27th July 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್

ಆಡಳಿತ ಕಛೇರಿ:ಪಾರ್ವತಿ ನಿಲಯ, 1 ನೇ ಮುಖ್ಯ ರಸ್ತೆ. ಜಯನಗರ ಪೂರ್ವ,ಶೆಟ್ಟಿಹಳ್ಳಿ ಮುಖ್ಯ ರಸ್ತೆ, ತುಮಕೂರು-572102

ಶಕ್ತಿಪೀಠ ಇ-ಪೇಪರ್, ಮೊ: 9886774477,  e-mail:rameshkundaranahalli@gmail.com www.shakthipeeta.in

ಕ್ರಮಾಂಕ:ಶಕ್ತಿ/ಎಂಪಿ/1/2022                                 ದಿನಾಂಕ:20.07.2022

ಗೆ.

ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರಿಗೆ.

100 ನೇ ವರ್ಷದ ಸ್ವಾತಂತ್ರ್ಯದತ್ತಾ- ನಮ್ಮ ಚಿತ್ತ.

1947(0)                                    2022(75)                                         2047(100)

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ’

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಜೊತೆ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾದ ಕುಂದರನಹಳ್ಳಿ ರಮೇಶ್ ಆದ ನಾನು ಎಂ.ಓ.ಯು ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ’ ಸಿದ್ಧಪಡಿಸಲು ಮಹತ್ತರವಾದ ನಿರ್ಧಾರ ಕೈಗೊಂಡಿದ್ದೇನೆ.

ನವ ದೆಹಲಿಯ ನೇತಾಜಿ ಸುಭಾಷ್ ಯೂನಿವರ್ಸಿಟಿ ಆಫ್ ಟೆಕ್ನಾಲಾಜಿಯ ಎಂ.ಟೆಕ್ ವಿಧ್ಯಾರ್ಥಿ ಹಾಗೂ ತುಮಕೂರಿನ ಶಕ್ತಿಪೀಠ ಫೌಂಡೇಷನ್ ನ ಸಿಇಓ, ಆಗಿರುವ ಡಾಟಾ ವಿಜ್ಞಾನಿ ಶ್ರೀಯುತ ಚಿ. ಕೆ.ಆರ್.ಸೋಹನ್ ರವರ ತಂಡಕ್ಕೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮೌಲ್ಯಮಾಪನ/ಅಧ್ಯಯನ ವರದಿ ಸಿದ್ಧಪಡಿಸಲು ಅನುಮತಿ ಪತ್ರ ನೀಡಿದೆ ಎಂದು ತಿಳಿಸಲು ಹರ್ಷ ವಾಗುತ್ತಿದೆ.

ಕಳೆದ 34 ವರ್ಷಗಳಿಂದ, ವೈಯಕ್ತಿಕವಾಗಿ, ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಮೂಲಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಶ್ರಮಿಸಿದ ಫಲವಾಗಿ, ಈ ಹೊಣೆಗಾರಿಕೆ ದೊರಕಿದೆ ಎಂಬ ಭಾವನೆ ನಮ್ಮದಾಗಿದೆ.

ಫೈಲಟ್ ಯೋಜನೆಯಾಗಿ ಕೇಂದ್ರ ಜಲಶಕ್ತಿ ಸಚಿವಾಲಯದ ಯೋಜನೆಗಳ ಅಧ್ಯಯನ ಮಾಡಲು ದಿನಾಂಕ:22.03.2022 ರಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಎಮ್.ಓ.ಯು ಮಾಡಿಕೊಂಡಿದ್ದು,

ಮುಂದುವರೆದಂತೆ ದಿನಾಂಕ:29.06.2022 ರಂದು ‘ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ’ಸಿದ್ಧಪಡಿಸುವ ಅಂಶ ಸೇರ್ಪಡೆಯಾಗಿ ತಿದ್ದು¥ಡಿ ಎಂ.ಓ.ಯು ಮಾಡಿಕೊಳ್ಳಲಾಗಿದೆ.

