TUMKURU:SHAKTHIPEETA FOUNDATION
ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ತುಮಕೂರು, ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ದಿನಾಂಕ:15.12.2022 ಹಾಗೂ 16.12.2022 ರಂದು ತುಮಕೂರು ಜಿಲ್ಲಾ 14 ನೇಯ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಈ ಸಮ್ಮೇಳನದಲ್ಲಿ ದಿನಾಂಕ:15.12.2022 ರಂದು ಮಧ್ಯಾಹ್ನ 12.45 ರಿಂದ 1.45 ರವರೆಗೆ ‘ತುಮಕೂರು ಜಿಲ್ಲೆ ಅಭಿವೃದ್ಧಿಯ ಆಯಾಮಗಳು’ ಎಂಬ ಬಗ್ಗೆ ಸಂವಾದ ಎರ್ಪಡಿಸಿದ್ದಾರೆ. ಇದೊಂದು ನಿಜಕ್ಕೂ ಅರ್ಥಗರ್ಭಿತವಾಗಿದೆ. ಸಮಯ ಮಾತ್ರ ಕಡಿಮೆಯಾಗಲಿದೆ. ಆದರೂ ವಿಶಿಷ್ಠತೆ ಮುಖ್ಯ.
ಕೇಂದ್ರ ಸಮಿತಿ, 14 ನೇ ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಎಸ್.ಸಿದ್ದಲಿಂಗಪ್ಪನವರಿಗೆ ಅಭಿನಂದನೆಗಳು.
ಈ ಸಂವಾದದ ಸ್ವರೂಪವೇ ವಿಶಿಷ್ಠವಾಗಿರಲಿದೆ. ತುಮಕೂರು ಜಿಲ್ಲೆಯ ಯಾವುದೇ ಒಬ್ಬ ವ್ಯಕ್ತಿ, ಯಾವುದೇ ಒಂದು ಸಂಘಟನೆ, ಯಾವುದೇ ಒಂದು ರಾಜಕೀಯ ಪಕ್ಷ, ಯಾವುದೇ ಪಕ್ಷದ ಚುನಾಯಿತ ಜನಪ್ರತಿನಿಧಿಗಳ, ರೈತರ, ವಿವಿಧ ವರ್ಗದವರ ಅಭಿವೃದ್ಧಿ ಮನವಿ ಮತ್ತು ಸಲಹೆಗಳನ್ನು ಸ್ವೀಕರಿಸಿ, ಈ ಸಂವಾದದಲ್ಲಿ ಚರ್ಚಿಸಿ, ಪುಸ್ತಕದ ರೂಪದಲ್ಲಿ ಪ್ರಕಟಿಸಿ, ಅವುಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸುವುದು ಒಂದು ಪ್ರಮುಖ ಅಂಶವಾಗಲಿದೆ.
ಪ್ರತಿ ವರ್ಷ ನಡೆಯುವ ಜಿಲ್ಲಾ ಸಮ್ಮೇಳನದಲ್ಲಿ, ಇಲ್ಲಿ ಸಂಗ್ರಹ ಮಾಡಿದ ಅಭಿವೃದ್ಧಿ ಯೋಜನೆಗಳ ಮೌಲ್ಯಮಾಪನ ನಡೆಯುವಂತಾಗಬೇಕು ಎಂಬುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ. ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರು ಹಾಗೂ ಕೆಲವು ಪರಿಣಿತ ತಜ್ಞರನ್ನು, ಈ ಸಮ್ಮೇಳನದಲ್ಲಿ ಸಾಂಕೇತಿಕವಾಗಿ ಭಾಗವಹಿಸಲು ಚಿಂತನೆ ನಡೆಸಿದ್ದರೂ, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಎಲೆಮರೆ ಕಾಯಿಯ ಹಾಗೆ ಶ್ರಮಿಸುತ್ತಿರುವ ಎಲ್ಲರನ್ನೂ, ಬಹಿರಂಗವಾಗಿ ಆಹ್ವಾನಿಸಿ ಅವರ ಮನವಿ ಮತ್ತು ಸಲಹೆಗಳನ್ನು ಸ್ವೀಕರಿಸುವ ಆಲೋಚನೆಯಿದೆ.
ಎಲ್ಲರ ಮನವಿಗಳನ್ನು ಸ್ವೀಕರಿಸಿ, ಜೊತೆಗೆ ಜಿಲ್ಲಾ ಮಟ್ಟದ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆ ನಡೆಸಿ, ಅವರ ಪ್ರಣಾಳಿಕೆಗ¼ ಜಿಲ್ಲಾ ಮಟ್ಟದ ಯೋಜನೆಗಳನ್ನೂ, ಈ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗುವುದು. ನಂತರ ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಯೋಜನೆಗಳ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆ ಹಾಗೂ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಮಿತಿಗಳಲ್ಲೂ ಚರ್ಚೆ ನಡೆಸಲಾಗುವುದು. ಇದೊಂದು ‘ಜಿಲ್ಲೆಯ ಅಭಿವೃದ್ಧಿ ಮಾರ್ಗದರ್ಶಿ’ ಯಂತಿರಬೇಕು ಎಂಬುದು ನನ್ನ ಅಲೋಚನೆ.
ಇಲ್ಲಿ ಜಾತಿ, ಪಕ್ಷ, ವ್ಯಕ್ತಿ, ಯಾವುದೇ, ಗುಂಪುಗಾರಿಕೆ ಇರಬಾರದು, ಯೋಜನೆಗಳ ವಸ್ತು ಸ್ಥಿತಿಗಳ ಬಗ್ಗೆ ಖಡಕ್ ಮೌಲ್ಯಮಾಪನ ನಡೆಯುವಂತಹ ವ್ಯವಸ್ಥೆಗೆ ಆಧ್ಯತೆ ನೀಡಬೇಕು. ಸಾದ್ಯಾ-ಸಾದ್ಯತೆಗಳ ಬಗ್ಗೆ ಅವಲೋಕನ ಮಾಡಿದ, ನಂತರ ಅಂತಿಮ ನಿರ್ಧಾರ ಮಾಡಬೇಕಿದೆ.
ಈ ಸಂವಾದದ ನಿರೂಪಣೆ ಮಾಡುವ ಶ್ರೀ ಸಿ.ಕೆ.ಮಹೇಂದ್ರರವರು ಎಲ್ಲರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಒಂದು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಲು ಚರ್ಚಿಸಲಾಗುವುದು.
ಅಂತಿಮವಾಗಿ ಈ ಸಮ್ಮೇಳನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಮಾಡುವ ನಿರ್ಣಯದ ಮೇರೆಗೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸಲು ಒಂದು ಶಾಶ್ವತ ವೇದಿಕೆಯನ್ನು ರೂಪಿಸುವ ಅಗತ್ಯವಿದೆ.
ತುಮಕೂರು ಜಿಲೆಯಲ್ಲ್ಲಿ ಕೈಗೊಳ್ಳುವ, ಈ ನಿರ್ಧಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮಾದರಿಯಾಗ ಬೇಕು ಎಂಬುದು ನನ್ನ ಆಲೋಚನೆ. ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಷಿರವರೊಂದಿಗೂ ಸಮಾಲೋಚನೆ ನಡೆಸಲಾಗುವುದು.
ಅಂತಿಮ ನಿರ್ಧಾರ ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಇವರದ್ದಾಗಿದೆ. ನನ್ನದು ಪರಿಕಲ್ಪನೆ ಮಾತ್ರ. ಈ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಮನವಿ.