21st November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ರಾಜಕೀಯ ¥ಕ್ಷಗಳು ಅಭಿವೃದ್ಧಿ ರಾಜಕಾರಣ ಮಾಡುವುದರಲ್ಲಿ ಹಿಂದೆ ಬಿದ್ದಿವೆ. ಚುನವಣಾ ರಾಜಕೀಯ ಮಾತ್ರ ನಮ್ಮ ಗುರಿ ಎಂದು ಕೊಂಡಿವೆ. ಹೌದು ಚುನವಣಾ ರಾಜಕೀಯ, ರಾಜಕೀಯ ಪಕ್ಷಗಳಿಗೆ ಪ್ರಮುಖ ಅಂಶ, ಅಭಿವೃದ್ಧಿ ರಾಜಕಾರಣ ಶೇ 30 ರಷ್ಠಾದರೂ ಇರಬೇಕಲ್ಲವೇ?

ವಿರೋಧ ಪಕ್ಷಗಳು ಈ ಬಗ್ಗೆ ಸತ್ತು ಸುಣ್ಣವಾಗಿವೆ. ಅನಗತ್ಯ ವಿಚಾರಗಳಲ್ಲಿ ಮುಳಗಿ ಹೋಗಿದ್ದಾರೆ. ಮಾಜಿ ಸಚಿವರಾದ ಶ್ರೀ ಕೃಷ್ಣಭೈರೇಗೌಡರು ಕಾಂಗ್ರೆಸ್ ಸಭೆಯಲ್ಲಿಯೇ ಅಭಿವೃದ್ಧಿ ಹೋರಾಟ ಮಾಡೋಣ, ಜನರಿಗೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡೋಣ, ಎಂಬ ಸಲಹೆ ನೀಡುವ ಮೂಲಕ ಎಚ್ಚರಿಸಿರುವುದು ಒಂದು ಒಳ್ಳೆ ಬೆಳವಣಿಗೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ, ಬಿಜೆಪಿಯಲ್ಲಿ ಅಭಿವೃದ್ಧಿ ಪ್ರಕೋಷ್ಠ ರಚಿಸಲು ನೀಡಿದ ಸಲಹೆಗೆ ತಕ್ಷಣವೇ ಸ್ಫಂಧಿಸಿ, ಪ್ರಕೋಷ್ಠ ರಚಿಸಿದ್ದರು. ಈ ಸಮಿತಿಯ ಕೆಲಸ ಕೇಂದ್ರ ಸರ್ಕಾರದ ಅನುದಾನಗಳ ಮಾಹಿತಿ ಸಂಗ್ರಹವಾಗಿತ್ತು. ಈಗ ಏನೂ ಮಾಡುತ್ತಿದ್ದಾರೋ ನನಗೆ ಮಾಹಿತಿ ಇಲ್ಲ.

ಕೇಂದ್ರ ಸರ್ಕಾರದ ಅನುದಾನಗಳ ಮಾಹಿತಿ, ವಿರೋಧಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರ ಬಳಿ ಇದ್ದರೆ, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಇದ್ದರೆ ಬಹಿರಂಗ ಪಡಿಸಲಿ.

  ಕೇಂದ್ರ ಸರ್ಕಾರದ ಅನುದಾನಗಳ ಪಕ್ಕಾ ಮಾಹಿತಿ ಇಲ್ಲದೆ ಮಲತಾಯಿ ಧೋರಣೆ ಎಂದು ಹೇಳಿಕೆ ನೀಡುವುದೇ ಪ್ರಮುಖ ಅಂಶವಾಗಿದೆ.

ಮೋದಿಯವರೇ ಹೇಳಿಕೆ ನೀಡಿರುವುದರಿಂದ, ಅವರೇ ದಿಶಾ ಸಮಿತಿ ರಚಿಸಿರುವುದರಿಂದ,  ಅಭಿವೃದ್ಧಿ ಪಕ್ಕಾ ಮಾಹಿತಿ ಸರ್ವ ಪಕ್ಷಗಳ ಸಭೆಯಂತೆ ಇರುವ ರಾಜ್ಯ ದಿಶಾ ಸಮಿತಿಯಲ್ಲಿ ಇರಲೇ ಬೇಕು.

ರಾಜಕೀಯ ಪಕ್ಷಗಳೇ ಸ್ವಲ್ಪ ಬದಲಾಗಿ, ತಮ್ಮ ಪಕ್ಷಗಳಲ್ಲಿ ಕೇಂದ್ರ ಸರ್ಕಾರದ ಅನುದಾನಗಳ ವಿಭಾಗ ಆರಂಭಿಸಿ, ಕರಾರು ವಕ್ಕಾದ ಮಾಹಿತಿಯೊಂದಿಗೆ ಮಾತನಾಡಿ.