ಇದೊಂದು ಸವಾಲಿನ ಕೆಲಸವಾದರೂ, ನಮ್ಮ ಆಶೋತ್ತರಗಳಿಗೆ ಹತ್ತಿರವಾಗುವುದರಿಂದ, ಅತ್ಯಂತ ತೃಪ್ತಿಯಿಂದ ಸ್ವೀಕರಿಸಲಾಗಿದೆ. ನಮ್ಮ ಸಂಸ್ಥೆ ಇದೂವರೆಗೂ ಯಾವುದೇ ಯೋಜನೆ ಕೈಗೊಳ್ಳುವ ಮುನ್ನ ಒಂದು ಕಿರುಪುಸ್ತಕದಲ್ಲಿ ನಮ್ಮ ಪರಿಕಲ್ಪನೆಗಳನ್ನು ಸಾರ್ವಜನಿಕರ ಮುಂದಿಟ್ಟು, ಆಸಕ್ತರ ಸಲಹೆ ಮಾರ್ಗದರ್ಶನ ಪಡೆದು, ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುವ ಹಠ-ಛಲ ನಮ್ಮದಾಗಿದೆ. ಆದ್ದರಿಂದ ಈಗ ಕಿರುಪುಸ್ತಕ ಬಿಡುಗಡೆ ಮಾಡುವ ಮುನ್ನ ತಮ್ಮ  ಅಭಿಪ್ರಾಯ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.

ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಅಭಿಪ್ರಾಯ ಸಂಗ್ರಹಣೆ.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸ ಬೇಕಾದಲ್ಲಿ ರಾಜ್ಯದ 28 ಜನ ಲೋಕಸಭಾ ಸದಸ್ಯರ ಮತ್ತು 12 ಜನ ರಾಜ್ಯಸಭಾ ಸದಸ್ಯರ ಮತ್ತು ಇನ್ನೊಬ್ಬರು ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ 41 ಜನರ ಪಾತ್ರ ಬಹಳ ಮಹತ್ತರವಾಗಿದೆ.

