15th January 2025
Share

TUMAKURU:SHAKTHIPEETA FOUNDATION

ಶ್ರೀ ರಾಹುಲ್ ಗಾಂಧಿಯವರು ಸಂಸದರ ಸ್ಥಾನದಿಂದ ಅನರ್ಹ ನ್ಯೂಸ್ ಬಂದಾಗ, ನಾನು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಜೊತೆಯಲ್ಲಿ ಇದ್ದೆವು. ನನಗೆ ತಕ್ಷಣ ಪ್ಲಾಷ್ ಆಗಿದ್ದು ಸಾರ್ ಗುಡದಿನ್ನಿಯವರು ಹೇಳಿದ ಮಾತು ಸತ್ಯ ಇರುವ ಆಗಿದೆ ಎಂದಾಗ, ಬಸವರಾಜ್ ರವರು ನನಗೆ ಹೇಳಿದ ಸುಮಾರು 20 ವರ್ಷಗಳ ಹಿಂದಿನ ಮಾತನ್ನು ಇಬ್ಬರೂ ಮೆಲಕು ಹಾಕಿದೆವು.

ದಿ. ಗುಡದಿನ್ನಿಯವರು ಲೋಕಸಭಾ ಸದಸ್ಯರಾಗಿದ್ದಾರಂತೆ, ಉತ್ತರ ಕರ್ನಾಟಕದಲ್ಲಿ ಯಾರೋ ಒಬ್ಬರೂ ಸನ್ಯಾಸಿ/ತಪಸ್ವಿಗಳು ಇದ್ದರಂತೆ, ವರ್ಷಕ್ಕೆ ಒಂದು ಭಾರಿ ಮಾತ್ರ ಗುಹೆಯಿಂದ ಹೊರ ಬರುತ್ತಿದ್ದರಂತೆ, ಅಂದು ಸಾವಿರಾರು ಜನರು ಸೇರುತ್ತಿದ್ದರಂತೆ.

ಗುಡದಿನ್ನಿಯವರು ಭಾಗವಹಿಸಿದ್ದರಂತೆ, ಅಂದು ತಪಸ್ವಿಗಳು ಆ ಗುಡದಿನ್ನಿ ಕರೆಯಿರೋ ಎಂದು ಹೇಳಿದರಂತೆ, ತಪಸ್ವಿಗಳು ಗುಡದಿನ್ನಿಯವರಿಗೆ ನಿಮ್ಮ ಲೀಡರ್‍ಗೆ ಹೇಳಿ ಬಿಡಪ್ಪ, ಶ್ರೀಮತಿ ಸೋನಿಯಾ ಗಾÀಂಧಿ ಪ್ರಧಾನಿಯಾಗಲ್ಲ, ಆಕೆ ಮಗಳು ಇದ್ದಾಳಲ್ಲ ಪ್ರಿಯಾಂಕ ಗಾಂದಿ,ü ಆಕೆ 9 ವರ್ಷ ದೇಶದ ಪ್ರಧಾನಿಯಾಗ್ತಾಳೆ, ನಂತರ ಸಾಯಿಸುತ್ತಾರೆ ಎಂದರಂತೆ.

ಗುಡದಿನ್ನಿಯವರು ದೆಹಲಿಗೆ ಬಂದ ನಂತರ, ಜಿ.ಎಸ್.ಬಸವರಾಜ್ ರವರಿಗೆ ನಡೆದಿದ್ದು ಹೇಳಿ, ಸೋನಿಯಾ ಗಾಂಧಿಯವರ ಬಳಿ ನೀನು ಚೆನ್ನಾಗಿ ಇದ್ದಿಯಾ, ನೀನೂ ಅವರಿಗೆ ಈ ವಿಚಾರ  ಹೇಳು ಎಂದರಂತೆ.

ಬಸವರಾಜ್ ರವರು ಸೋನಿಯಾ ಗಾಂಧಿಯವರಿಗೆ ಹೇಳಲಿಲ್ಲವಂತೆ. ಆದರೇ ನನಗೆ ಹೇಳಿದ್ದು ನನೆಪಿದೆ. ಈ ವಿಚಾರ ಹೇಳಿದಾಗ ಅಂತೂ ಗುಡದಿನ್ನಿ ಹೇಳಿದ್ದರು, ಆದರೇ ಮೋದಿಯವರೇ ಮುಂದಿನ ಪ್ರಧಾನಿಯಾಗ್ತಾರೆ ಎಂದರು.

 ಹೌದು ಸಾರ್ ಮುಂದೊಂದು ದಿವಸ ಶ್ರೀಮತಿ ಪ್ರಿಯಾಂಕ ಗಾಂಧಿನೂ ಪ್ರಧಾನಿಯಾದರೇ ಆಶ್ರ್ಚರ್ಯ ಇಲ್ಲವಲ್ಲ, ಎಂದಾಗ ಹೌದು ಇದು ಪ್ರಜಾಪ್ರಭುತ್ವ ಎಂದು ಮಾತು ಮುಗಿಸಿದೆವು.

ಕಾಂಗ್ರೆಸ್ ನವರು ತಪಸ್ವಿರವರ ಹುಡುಕಾಟ ಆರಂಭಿಸ ಬಹುದು.

ಹೆಚ್ಚಿನ ಮಾಹಿತಿಗಾಗಿ ಶ್ರೀ ಜಿ.ಎಸ್.ಬಸವರಾಜ್ ರವರನ್ನು ಸಂಪರ್ಕಿಸ ಬಹುದು?