22nd December 2024
Share

TUMAKURU:SHAKTHIPEETA FOUNDATION

ಕಚೇರಿಗಳಲ್ಲಿ ಫೈಲ್ ಮಿಸ್ ಆಗಿದೆ ಎಂಬ ನಾಟಕ, ಹೆಚ್ಚಿಗೆ ಲಂಚ ಒಡೆಯುವ ತಂತ್ರ ಎಂದರೆ ತಪ್ಪಾಗಲಾರದಂತೆ. ಒಬ್ಬ ವ್ಯಕ್ತಿ ಬಂದು ನನಗೆ ಹೇಳಿದ ಮಾತು, ನಾನು ದಲಿತ, ತಿರುಗಿ ತಿರುಗಿ ಸಾಕಾಗಿದೆ ಸಾರ್.

ಫೈಲ್ ಹುಡಕಲಿ ಅಥವಾ ಫೈಲ್ ಮಿಸ್ ಯಾರಿಂದ ಆಗಿದೆ ಎಂಬ ಬಗ್ಗೆ ಪೋಲೀಸ್ ಸ್ಟೇಷನ್‍ನಲ್ಲಿ ಕೇಸು ಹಾಕಲಿ. ಅದು ಬಿಟ್ಟು ಸರ್ಕಾರಿ ಸಂಬಳ, ಸವಲತ್ತು ಪಡೆಯುವ ಅಧಿಕಾರಿ ಸಿಂಪಲ್ ಆಗಿ ಫೈಲ್ ಮಿಸ್ ಆಗಿದೆ ಎಂದರೆ ಹೇಗೆ ಸಾರ್? ವರ್ಷಗಟ್ಟಲೇ ಈ ನಾಟಕ ಯಾಕೆ ಸಾರ್?

ಒಂದು ಕೇಸು ಆಗಲಿ ಪರವಾಗಿಲ್ಲ ಸಾರ್, ಫೈಲ್ ಮಿಸ್ ಆಗಿದೆ ಎಂದು ಹೇಳುವವರಿಗೆ ಭೂಟು ತಗೊಂಡು ಒಡೆಯಲಾ? ಸಾರ್ ಎಂದಾಗ ಮೌನವೇ ನನ್ನ ಉತ್ತರವಾಗಿತ್ತು.

ನಾನು ಯಾವ ಅಧಿಕಾರಿ, ಯಾರನ್ನು ಸತಾಯಿಸುತ್ತಿದ್ದಾನೆ, ಯಾವ ಕಡತಕ್ಕೆ ಸತಾಯಿಸುತ್ತಿದ್ದಾನೆ, ಅವರಿಗೆ ಪರೋಕ್ಷÀವಾಗಿ ಹೇಳಿದ್ದೇನೆ. ಪಲಿತಾಂಶ ಕಾದುನೋಡಬೇಕಿದೆ.