ಜಿಲ್ಲಾ ಮಟ್ಟದ ದಿಶಾ ಸಮಿತಿ

  1. ಜಿಲ್ಲಾ ಮಟ್ಟದಲ್ಲಿ ಇರುವ ದಿಶಾ ಸಮಿತಿಗಳನ್ನು, ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೀಮಿತ ಗೊಳಿಸಿ ದಿಶಾ ಸಮಿತಿ ರಚಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯುವುದು.
  2. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ದಿಶಾ ಸಮಿತಿ ರಚಿಸುವವರೆಗೂ, ಆಯಾ ಲೋಕಸಭಾ ಸದಸ್ಯರು, ಅಗತ್ಯ ಬಿದ್ದಾಗ ಅವರ ಅಧ್ಯಕ್ಷತೆಯಲ್ಲಿ ಯೋಜನಾವಾರು, ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಲು, ಇರುವ ಅವಕಾಶಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು.
  3. ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ದೇಶಾದ್ಯಂತ ಇರುವ ಹಾಗೆ ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡುವುದು.
  4. ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ ಕಡ್ಡಾಯವಾಗಿ, ಪ್ರತಿಯೊಂದು ಯೋಜನೆಯ ಹಣ ಬಳಕೆ(ಯುಸಿ) ಪತ್ರಗಳ ಬಗ್ಗೆ ನಿರ್ಣಯ ಮಾಡುವ ವಿಚಾರ ಸೇರ್ಪಡೆ ಮಾಡುವುದು.
  5. ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ, ಆಯಾ ಜಿಲ್ಲೆಗೆ, ರಾಜ್ಯಕ್ಕೆ, ಮಂಜೂರಾಗಿರುವ ಪ್ರತಿಯೊಂದು ಯೋಜನೆಯ ಅನುದಾನದ ಇಂಡೆಕ್ಸ್ ಮಾಡಿ, ಶೇಕಡವಾರು ಹಣ ಬಳಕೆ ಬಗ್ಗೆ ಚರ್ಚೆ ನಡೆಸುವುದು.
  6. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಪಿಪಿಪಿ ಮಾದರಿಯಲ್ಲಿ ಸಂಸದರ ಪೋರ್ಟಲ್ ಆರಂಭಿಸುವುದು, 1947 ರಿಂದಲೂ ಆಯಾ ಸಂಸದರ ಕಾಲದಲ್ಲಿನ ಯೋಜನೆಗಳ ಮಾಹಿತಿ ಸಂಗ್ರಹಿಸಿ, ಅಪ್ ಲೋಡ್ ಮಾಡುವುದು.
  7. ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಪ್ರತಿಯೊಂದು ಯೋಜನೆಯ, ರಿಯಲ್ ಟೈಮ್ ಡಾಟಾ ಬಗ್ಗೆ ಕಡ್ಡಾಯವಾಗಿ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
  8. ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಪ್ರತಿಯೊಂದು ಯೋಜನೆಯ, ಜಿಐಎಸ್ ಲೇಯರ್  ಬಗ್ಗೆ ಕಡ್ಡಾಯವಾಗಿ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
  9. ಪ್ರತಿಯೊಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯೋಜನೆಗಳ ಮಾಹಿತಿಯನ್ನು, ಪ್ರತಿಯೊಬ್ಬ ಸಂಸದರಿಗೂ ಮೊಬೈಲ್‍ನಲ್ಲಿ ನೋಡಿಕೊಳ್ಳುವಂತೆ ಮಾಹಿತಿ ಅಪ್ ಡೇಟ್ ಮಾಡುವುದು.
