡ ಕಾಮಗಾರಿ ವೀಕ್ಷಣೆ ಮಾಡಲು ಹೈಟೆಕ್ ದಿಶಾ ಮೊಬೈಲ್ ವಾಹನ ನಿರ್ವಹಣೆ ಮಾಡುವುದು.
- ಯಾವುದೇ ಸಂಸದರು, ಯಾವುದೇ ಯೋಜನೆಯ ಬಗ್ಗೆ ಮಾಹಿತಿ ಕೇಳಿದಾಗ, ತಕ್ಷಣ ನಿಖರವಾದ ಮಾಹಿತಿ ನೀಡಲು ದಿಶಾ ಕಾಲ್ ಸೆಂಟರ್ ಆರಂಭಿಸುವುದು.
- ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ನಾಮ ನಿರ್ದೆಶನ ಸದಸ್ಯರಿಗೆ ತರಬೇತಿ ಮತ್ತು ಹೊಣೆಗಾರಿಕೆ ನೀಡುವುದು.
- 40 ಜನ ಸಂಸದರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಿಸಲು ಹೊಣೆಗಾರಿಕೆ ವಹಿಸಿಕೊಳ್ಳುವುದು.
- 12 ಜನ ರಾಜ್ಯಸಭಾ ಸದಸ್ಯರ ತಂಡ ಕೇಂದ್ರ ಸರ್ಕಾರದ ಪ್ರತಿಯೊಂದು, ಯೋಜನೆಗಳನ್ನು, ನಮ್ಮ ರಾಜ್ಯದ ಯಾವ ಲೋಕಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸ ಬಹುದು ಎಂಬ ಬಗ್ಗೆ ಅಧ್ಯಯನ ಮಾಹಿÀತಿ ನೀಡುವುದು.
- ಪಿಪಿಪಿ ಮಾದರಿಯಲ್ಲಿ ಕೇಂದ್ರ ಸರ್ಕಾರದ ಅನುದಾನಗಳ ಅಧ್ಯಯನದ ‘ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕ್ಯಾಪ್ಚರಿಂಗ್ ಜಿಓಐ ಫಂಡ್ಸ್’ ಸೆಂಟರ್ ಸ್ಥಾಪಿಸುವುದು.
- ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಹಿರಿಯ ಸಚಿವರ ಅಧ್ಯಕ್ಷತೆಯಲ್ಲಿ ಸಂಸದರ ಸಮಿತಿ ರಚಿಸುವುದು.
- ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯ ಸಭಾ ಸದಸ್ಯರು ಸೇರಿದಂತೆ 40 ಜನರ ಸಭೆಯು ಪ್ರತಿ ಅಧಿವೇಶನದ ಸಮಯದಲ್ಲಿ ನಡೆಸಲು ಕನ್ವೀನಿಯರ್ ನೇಮಕ ಮಾಡಿಕೊಳ್ಳುವುದು. (ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಕಾಲದಲ್ಲಿ ರಚಿಸಲಾಗಿತ್ತು)
- ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಐಎಎಸ್ ಮಾಡುವ ವಿಧ್ಯಾರ್ಥಿಗಳ ಹಾಸ್ಟೆಲ್ ಸ್ಥಾಪಿಸಿ, ಅವರ ಮೂಲಕ ಕೇಂದ್ರದ ಪ್ರತಿಯೊಂದು ಯೋಜನೆಗಳ ಮಾಹಿತಿ ಸಂಗ್ರಹಣೆ ಮಾಡಿಸುವುದು.
- ರಾಜ್ಯದ ಮುಖ್ಯ ಮಂತ್ರಿಯವರು ಮತ್ತು ಸಚಿವರುಗಳ ವಿವಿಧ ಯೋಜನೆಗಳ ಬಗ್ಗೆ ಕೇಂದ್ರ ಸಚಿವರುಗಳ ಬಳಿ ನಿಯೋಗ ಕೊಂಡೊಯ್ಯುವಾಗ, ಯೋಜನೆಯ ವ್ಯಾಪ್ತಿಯÀ ಸಂಸದರನ್ನು ನಿಯೋಗದಲ್ಲಿ ಸೇರ್ಪಡೆ ಮಾಡುವುದು.
- ಸಂಸದರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಬರೆದ ಪತ್ರಗಳ ಬಗ್ಗೆ, ರಾಜ್ಯ ಸರ್ಕಾರದ ಅಭಿಪ್ರಾಯ ಅಥವಾ ಸೂಕ್ತ ಪ್ರಸ್ತಾವನೆ ಕೇಳಿ ಕೇಂದ್ರ ಸರ್ಕಾರ ಬರೆಯುವ ಪತ್ರದ ಮಾಹಿತಿ ಬಗ್ಗೆ, ತಕ್ಷಣ ಆಯಾ ಲೋಕಸಭಾ ಸದಸ್ಯರ ಜೊತೆ ಸಮಾಲೋಚನೆ ನಡೆಸುವುದು.
- ಪ್ರತಿಯೊಬ್ಬ ಸಂಸದರಿಗೂ ಒಬ್ಬೊಬ್ಬ ಅಭಿವೃದ್ಧಿ ಸಲಹಾಗಾರರನ್ನು ನೇಮಿಸಿಕೊಳ್ಳಲು, ರಾಜ್ಯ ಸರ್ಕಾರ ನಿಯಮ ರೂಪಿಸುವುದು.
- ಪ್ರತಿ ಅಧಿವೇಶನದ ಅವಧಿಯಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ಸಭೆ ನಡೆಸುವುದು ಹಾಗೂ ಸಂಸದರು ನಡೆಸಿದ ಸಭೆ ನಿರ್ಣಯಗಳ ಬಗ್ಗೆ, ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಮಾಡುವುದು.
- ಕರ್ನಾಟಕ ಭವನದ ಅಧಿಕಾರಿಗಳನ್ನು ಚುರುಕುಗೊಳಿಸುವುದು ಮತ್ತು ಸಂಸದರ ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯ ಮತ್ತು ನೌಕರರÀ ಪ್ರಗತಿ ಬಗ್ಗೆ ಪರಿಶೀಲನೆ ನಡೆಸುವುದು.
- ದೆಹಲಿ ಪ್ರತಿ ನಿಧಿಯ ಕಚೇರಿ ಪಾದರಸದಂತೆ, ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು.
ಈ ಮೇಲ್ಕಂಡ ಅಂಶಗಳ ಬಗ್ಗೆ ಸಂಸದರ ಸಭೆಯಲ್ಲಿ ನಿರ್ಣಯ ಮಾಡಿ, ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಮತ್ತು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಗಮನಕ್ಕೆ ತರಲು ರೂಪುರೇಷೆ ನಿರ್ಧರಿಸುವುದು ಅಗತ್ಯವಾಗಿದೆ.
—————-ಸರಣಿ ಲೇಖನ ಮುಂದುವರೆಯಲಿದೆ,
ಸಲಹೆ ಮಾರ್ಗದರ್ಶನಕ್ಕಾಗಿ ಬಹಿರಂಗ ಮನವಿ.