24th April 2024
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿ ಪ್ರಕಾರ ಇರುವ ಜನಸಂಖ್ಯೆ 61095297, ಆದರೆ 2022 ರ ಆಧಾರ್ ಸಂಖ್ಯೆ ಆಧಾರಿತ ಇರುವ ಜನಸಂಖ್ಯೆ 66165886, ಇವರಲ್ಲಿ 5053552 ಅಪೌಷ್ಠಿಕ ಮಕ್ಕಳಿದ್ದಾರೆ.

ಇತ್ತೀಚೆಗೆ ನಾನು ತುಮಕೂರಿನ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಪೌಷ್ಠಿಕ ಮಕ್ಕಳಗೆ ನೀಡುತ್ತಿರುವ ಟ್ರೀಟ್ ಮೆಂಟ್, ನೀಡುತ್ತಿರುವ ಪೂರಕ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ಪಡೆದಿದ್ದೆ. ಈ ಮಕ್ಕಳ ವಾರ್ಡ್ ಆಸ್ಪತ್ರೆಯ ಹೊರಾಂಡದಲ್ಲಿ ಇತ್ತು.

ಅದನ್ನು ನೋಡಿಯೇ ನಮ್ಮ ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಈ ತರಹದ ಮಕ್ಕಳಿಗೆ ಒಂದು ಒಳ್ಳೆಯ ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡಬೇಕು ಎಂದು ದಿಶಾ ಸಭೆಯಲ್ಲಿ ಪ್ರಸ್ತಾಪ ಇಟ್ಟಿದ್ದರು.

ನಂತರ ಈ ಕಾಮಗಾರಿಯ ಅನುಸರಣೆ ಮಾಡಿಲ್ಲವಾದರೂ, ದಿನಾಂಕ:05.08.2022 ರಂದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಭೆಯಲ್ಲಿ ಚರ್ಚೆ ಮಾಡುವಾಗ, ನಾನು ಇವರಿಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡಿದರೆ ಹೇಗೆ ಸಾರ್ ಎಂದಾಗ ಅವರು ಹೇಳಿದ ಮಾತು ದುಡ್ಡು ಎಲ್ಲಿದೆ.

ಹೌದು ಇದು ಒಂದು ಗಂಭೀರ ಸಮಸ್ಯೆ ಆದರೂ, ನನಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವ ಮೂಲದಿಂದ ಇಂಥಹ ಮಕ್ಕಳಿಗೆ ಉತ್ತಮವಾದ ವಾರ್ಡ್‍ಗಳ ನಿರ್ಮಾಣ ಸಾಧ್ಯ. ಈ ಬಗ್ಗೆ ಏನಾದರೂ ಅಧ್ಯಯನ ನಡೆದಿದೆÀಯೇ  ಎಂಬ ಬಗ್ಗೆ ವಿಶೇಷ ಆಸಕ್ತಿ ಮೂಡಿದೆ.

ಮಾಹಿತಿ ಇದ್ದವರು ಹಂಚಿಕೊಳ್ಳಿ.