22nd December 2024
Share

TUMAKURU:SHAKTHI PEETA FOUNDATION

ತುಮಕೂರು ನಗರದ ಜಯನಗರ ಪೂರ್ವದಲ್ಲಿರುವ ಎಡಕಲ್ಲು ಗುಡ್ಡದ ಪಾರ್ಕ್ (ಯಾರೋ ಬಂಡೆಯ ಮೇಲೆ ಬರೆದಿರುವ ಹೆಸರು), ಇನ್ನೂ ಮುಂದೆ ಅಂತರ ರಾಷ್ಟ್ರೀಯ ಮಟ್ಟದ ಸುದ್ಧಿ ಮಾಡಲಿದೆ.

ಜಯನಗರ ಪೂರ್ವದ ಮೊದಲನೇ ಮುಖ್ಯ ರಸ್ತೆಯಲ್ಲಿ INDIA @ 100 – KARNATAKA @100 – TUMAKURU @ 100:KNOWLEDGE BANK ಆರಂಭವಾದರೆ, ಜಯನಗರ ಪೂರ್ವದ ಎರಡನೇ ರಸ್ತೆಯಲ್ಲಿರುವ ಎಡಕಲ್ಲು ಗುಡ್ಡದ ಪಾರ್ಕ್ ನಲ್ಲಿ, ಈ ಮೇಲ್ಕಂಡ ಅಂಶಗಳ ಬಗ್ಗೆ ನಿರಂತರವಾಗಿ ಗುಂಪು ಚರ್ಚೆ ನಡೆಯಲಿದೆ.

ತುಮಕೂರಿನ ಇಂಜಿನಿಯರ್ಸ್ ಅಸೋಶಿಯೇಷನ್ ಈ ಪಾರ್ಕ್ ನಿರ್ವಹಣೆಗಾಗಿ ದತ್ತು ಪಡೆಯಲು ತುಮಕೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದೆ.

ಪಿಪಿಪಿ ಮಾದರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ, ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಮತ್ತು ಇವೆರಡರ ಮಧ್ಯೆ ತಲೆ ಎತ್ತಲಿರುವ ನಗರ ಸೇರಿದಂತೆ ತ್ರಿವಳಿ ನಗರಗಳಲ್ಲಿ ಒಂದು ಲಕ್ಷ ಗಿಡ ಹಾಕುವ ಮತ್ತು ಹಾಲಿ ಇರುವ ಗಿಡಗಳ ಡಾಟಾ ಬೇಸ್ ಆರಂಭಿಸಲು ಉದ್ದೇಶಿಸಲಾಗಿದೆ.

ಜಯನಗರ ಪೂರ್ವದಲ್ಲಿರುವ ಹಲವಾರು ನಿವಾಸಿಗಳು, ಈ ಉಧ್ಯಾನವನಕ್ಕೆ ಈಗಾಗಲೇ ಬರಲಾರಂಭಿಸಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

ಇಲ್ಲಿರುವ ಕೆಲವು ಹಳೆಯ ಮರಗಳು ಕಾಲ ಕ್ರಮೇಣ ಬೀಳುವ ಸಂಭವವಿದೆ. ಈ ಹಿನ್ನಲೆಯಲ್ಲಿ ಈಗಲೇ ಅವುಗಳ ಪಕ್ಕ ವಿವಿಧ ಜಾತಿಯ ಗಿಡಗಳನ್ನು ಹಾಕಲು ನಾಗರೀಕರು ಸಲಹೆ ನೀಡಿದ್ದಾರೆ.

ನಿರ್ವಹಣೆಗಾಗಿ ಮಾಸಿಕ ಎಷ್ಟು ಖರ್ಚು ಬರಲಿದೆ. ಈ ಹಣವನ್ನು ಯಾವ ರೀತಿ ಕ್ರೋಡಿಕರಿಸಲಾಗುವುದು ಎಂಬ ಬಗ್ಗೆ ಉಧ್ಯಾನವನ ನಿರ್ವಹಣೆಗಾಗಿ ದತ್ತು ಪಡೆಯುವವರು ಬಹಿರಂಗ ಪಡಿಸುವುದು ಸೂಕ್ತವಾಗಿದೆ.

ನಗರದಲ್ಲಿರುವ ಉಧ್ಯಾನವನವನ್ನು ನಿರ್ವಹಣೆ ಮಾಡುವವರು, ಆಯಾ ಉಧ್ಯಾನವನದಿಂದಲೇ ಆದಾಯ ಹೇಗೆ ನಿರ್ವಹಣೆ ಮಾಡಬೇಕು ಎಂಬ ಚಿಂತನೆ ಆರಂಭವಾಗಿದೆ. ಈ ಬಗ್ಗೆ ಹಲವಾರು ಸಲಹೆಗಳು ಗಾಳಿಯಲ್ಲಿ ತೇಲಾಡುತ್ತಿವೆ.

ಕೆಲವು ಮಹಿಳೆಯರು ಇಲ್ಲಿ ಹೂವಿನ ಗಿಡಗಳನ್ನು ಹಾಕಿಸಿ ಸಾರ್, ಪೂಜೆಗೆ ನಮಗೆ ಹೂ ನೀಡಿದರೆ, ನಿರ್ವಹಣೆ ಮಾಡುವವರಿಗೆ ನಾವು ಆರ್ಥಿಕ ಸಹಾಯ ಮಾಡುತ್ತೇವೆ ಎಂದು ಸಲಹೆ ನೀಡಿದ್ದಾರೆ.

ಕೆಲವು ಹಿರಿಯ ನಾಗರೀಕರು ಔಷಧಿ ಗಿಡ ಹಾಕಿ, ಬೆಳಿಗ್ಗೆ ಜ್ಯೂಸ್ ಮಾಡಿಸಿ ಮಾರಾಟ ಮಾಡಿ, ನಿರ್ವಹಣೆ ಮಾಡುವವರಿಗೆ ನಾವೂ ಆರ್ಥಿಕ ಸಹಾಯ ಮಾಡುತ್ತೇವೆ ಎಂದು ಸಲಹೆ ನೀಡಿದ್ದಾರೆ.

ನಾಲೇಡ್ಜ್ ಬ್ಯಾಂಕ್ ಗೆ ಈ ರೀತಿಯ ಜ್ಞಾನದಾನ ಮಾಡಲು ಪರಿಣಿತರು ಮುಂದಾಗಿದ್ದಾರೆ. INDIA @ 100 – KARNATAKA @100 – TUMAKURU @ 100:KNOWLEDGE BANK ಮಾಡುವ ಮುನ್ನ, ಗುಂಪು ಚರ್ಚೆ ನಡೆಯುವ ಉಧ್ಯಾನವನದ ನಿರ್ವಹಣೆಗೂ ಜ್ಞಾನ ದಾನ ಪ್ರಮುಖವಲ್ಲವೇ?

ತಾವೂ ಐಡಿಯಾ ಕೊಡುವಿರಾ?