  10. ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದರ ನೇತೃತ್ವದಲ್ಲಿ ದಿಶಾ ಅಧ್ಯಯನ ಪೀಠ ಸ್ಥಾಪಿಸುವುದು.
  11. ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ, ದಿಶಾ ಭವನ ನಿರ್ಮಾಣ ಮಾಡುವುದು.
  12. ಪ್ರತಿಯೊಂದು ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದ ಬಗ್ಗೆ ಮತ್ತು ನಾಮ ನಿರ್ದೇಶನ ದಿಶಾ ಸಮಿತಿ ಸದಸ್ಯರ ತಂಡ ಕಾಮಗಾರಿ ವೀಕ್ಷಣೆ ಮಾಡಲು ಹೈಟೆಕ್ ದಿಶಾ ಮೊಬೈಲ್ ವಾಹನ ನಿರ್ವಹಣೆ ಮಾಡುವುದು.
  13. ಸಂಸದರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಬರೆದ ಪತ್ರಗಳ ಬಗ್ಗೆ, ರಾಜ್ಯ ಸರ್ಕಾರದ ಅಭಿಪ್ರಾಯ ಅಥವಾ ಸೂಕ್ತ ಪ್ರಸ್ತಾವನೆ ಕೇಳಿ ಕೇಂದ್ರ ಸರ್ಕಾರ ಬರೆಯುವ ಪತ್ರದ ಮಾಹಿತಿ ಬಗ್ಗೆ, ತಕ್ಷಣ ಆಯಾ ಲೋಕಸಭಾ ಸದಸ್ಯರ ಜೊತೆ ಸಮಾಲೋಚನೆ ನಡೆಸುವುದು.
  14. ಪ್ರತಿಯೊಬ್ಬ ಸಂಸದರಿಗೂ ಒಬ್ಬೊಬ್ಬ ಅಭಿವೃದ್ಧಿ ಸಲಹಾಗಾರರನ್ನು ನೇಮಿಸಿಕೊಳ್ಳಲು, ರಾಜ್ಯ ಸರ್ಕಾರ ನಿಯಮ ರೂಪಿಸುವುದು.
  15. ಲೋಕಸಭಾ ಸದಸ್ಯರ ಕ್ಷೇತ್ರವಾರು 5 ವರ್ಷಗಳ ಅವಧಿಗೆ ಹಾಗೂ ವಾರ್ಷಿಕ ರ್ಯಾಂಕಿಗ್ ನೀಡುವುದು.
  16. ಉತ್ತಮವಾಗಿ ಕಾರ್ಯನಿರ್ವಹಿಸುವ ದಿಶಾ ಸಮಿತಿಗೆ ದಿಶಾ ಅವಾರ್ಡ್ ನೀಡುವುದು.
  17. ಪ್ರತಿಯೊಬ್ಬ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರು ಕೇಂದ್ರ ಸರ್ಕಾರದ ಒಂದೊಂದು ಯೋಜನೆ ಬಗ್ಗೆ ಆಳವಾದ ಅಧ್ಯಯನ ಮಾಡುವುದು.
  18. ಪ್ರತಿಯೊಬ್ಬ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರು ಒಂದೊಂದು ಯೋಜನೆಯ ನಿಖರವಾದ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.
  19. ಪ್ರತಿಯೊಬ್ಬ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರು ಕೇಂದ್ರ ಸರ್ಕಾರದ ಒಂದೊಂದು ಯೋಜನೆಯ ವಿಷನ್ ಗ್ರೂಪ್ ರಚಿಸಿಕೊಂಡು ನಿರಂತರವಾಗಿ ಶ್ರಮಿಸುವುದು.
  20. ಪ್ರತಿಯೊಬ್ಬ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರು ನಿರ್ಧಿಷ್ಠವಾದ ಯೋಜನೆಗೆ ಸಂಭಂಧಿಸಿದ ಇಲಾಖಾ ಮುಖ್ಯಸ್ಥರಿಂದ ಆರಂಭಿಸಿ, ಕೇಸ್ ವರ್ಕರ್ ರವರ ಜೊತೆ ಉತ್ತಮ ಸಂಬಂದ ಇಟ್ಟುಕೊಳ್ಳುವುದು.
  21. ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರು ಒಂದೊಂದು ವಿಧಾನಸಭಾ ಕ್ಷೇತ್ರವಾರು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಮೌಲ್ಯಮಾಪನ ಮಾಡಲು ಸಹಕರಿಸುವುದು.
  22. ಪ್ರತಿಯೊಂದು ಜಿಲ್ಲೆಗಳ ಜಿಲ್ಲಾ ಮಟ್ಟದ ಪೂರ್ಣ ಪ್ರಮಾಣದ ದಿಶಾ ಸಮಿತಿಗಳ ರಚನೆ

