TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಪರ್ವ ಆರಂಭವಾಗಿದೆ. ಪ್ರಧಾನಿ ಶ್ರೀ ನರೇಂದ್ರಮೋದಿಯವರು ಸೇರಿದಂತೆ, ಬಿಜೆಪಿಯ ಬಹುತೇಕ ಎಲ್ಲಾ ಹಂತದ ನಾಯಕರುಗಳು, ಬಹಳ ಹೆಮ್ಮೆಯಿಂದ ಬಿಜೆಪಿ ನೇತೃತ್ವದ ಸರ್ಕಾರ, ಡಬ್ಬಲ್ ಇಂಜಿನ್ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ.
ಅಷ್ಟೆ ಅಲ್ಲ ಡಬ್ಬಲ್ ಇಣಜಿನ್ ಸರ್ಕಾರದಲ್ಲಿ ಅಭಿವೃದ್ಧಿ ಹೊಳೆ ಹರಿಯಲಿದೆ ಎಂದೂ ಪ್ರಚಾರ ಮಾಡುತ್ತಿದ್ದಾರೆ. ಕೆಲವು ರಾಜ್ಯಗಳ ಚುನಾವಣೆ ಬಂದಾಗ ಅಭಿವೃದ್ಧಿ ಯೋಜನೆಗಳ ಮಂಜೂರಾತಿ ಮಾಡಿರುವುದು ಸಹ ಪ್ರತ್ಯಕ್ಷವಾಗಿದೆ.
ಈಗ ನಮ್ಮ ರಾಜ್ಯದ ಸರದಿ, ಚುನಾವಣೆಯೇ ಬೇರೆ, ಅಭಿವೃದ್ಧಿ ವಿಚಾರವೇ ಬೇರೆ ಎನ್ನುವ ಹಾಗಿಲ್ಲ, ಚುನಾವಣಾ ನೆಪದಲ್ಲಿಯಾದರೂ, ಕೇಂದ್ರ ಸರ್ಕಾರದಲ್ಲಿ ಮಂಜೂರಾತಿ ಹಂತದಲ್ಲಿ ಇರುವಂತಹ, ನೆನೆಗುದಿಗೆ ಬಿದ್ದಿರುವಂತಹ, ನಮ್ಮ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಅಭಿವೃದ್ದಿ ಯೋಜನೆಗಳ ಪ್ರಸ್ತಾವನೆಗಳನ್ನು ಜಾರಿ ಮಾಡಿದರೆ, ಒಂದು ಬೃಹತ್ ಕೊಡುಗೆಯಾಗಲಿದೆ, ಎನ್ನುತ್ತಾರೆ ಉನ್ನತ ಮಟ್ಟದ ಅಧಿಕಾರಿಗಳು.
ಸರ್ಕಾರದ ಮತ್ತು ಬಿಜೆಪಿ ಪಕ್ಷದ ಹಂತದಲ್ಲಿ, ಚುನಾವಣೆಗೆ ಮೊದಲೇ ಮಂಜೂರಾತಿ ನೀಡಬಹುದಾದಂತಹ, ಪ್ರತಿಯೊಂದು ಇಲಾಖೆಯ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆಯಂತೆ. ಜೊತೆಗೆ ಹೊಸ ಯೋಜನೆಗಳ ಮಂಜೂರಾತಿ ಚಿಂತನೆಯೂ ನಡೆಯುತ್ತಿದೆಯಂತೆ.
ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿಯವರು ಈ ಬಗ್ಗೆ ಬಹಳ ಚುರುಕಾಗಿದ್ದಾರೆ, ಆದರೇ ಅವರ ನೇತೃತ್ವದ ತಂಡದ ಸಚಿವರುಗಳು ಚುರುಕಾಗಬೇಕಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರು, ಗ್ರಾಮೀಣ ಭಾಷೆಯ ಪ್ರಕಾರ ಚಳಿ ಬಿಟ್ಟು ಮೈ ಕೊಡವಿ ಕೊಂಡರೇ ಮಾತ್ರ ಗುರಿ ತಲುಪಬಹುದಂತೆ.
ದೆಹಲಿಯ ಉನ್ನತ ಮಟ್ಟದ ಅಧಿಕಾರಿಯೊಬ್ಬರ ಪ್ರಕಾರ, ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಹಾಗೂ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯÀವರ, ಪ್ರಧಾನ ಕಾರ್ಯದರ್ಶಿಯರವರ ಹಾಗೂ ಕಾರ್ಯದರ್ಶಿಯವರ ಸಹಕಾರದಿಂದ, ಪ್ರತಿಯೊಂದು ಇಲಾಖೆಗಳ, ಪ್ರತಿಯೊಂದು ಯೋಜನೆಗಳ ಮಾಹಿತಿಯನ್ನು, ಮುಖ್ಯ ಮಂತ್ರಿಯವರಿಗೂ ನೀಡಬೇಕು. ವಿರೋಧ ಪಕ್ಷಗಳಿಗೂ ನೀಡಬೇಕು, ಮಾಧ್ಯಮಗಳಿಗೂ ಬಿಡುಗಡೆ ಮಾಡುವ ತಂತ್ರಗಾರಿಕೆ ಪ್ರದರ್ಶನ ಮಾಡಬೇಕು.
ಪಕ್ಷಾತೀತವಾಗಿ ಎಲ್ಲರೂ, ಕೇಂದ್ರ ಸರ್ಕಾರದ ಮೇಲೆ ಮುಗಿ ಬಿದ್ದರೆ, ಕೇಂದ್ರದಿಂದ ಬಂಪರ್ ಕೊಡುಗೆ ಪಡೆಯಲು ವಿಫುಲ ಅವಕಾಶಗಳು ಇವೆ, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ನೀವೂ, ಈಗ ಮೌನವಾಗಿರುವುದು ಒಳ್ಳೆಯದಲ್ಲಾ ಎಂಬ ಸಲಹೆ ನೀಡಿದ್ದಾರೆ.
ದಿನಾಂಕ:26.11.2022 ರ ಸಂವಿಧಾನದ ದಿನದಂದು ಈ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆದಿದ್ದರೂ, ಮೌನವಾಗಿ ಮುಂದುವರಿಯಬೇಕೋ, ಅಬ್ಬರದ ಪ್ರಚಾರ ಮಾಡಬೇಕೋ ಎಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಆಸಕ್ತರು ಸಲಹೆ ಸಹಕಾರ ನೀಡಬಹುದಾಗಿದೆ.
ಶಕ್ತಿಪೀಠ ಫೌಂಡೇಷನ್ ಮೌನ ಚಳುವಳಿಯನ್ನು ಆರಂಭಿಸಿದೆ. ಪಲಿತಾಂಶ ಕಾದುನೋಡೋಣ?