21st November 2024
Share

TUMAKURU:SHAKTHI PEETA FOUNDATION

ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನ ಅತ್ಯಾಚಾರಕ್ಕೆ ಒಳಪಟ್ಟು, ತನ್ನ ತನವನ್ನೆ ಕಳೆದು ಕೊಂಡಿದೆ ಎಂದರೆ ಕೆಲವರಿಗೆ ಸಿಟ್ಟು ಬಂದರೂ ವಾಸ್ತವಿಕತೆ ಹೇಳಲೇ ಬೇಕು. ಬೆಂಕಿಗೆ ಗಂಟೆ ಕಟ್ಟುವರು ಯಾರು? ಎಂಬಂತಾಗಿದೆ. ಅದೇನೇ ಇರಲಿ.

ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣದ ಬಗ್ಗೆ, ನನಗೆ ಕೆಲವು ತಿಂಗಳಿನಿಂದ ಹಲವಾರು ಪೋಷಕರು ಫೋನ್ ಮಾಡಿ, ಭವಿಷ್ಯದ ತೊಂದರೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದರು. ನಾನು ತಲೆಕೆಡಿಸಿಕೊಂಡಿರಲಿಲ್ಲ. ನಿನ್ನೆ ಒಬ್ಬ ಆತ್ಮೀಯರು ಕರೆ ಮಾಡಿ ನೀವೂ ಒಮ್ಮೆ ಇಲ್ಲಿಗೆ ಬಂದು ಹೋದರೆ ಭವಿಷ್ಯದಲ್ಲಿ ಹುಡುಗ-ಹುಡುಗಿಯರ ಚೆಲ್ಲಾಟಕ್ಕೆ ಬ್ರೇಕ್ ಹಾಕಬಹುದು ಸಾರ್, ಎಂದಾಗ ನನಗೆ ಕುತೂಹಲ ಮೂಡಿ ದಿನಾಂಕ:21.12.2022 ರಂದು ಸ್ಥಳಕ್ಕೆ ಭೇಟಿ ನೀಡಿದ್ದೆ.

ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಸಂತಕುಮಾರಿರವರು ಹಾಗೂ ಸರ್ಕಾರಿ ಜ್ಯೂನಿಯರ್ ಕಾಲೇಜು ಪ್ರಾಂಶುಪಾಲರಾದ ಶ್ರೀ ರಾಜಶೇಖÀರ್ ರವರೊಂದಿಗೆ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಿದೆ.

ಹುಡುಗ ಹಾಗೂ ಹುಡಗಿಯರ ಕಾಲೇಜು ಕೊಠಡಿಗಳ ಮಧ್ಯೆ 14 ಅಡಿ ಅಂತರವಿದೆ. ಕಿಟಕಿಗಳನ್ನು ಎದುರು ಬದರು ಇಡುತ್ತಿದ್ದಾರೆ, ಕಿಟಕಿ ಮೂಲಕ ಬಾಣ ಬಿಡುತ್ತಾರೆ, ಕೀಟಲೇ ಮಾಡುತ್ತಾರೆ, ಎಂದು ಪೋಷಕರು ಹೇಳುತ್ತಿದ್ದಾರೆ, ತಮ್ಮ ಅನುಭವ ಹೇಳಿ ಎಂದಾಗ ಅವರು ಹೇಳಿದ ಮಾತುಗಳು ನನ್ನನ್ನು ಬೆಚ್ಚಿ ಬೀಳಿಸಿತು.

ಈ ಸಮಸ್ಯೆ ಬಗ್ಗೆ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸಮ್ಮುಖದಲ್ಲಿ, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಒಂದು ಪರಿಹಾರ ಹುಡುಕೋಣ ಎಂದು ಹೇಳಿ ಬಂದೆ.

ಈ ಬಗ್ಗೆ ವಿಧ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಲು ನನಗೆ ಆಸಕ್ತಿ ಇದ್ದರೂ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ.ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ಬಹುಮುಖ್ಯ ಸಭೆಗೆ ಹೋಗುವ ತುರ್ತು ನಿಮಿತ್ತ ನಿರ್ಗಮಿಸಿದೆ.

ಅನುಭವಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯ ತಿಳಿಸಲು ಬಹಿರಂಗ ಮನವಿ. ಜೊತೆಯಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್‍ರವರು ಮತ್ತು ಎರಡು ಕಾಲೇಜಿನ ಕೆಲವು ಉಪನ್ಯಾಸಕರು ಇದ್ದರು.

ಸಂಸದರಿಗೆ ಈ ಬಗ್ಗೆ ಹೇಳಿದಾಗ ಅವರು ಸಹ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸೋಣ ಎಂದಿದ್ದಾರೆ.