ರಾಜ್ಯ ಮಟ್ಟದ ದಿಶಾ ಸಮಿತಿ

  1. ಕೇಂದ್ರ ಸರ್ಕಾರದ ಪ್ರತಿಯೊಂದು ಘೋಷಣೆಗಳ ಬಗ್ಗೆ ಆಯಾ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ ಕಡ್ಡಾಯವಾಗಿ ಚರ್ಚೆ ನಡೆಸುವುದು.
  2. ಆಯಾ ಜಿಲ್ಲೆಗಳಿಗೆ ಅಥವಾ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಧ್ಯಯನ ತಂಡ ಆಗಮಿಸುವ ಮುನ್ನ ಎಲ್ಲಾ ದಿಶಾ ಸಮಿತಿ ಸದಸ್ಯರ ಗಮನಕ್ಕೆ ತರುವುದು ಹಾಗೂ ಈ ಬಗ್ಗೆ ಮುಂದಿನ ದಿಶಾ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯ ಮಾಡುವುದು.
  3. 41 ಜನ ಸಂಸದರ ಸಭೆಗೆ ಅಗತ್ಯವಿರುವ ಕೇಂದ್ರದ ವಿವಿಧ ಖಾತೆಗಳ ಸಚಿವರನ್ನು ಆಹ್ವಾನಿಸಿ, ಆಯಾ ಇಲಾಖೆಯ ಯೋಜನೆಗಳ ಕಡತಗಳು ನೆನೆಗುದಿಗೆ/ವಿಲೆ ಬಿದ್ದಿರುವ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವುದು.
  4. ಯಾವುದೇ ಸಂಸದರು, ಯಾವುದೇ ಯೋಜನೆಯ ಬಗ್ಗೆ ಮಾಹಿತಿ ಕೇಳಿದಾಗ, ತಕ್ಷಣ ನಿಖರವಾದ ಮಾಹಿತಿ ನೀಡಲು ದಿಶಾ ಕಾಲ್ ಸೆಂಟರ್ ಆರಂಭಿಸುವುದು.
  5. ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ನಾಮ ನಿರ್ದೆಶನ ಸದಸ್ಯರಿಗೆ ತರಬೇತಿ ಮತ್ತು ಹೊಣೆಗಾರಿಕೆ ನೀಡುವುದು.
  6. 41 ಜನ ಸಂಸದರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಿಸಲು ಒಂದೊಂದು ಬೃಹತ್ ಯೋಜನೆಯ ಮಂಜೂರಾತಿ ಹೊಣೆಗಾರಿಕೆ ವಹಿಸಿಕೊಳ್ಳುವುದು.
  7. 13 ಜನ ರಾಜ್ಯಸಭಾ ಸದಸ್ಯರ ತಂಡ ಕೇಂದ್ರ ಸರ್ಕಾರದ ಪ್ರತಿಯೊಂದು, ಯೋಜನೆಗಳನ್ನು, ನಮ್ಮ ರಾಜ್ಯದ ಯಾವ ಲೋಕಸಭಾ ಕ್ಷೇತ್ರಕ್ಕೆ ಮಂಜೂರು ಮಾಡಿಸ ಬಹುದು ಎಂಬ ಬಗ್ಗೆ ಅಧ್ಯಯನ ಮಾಹಿÀತಿ ನೀಡುವುದು.
  8. ಫಿಸ್ಕಲ್ ಪಾಲಿಸಿ ಇನ್ಸ್ಟಿಟ್ಯೂಟ್ ಮಾದರಿಯಲ್ಲಿ, ಪಿಪಿಪಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನಗಳ ಅಧ್ಯಯನದ ‘ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕ್ಯಾಪ್ಚರಿಂಗ್ ಜಿಓಐ ಫಂಡ್ಸ್’ ಸೆಂಟರ್ ಸ್ಥಾಪಿಸುವುದು. 
  9. ಕೇಂದ್ರ ಸರ್ಕಾರದ ಯೋಜನೆಗಳ ಮ್ಯೂಸಿಯಂ ಸ್ಥಾಪಿಸುವುದು.
  10. ರಾಜ್ಯದ 28 ಜನ ಲೋಕಸಭಾ ಸದಸ್ಯರು, ಒಬ್ಬರು ನಾಮ ನಿರ್ದೇಶಿತ ರಾಜ್ಯಸಭಾ ಸದಸ್ಯರು ಮತ್ತು 12 ಜನ ರಾಜ್ಯ ಸಭಾ ಸದಸ್ಯರು ಸೇರಿದಂತೆ 41 ಜನರ ಸಭೆಯು ಪ್ರತಿ ಅಧಿವೇಶನದ ಸಮಯದಲ್ಲಿ ನಡೆಸಲು ಕನ್ವೀನಿಯರ್ ನೇಮಕ ಮಾಡಿಕೊಳ್ಳುವುದು. (ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಕಾಲದಲ್ಲಿ ರಚಿಸಲಾಗಿತ್ತು)ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಹಿರಿಯ ಸಚಿವರ ಅಧ್ಯಕ್ಷತೆಯಲ್ಲಿ ಸಂಸದರ ಸಮಿತಿ ರಚಿಸುವುದು.
