21st November 2024
Share

TUMAKURU: SHAKTHIPEETA FOUNDATION

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಆಖಾಡದಲ್ಲಿ, 15 ದಿವಸದಲ್ಲಿ ಸುಮಾರು 10000 ಕೋಟಿ ಹಣವನ್ನು ಹಂಚುವ ಅನಧಿಕೃತ ಹಣದ ಜಾತ್ರೆಯಂತೆ.

ಪ್ರಮುಖ ಪಕ್ಷಗಳ ತಲಾ ಒಬ್ಬರಂತೆ ಹಾಗೂ ಉಳಿದ ಎಲ್ಲಾ ಅಭ್ಯರ್ಥಿಗಳು ಸೇರಿ ಒಬ್ಬರಂತೆ ಲೆಕ್ಕ ಹಾಕಿದರೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಜನರಂತೆ, 1000 ಜನ ಅಭ್ಯರ್ಥಿಗಳಿಂದ, ಕನಿಷ್ಠ 10 ಕೋಟಿಯಿಂದ 100 ಕೋಟಿವರೆಗೂ ಖರ್ಚುಮಾಡುವ ಕ್ಷೇತ್ರಗಳಿವೆಯಂತೆ.

ತಲಾ 10 ಕೋಟಿ ಲೆಕ್ಕ ಹಾಕಿದರೂ, 1000 ಜನಕ್ಕೆ, 10000 ಕೋಟಿ ಹಣದ ಹೊಳೆ ಅರಿಯಲಿದೆ ಯಂತೆ. ಈ ಹಣ ಖರ್ಚುಮಾಡಬೇಕಾದರೆ ಲಕ್ಷಾಂತರ ಜನ ಹೆದರಿಕೊಂಡು ಕದ್ದು ಮುಚ್ಚಿ ಭಯದ ವಾತಾವಾರಣದಲ್ಲಿ ಹಂಚುವರಂತೆ. ನಂತರ ಇವನು ಅಷ್ಟು ತಿಂದ, ಅವನು ಅಷ್ಟು ತಿಂದ ಎಂಬ ಹೊಗಳಿಕೆ ಬೇರೆಯಂತೆ.

ಇಷ್ಟು ಹಣವೂ ಬ್ಲಾಕ್, ಹವಾಲ ಅಥವಾ ಬೇರೆ ಏನೇ ಹೆಸರಿನಲ್ಲಿ ಕರೆದರೂ ಭಯದ ವಾತಾವರಣ ದಲ್ಲಿ ದುಡಿದ/ಗಳಿಸಿದ/ಪಡೆದಿರುವ ಹಣವಂತೆ. ಎಲ್ಲಾ ಪಕ್ಷಗಳ ರಾಜಕಾರಣಿಗಳ ಕರ್ಮ, ಪಾಪ ಇಷ್ಟು ಹಣ ಸಂಪಾದಿಸಲು ಅದೆಷ್ಟು ಜನರಿಂದ ಛಿ, ಥೂ ಎಂದು ಹುಗಿಸಿಕೊಳ್ಳ ಬೇಕಂತೆ. ಹಣ ಪಡೆಯುವವರೇ ಹೆಚ್ಚಾಗಿ ಬೈಯ್ಯುವರಂತೆ. ಕೊಡುವವರಂತೂ ಹಿಂದೆ ಹುಗಿದು ಉಪ್ಪು ಹಾಕುವರಂತೆ. ಮುಂದೆ ಹೊಗಳಿ ಅಟ್ಟಕ್ಕೆ ಹೇರಿಸುವರಂತೆ.

ನನ್ನ ಮಕ್ಕಳು ದೋಚವ್ರೆ/ ದರೋಡೆ ಮಾಡವ್ರೇ ಕೊಡ್ತಾರೆ, ಅವರಪ್ಪನ ಮನೆಯಿಂದ ತಂದು ಕೊಡ್ತಾರಾ ಎಂಬ ಮಾತು ಬೇರೆಯಂತೆ.ಬಹುತೇಕ ವರ್ಗದವರ ಜನ ಹಣದ ನೀರಿಕ್ಷೆಯಲ್ಲಿ ಇರುತ್ತಾರಂತೆ. ಹಣದ ಜೊತೆ ಸಿಕ್ಕಿ ಹಾಕಿ ಕೊಂಡವರಿಗೆ ನರಕವಂತೆ,

ಈ ಹಣ ಹಂಚುವವg/ಖರ್ಚು ಮಾಡುವವರನ್ನು ಹಿಡಿಯುವವರ ವೇತನ, ಸಂಭಾವನೆಯೂ ಸುಮಾರು ಬಹುತೇಕ ಕೋಟಿ, ಕೋಟಿ ಹಣÀವಂತೆ. ಈ ಲೆಕ್ಕವನ್ನು ಚುನಾವಣಾ ಆಯೋಗ ಪ್ರಕಟಣೆ ಮಾಡಬಹುದಂತೆ.

ದೇಶ ಆಳುವ ದೊರೆಗಳ ಶುಭಾರಂಭ ಹೇಗೆ ಆಗಲಿದೆ ನೋಡಿ, ಪಲಿತಾಂಶದ ನಂತರ 224 ಜನ ದೊರೆಗಳ ಸಂಬ್ರಮವೋ ಸಂಭ್ರಮ – ಸೋತವರ ಪಾಡು ನಾಯಿ ಪಾಡು?

ಇದೂ ಪ್ರಜಾ ಪಭುತ್ವದ ಒಂದು ಮೆಟ್ಟಿಲು, ಎಂಥಾ ವಿಪರ್ಯಾಸ ಅಲ್ಲವೇ?

ಪ್ರಾಮಾಣಿಕ ರಾಜಕಾರಣಿಗಳ ಸ್ಥಿತಿ ನೋಡಿದರೇ ಅಯ್ಯೋ ಪಾಪ/ದೇವರೇ ಬಲ್ಲ.