TUMAKURU:SHAKTHIPEETA FOUNDATION
ಜೀವನದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ತಾತ್ಕಾಲಿಕ.
ಆದರೂ ಮನುಷ್ಯನ ದುರಾಸೆ ಹೇಳ ತೀರದು.
ಹುಟ್ಟು ಆಕಸ್ಮಿಕ, ನಮ್ಮದಲ್ಲ.
ಸಾವು ಶಾಶ್ವತ ನಮ್ಮ ಕೈಲಿಲ್ಲ.
ಆತ್ಮ ನಮ್ಮದಲ್ಲ.
ಜೀವ ನಮ್ಮದಲ್ಲ.
ದೇಹ ನಮ್ಮದಲ್ಲ.
ಸಂಪಾದಿಸಿದ ಆಸ್ತಿ ನಮ್ಮದಲ್ಲ,
ಗಳಿಸಿದ ಸಂಪತ್ತು ನಮ್ಮದಲ್ಲ.
ಕೂಡಿಟ್ಟ ಹಣವೂ ನಮ್ಮದಲ್ಲ.
ಯಾವಾಗ ಬೇಕಾದರೂ ಬಿಟ್ಟು ಹೋಗಬಹುದು.
ಯಾವಾಗಬೇಕಾದರೂ ನಮ್ಮಿಂದ ಕಸಿದುಕೊಳ್ಳ ಬಹುದು.
ನಮ್ಮ ಮನಸ್ಸು ಮತ್ತು ನಾವು ಮಾಡುವ ಕಾಯಕ ಮಾತ್ರ ನಮ್ಮದು ಎನ್ನ ಬಹುದಂತೆ.
ಯಾರನ್ನು ಒಪ್ಪಿಸಬೇಕಾಗಿಲ್ಲ.
ನಮ್ಮ ಸುತ್ತ ಜನರಿದ್ದಾರೆ.
ನಮ್ಮ ಸುತ್ತ ದೇವರಿದ್ದಾರೆ.
ನಮ್ಮ ಸುತ್ತ ನಮ್ಮವರಿದ್ದಾರೆ.
ನಮ್ಮ ಸುತ್ತ ನಮ್ಮ ಶತ್ರುಗಳು ಮತ್ತು ಹಿತಶತೃಗಳಿದ್ದಾರೆ.
ನಮ್ಮ ಸುತ್ತ ನಯವಂಚಕರಿದ್ದಾರೆ.
ನಮ್ಮ ಮನಸ್ಸಿಗೆ ಪ್ರೀತಿಯಾಗುವ ಕೆಲಸ ಮಾಡಿದ ತೃಪ್ತಿ,
ನಮಗೆ ಬಂದರೆ ಅದೇ ನಿಜವಾದ ಸ್ವರ್ಗವಂತೆ.
ನಮ್ಮ ಮನಸ್ಸಿಗೆ ನಮ್ಮ ಕಾಯಕದ ಬಗ್ಗೆ ವಿಶ್ವಾಸ ಬರದೇ ಇದ್ದರೆ, ಅದೇ ನರಕವಂತೆ.
ನಮ್ಮ ಜೀವನದ ಮೌಲ್ಯ ಮಾಪನ ಮಾq ಬೇಕಾದವರೂ ಸಹ ನಾವೇ ಅಂತೆ.
ಸಮಯ ಸಿಕ್ಕಾಗ ಧ್ಯಾನಕ್ಕೆ ಕುಳಿತ ಅವಧಿಯಲ್ಲಿಯೇ ಮೌಲ್ಯಮಾಪನ ಮಾಡಲು ಸೂಕ್ತ ಸಮಯವಂತೆ.