  11. ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಐಎಎಸ್ ಮಾಡುವ ವಿಧ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸ್ಥಾಪಿಸಿ, ಅವರ ಮೂಲಕ ಕೇಂದ್ರದ ಪ್ರತಿಯೊಂದು ಯೋಜನೆಗಳ ಮಾಹಿತಿ ಸಂಗ್ರಹಣೆ ಮಾಡಿಸುವುದು.
  12. ರಾಜ್ಯದ ಮುಖ್ಯ ಮಂತ್ರಿಯವರು ಮತ್ತು ಸಚಿವರುಗಳ ವಿವಿಧ ಯೋಜನೆಗಳ ಬಗ್ಗೆ ಕೇಂದ್ರ ಸಚಿವರುಗಳ ಬಳಿ ನಿಯೋಗ ಕೊಂಡೊಯ್ಯುವಾಗ, ಯೋಜನೆಯ ವ್ಯಾಪ್ತಿಯÀ ಸಂಸದರನ್ನು ನಿಯೋಗದಲ್ಲಿ ಸೇರ್ಪಡೆ ಮಾಡುವುದು.
  13. ಪ್ರತಿ ಅಧಿವೇಶನದ ಅವಧಿಯಲ್ಲಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಕಡ್ಡಾಯವಾಗಿ ಸಭೆ ನಡೆಸುವುದು ಹಾಗೂ ಸಂಸದರು ನಡೆಸಿದ ಸಭೆ ನಿರ್ಣಯಗಳ ಬಗ್ಗೆ, ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಮಾಡುವುದು.
  14. ಕರ್ನಾಟಕ ಭವನದ ಅಧಿಕಾರಿಗಳನ್ನು ಚುರುಕುಗೊಳಿಸುವುದು ಮತ್ತು ಸಂಸದರ ಸಭೆಯಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಫಾಲೋ ಅಪ್ ಮಾಡುವ ಯೋಜನೆಗಳ ಪ್ರಗತಿ ಬಗ್ಗೆ ಪರಿಶೀಲನೆ  ನಡೆಸುವುದು.
  15. ದೆಹಲಿ ಪ್ರತಿ ನಿಧಿಯ ಕಚೇರಿ ಪಾದರಸದಂತೆ, ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು.
  16. ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ದಿಶಾ ಮಾನಿಟರಿಂಗ್ ಸೆಲ್ ಸ್ಥಾಪಿಸುವುದು.
  17. ಕರ್ನಾಟಕ ರಾಜ್ಯ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರ ಅಧಿಸೂಚನೆ.
  18. ದಿಶಾ ಸಮಿತಿಗಳಲ್ಲಿ ನಿರ್ಣಯ ಮಾಡಿದ 30 ದಿವಸದೊಳಗೆ ಅನುಷ್ಠಾನ ಮಾಡಲು ಅಗತ್ಯ ಕ್ರಮಕೈಗೊಳ್ಳಲು ದಿಶಾ ಮಾರ್ಗದರ್ಶಿ ಸೂತ್ರದಲ್ಲಿದೆ. ಆದರೆ ದಿಶಾ ಸಮಿತಿ ನಿರ್ಣಯ ಜಾರಿಗೊಳಿಸಲು ವಿಫಲವಾದ ಅಧಿಕಾರಿಗಳ ಮೇಲೆ ಏನು ಕ್ರಮಕೈಗೊಳ್ಳ ಬೇಕು ಎಂಬ ಬಗ್ಗೆ ನಿರ್ಧಿಷ್ಠ ನಿಯಮ ರೂಪಿಸುವುದು.
  19. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಗಳ ಅನುಪಾಲನಾÀ ವರದಿಗಳ ಪ್ರಗತಿ ಪರಿಶೀಲನೆಯನ್ನು ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಮಾಡುವುದು, ಹಾಗೂ ರಾಜ್ಯ ಮಟ್ಟದ ಸಮಿತಿಗಳ ಅನುಪಾಲನಾÀ ವರದಿಗಳ ಪ್ರಗತಿ ಪರಿಶೀಲನೆಯನ್ನು ರಾಜ್ಯ ಮಟ್ಟದ ದಿಶಾ ಸಮಿತಿಗಳ ಮಾಡುವುದು,
