22nd December 2024
Share

TUMAKURU:SHAKTHIPEETA FOUNDATION

ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ವೋಟರ್ ಲಿಸ್ಟ್ ವಾರ್ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುತ್ತಿರುವುದರಿಂದ ಇವರ ಜಗಳಕ್ಕೆ ಅರ್ಥವೇ ಇಲ್ಲ.

ಹೌದು ಬಹುತೇಕ ರಾಜಕೀಯ ಪಕ್ಷಗಳ, ಚುನಾಯಿತ ಜನಪ್ರನಿಧಿಗಳು ಕಳೆದ 25-30 ವರ್ಷಗಳಿಂದಲೂ ಪ್ರತಿ ಚುನಾವಣೆಯಲ್ಲೂ ಮತದಾರರ ಡಿಲೀಟ್ ಹರಿಕಥೆ ನಿರಂತರವಾಗಿ ಸದ್ದು ಮಾಡುತ್ತಲೇ ಇದೆ.ಇದು ಯಾರು ಮಾಡಿಸುತ್ತಾರೋ, ಏಕೆ ಮಾಡಿಸುತ್ತಾರೋ ದೇವರಿಗೆ ಮತ್ತು ಅವರವರಿಗೆ ಮಾತ್ರ ಗೊತ್ತು.

ಆದರೇ ಹಲವಾರು ಮತದಾರರಿಗೆ ಮಾತ್ರ ಮತದಾನ ಮಾಡಲು ಅವಕಾಶವಿಲ್ಲದೆ, ಮತಗಟ್ಟೆಯಿಂದ ವಾಪಾಸ್ಸು ಬಂದಿರುವ ಉದಾಹರಣೆಗಳು ಬಹಳಷ್ಟು ಇವೆ. ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಇವರಿಗೆ ಸಹಕರಿಸಿರುವ ಅಧಿಕಾರಿಗಳು ಹಾಗೂ ನೌಕರರಿಗೂ ಶಿಕ್ಷೆಯಾಗ ಬೇಕಲ್ಲವೇ.

ಯಾರಿಗೂ ಶಿಕ್ಷೆಯಾಗುವುದಿಲ್ಲ, ಬಡಪಾಯಿಗಳಿಗೆ ಕಾಟಚಾರಕ್ಕೆ ಶಿಕ್ಷೆ ನೆಪವೊಡ್ಡಿ ನಂತರ ಎಲ್ಲರೂ ಆರಾಮವಾಗಿರುತ್ತಾರೆ. ಬಹುತೇಕ ಇನ್ನು ಮುಂದೆ ಬೋಗಸ್  ಮತದಾರರ ಪಟ್ಟಿಗೆ ಕಡಿವಾಣ ಬೀಳುವುದಂತೂ ಗ್ಯಾರಂಟಿ. ಇವರು ಇನ್ನು ಮುಂದೆ ಯಾವ ಚಾಪೆ ಕೆಳಗೆ ತೂರುತ್ತಾರೋ ಕಾದು ನೋಡಬೇಕಿದೆ.