22nd November 2024
Share

TUMAKURU:SHAKTHIPEETA FOUNDATION

ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾಶರಣರು ಕಾಂಗ್ರೆಸ್ ಅಧಿನಾಯಕರಾದ ಶ್ರೀ ರಾಹುಲ್ ಗಾಂದಿಯವರಿಗೆ ಇಷ್ಟಲಿಂಗ ಧೀಕ್ಷೆ ಮೂಲಕ ಲಿಂಗಧಾರಣೆ ಮಾಡಿದ್ದಾರೆ. 

ಕರ್ನಾಟಕದ ಕಾಂಗ್ರೆಸ್ ನವರು ನಾವೂ ಹಿಂದೂಗಳ ವಿರೋದಿಯಲ್ಲ, ನಮ್ಮ ಅಧಿನಾಯಕರಾದ ಶ್ರೀ ರಾಹುಲ್ ಗಾಂದಿಯವರು ಲಿಂಗಾಯಿತರು ಎಂದು ಘೋಷಣೆ ಮಾಡುವ ಮೂಲಕ ಹಿಂಧುತ್ವ ಪ್ರತಿಪಾದನೆಗೆ ಚಾಲನೆ ನೀಡುವರೇ ಕಾದು ನೋಡಬೇಕಿದೆ.

ಸ್ವಾಮೀಜಿಗಳೊಂದಿಗೆ ರಾಹುಲ್ ಗಾಂಧಿಯವರು ಸಂವಾದ ನಡೆಸಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ.ಯಾವುದೇ ಧಾರ್ಮಿಕ ಮುಖಂಡರ ಮತ್ತು ಸ್ವಾಮಿಜಿಗಳ ಜೊತೆ ಕೂರುವಾಗ ಯಾವ ರೀತಿ ಕೂರಬೇಕು ಎಂಬ ಬಗ್ಗೆ ಮಾಹಿತಿ ನೀಡುವುದು ಕಾಂಗ್ರೆಸ್ ನಾಯಕರ ಕರ್ತವ್ಯ.

ಇಂದಿನ ಸೋಶಿಯಲ್ ಮೀಡಿಯಾದಲ್ಲಿನ ಅಭಿಪ್ರಾಯಗಳನ್ನು ಪ್ರತಿಯೊಬ್ಬರೂ ಪಾಠವಾಗಿ ಪರಿಗಣಿಸಿದಾಗ ಮಾತ್ರ ತಾಳ್ಮೆ ಬರಲಿದೆ. ಟೀಕೆ ಮಾಡಿದ್ದಾರೆ ಎಂದು ಸಿಟ್ಟುಕೊಳ್ಳಬಾರದು, ನಮ್ಮನ್ನು ತಿದ್ದುತ್ತಿದ್ದಾರೆ ಎಂದು ಖುಷಿ ಪಡಬೇಕು. ಯಾರ ಬಗ್ಗೆ ಟೀಕೆಗಳು ಜಾಸ್ತಿ ಬರುತ್ತವೆಯೋ, ಅವನು ಪರಿಪೂರ್ಣ ವ್ಯಕ್ತಿಯಾಗಲು ಮೆಟ್ಟಿಲುಗಳು ಎಂದು ಭಾವಿಸಿಕೊಳ್ಳಲೇ ಬೇಕು.

ಕಾಂಗ್ರೆಸ್ ಹೊಸ ಚಿಂತನೆಯತ್ತ  ಮುಖ ಮಾಡಿರುವಂತಿದೆ.

ದೇಶದ ಸುರಕ್ಷತೆಯಿಂದ ದೇಶದ ಪ್ರಧಾನಿಯವರ ನಂತರದ ಸ್ಥಾನ ವಿರೋಧ ಪಕ್ಷದ ನಾಯಕನ ಸ್ಥಾನ.

ರಾಹುಲ್ ಗಾಂಧಿಯವರು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗುವಷ್ಟು ಸದಸ್ಯರು ಇಲ್ಲದಿದ್ದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು, ಅಧಿವೇಶನಗಳಲ್ಲಿ ಪೂರ್ಣ ಅವಧಿ ಕುಳಿತು, ಪ್ರಶ್ನೆ ಮಾಡುವ ತಾಳ್ಮೆಯನ್ನು ಇಷ್ಟಲಿಂಗಪೂಜೆ ನೀಡಲಿದೆ. ಅವರು ಬಳಸಿಕೊಳ್ಳ ಬೇಕು ಅಷ್ಟೆ.

ಮಾಜಿ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್ ರವರ ಅವಧಿಯಲ್ಲಿ 10 ವರ್ಷಗಳ ಕಾಲ ರಾಹುಲ್ ಗಾಂಧಿಯವರು ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸ ಬೇಕಾಗಿತ್ತು. ಪರಿಪೂರ್ಣ ನಾಯಕತ್ವಕ್ಕೆ ಆಡಳಿತದ ಅನುಭವ ಬಹಳ ಮುಖ್ಯ.

ದಾವಣಗೆರೆಯಯಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ 75 ನೇವರ್ಷದ ಜನ್ಮ ದಿನಾಚರಣೆಯಲ್ಲಿ ಶ್ರೀ ರಾಹುಲ್ ಗಾಂದಿಯವರು ಬಸವಣ್ಣನವರ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಬಸವಣ್ಣನವರ ಸಾಮಾಜಿಕ ನ್ಯಾಯದ ಪ್ರತಿಪಾದನೆಯೂ ನಾಯಕತ್ವದ ಗುಣಗಳ ಪ್ರತೀಕ.

ಅವರು ಕನಿಷ್ಟ ಪ್ರತಿ ದಿವಸ 10 ಗಂಟೆಗಳ ಕಾಲ ಅಧ್ಯಯನ ಮಾಡಿದರೇ ಮಾತ್ರ ವಿರೋಧ ಪಕ್ಷದ ನಾಯಕನ ಸ್ಥಾನ ನಿಭಾಯಿಸಬಹುದಾಗಿದೆ.

ದೇಶದ ಸಮರ್ಥ ನಾಯಕನಾಗುವವರು ಮೋದಿಯವರ ಹಾಗೆ ದಿನದ 24 ಗಂಟೆಗಳ ಕಾಲ ಅಭ್ಯಾಸ ಮಾಡುವುದು ಅಗತ್ಯವಾಗಿದೆ.