  20. ರಾಜ್ಯ ಮಟ್ಟದ ದಿಶಾ ಸಮಿತಿಗಳಲ್ಲಿ ಸರ್ವಪಕ್ಷಗಳ ಸಂಸದರು ಮತ್ತು ಶಾಸಕರನ್ನು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ಅವಕಾಶವಿರುವುದರಿಂದ, ಸರ್ವಪಕ್ಷಗಳ ನಾಯಕರು ಮತ್ತು ಉಪನಾಯಕರು ರಾಜ್ಯ ಮಟ್ಟದ ದಿಶಾ ಸಮಿತಿಗೆ ಸದಸ್ಯರಾಗಿ ನೇಮಕ ಮಾಡುವುದು ಸೂಕ್ತವಾಗಿದೆ.ಇದರಿಂದ ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ ಮಲತಾಯಿ ಧೋರಣೆ ಮಾಡುವುದರ ಬದಲಿಗೆ, ಎಲ್ಲರೂ ಒಗ್ಗಟ್ಟಾಗಿ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಲು ಶ್ರಮಿಸಬಹುದಾಗಿದೆ.
  21. ರಾಜ್ಯ ಮಟ್ಟದ ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯರು,ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಉಸ್ತುವಾರಿ ನೋಡಿಕೊಳ್ಳುವುದು.
  22. ಕೇಂದ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗಳ ಪ್ರಗತಿ ಪರಿಶೀಲನೆಯನ್ನು ಪ್ರಧಾನ ಮಂತ್ರಿಯವರ ಕಚೇರಿಯಿಂದ ನೇರವಾಗಿ ಮಾಡುವುದು.
  23. ಪ್ರತಿ ವರ್ಷದ ಕೇಂದ್ರ ಸರ್ಕಾರದ ಮುಂಗಡ ಪತ್ರ ಅಧ್ಯಯನ ಮಾಡಿ, ಯಾವ ಜಿಲ್ಲೆಗೆ, ಯಾವ ಯೋಜನೆ ಮಂಜೂರು ಮಾಡಿಸಬಹುದು ಎಂಬ ಬಗ್ಗೆ ನಿರ್ಣಯ ಮಾಡಿ, ಮಂಜೂರಾತಿಗೆ ಶ್ರಮಿಸುವುದು.
  24. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಯಾವ ಯೋಜನೆ ಮಾಡಬೇಕು ಎಂಬ ಬಗ್ಗೆ ನಿರ್ಣಯ ಮಾಡಿ, ಅಗತ್ಯವಿರುವ ಜಮೀನು ಕಾಯ್ದಿರಿಸುವುದು.
  25. ಪ್ರತಿ ವರ್ಷ ಜೂನ್ 27 ರಂದು ದಿಶಾ ಫೌಂಡೇಷನ್ ದಿನಾಚರಣೆ ಮಾಡುವುದು.
  26. ಲೋಕಸಭಾ ಅಧಿವೇಶನದ ವೇಳೆಗೆ ಮುಂಚೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ, ಆಯಾ ವ್ಯಾಪ್ತಿಯ  ಸಂಸದರಿಗೆ ಪ್ರಶ್ನೆ ಸಿದ್ಧಪಡಿಸಿ ಹಾಕಿಸುವುದು.
  27. ಗತಿ ಶಕ್ತಿ ಯೋಜನೆ ಮತ್ತು ನೀತಿ ಆಯೋಗದ ಯೋಜನೆಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡುವುದು.
  28. ದಿಶಾ ಡಿಜಿಟಲ್ ಇ ಪೇಪರ್ ಆರಂಭಿಸುವುದು.
  29. ದಿಶಾ ಯುಟ್ಯೂಬ್ ಚಾನಲ್ ಆರಂಭಿಸುವುದು.

ಈ ಮೇಲ್ಕಂಡ ಅಂಶಗಳ ಜೊತೆಗೆ, ಸಂಸದರು ನೀಡುವ ಅಭಿಪ್ರಾಯ ಸಂಗ್ರಹಣೆ ಮಾಡಿ, ಮಾನ್ಯ ಪ್ರಧಾನಿÀ ಶ್ರೀ ನರೇಂದ್ರ ಮೋದಿಯವರ ಮತ್ತು ರಾಜ್ಯದ ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿರವರ ಗಮನಕ್ಕೆ ತರಲು ರೂಪುರೇಷೆ ನಿರ್ಧರಿಸುವುದು ಅಗತ್ಯವಾಗಿದೆ. ಆದ್ದರಿಂದ, ತಮ್ಮ ಇತ್ತೀಚಿನ ಪೋಟೊದೊಂದಿಗೆ ಅಭಿಪ್ರಾಯ ನೀಡಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                         ತಮ್ಮ ವಿಶ್ವಾಸಿ

                                                  (ಕುಂದರನಹಳ್ಳಿ ರಮೇಶ್)