11th December 2024
Share

TUMAKURU : SHAKTHI PEETA FOUNDATION

ಊರಿಗೊಂದು ಪುಸ್ತಕಊರಿಗೊಂದು ಪವಿತ್ರವನಊರಿಗೊಂದು ಥೀಮ್ ಪಾರ್ಕ್

ಪಿಜೆಸಿಯಲ್ಲಿ 3571 ಮನೆಗಳಿವೆ, ಸಾವಿರಾರು ಗ್ರಾಮಗಳ, ಹತ್ತಾರು ದೇಶಗಳ, ಹಲವು ರಾಜ್ಯಗಳ, ನೂರಾರು ವಿಧಾನಸಭಾ ಕ್ಷೇತ್ರಗಳ, ವಿವಿಧ ಧರ್ಮ ಮತ್ತು ವಿವಿಧ ಜಾತಿಯ ಜನರು ಇಲ್ಲಿನ ನಿವಾಸಿಗಳಾಗಿದ್ದಾರೆ.

 ಇದೊಂದು ಅವಿಭಕ್ತ ಕುಟುಂಬದಂತೆ ಮಾಡಲು ಹಲವಾರು ಜನ ಶ್ರಮಿಸುತ್ತಿದ್ದಾರೆ. ಆಸಕ್ತ ಎಲ್ಲರಿಗೂ ಕನ್ನಡ ಭಾಷೆ ಕಲಿಸಲು, ಆಸಕ್ತರು ಎಲ್ಲಾ ನಿವಾಸಿಗಳ ಮಾತೃ ಭಾಷೆ  ಜ್ಞಾನ ಪಡೆಯಲು ಪಿಜೆಸಿಯ ಒಂದು ವಿಷನ್ ಗ್ರೂಪ್ ಕಾರ್ಯತಂತ್ರ ರೂಪಿಸುತ್ತಿದೆ.

ಅದೇ ರೀತಿ ಇಲ್ಲಿ ವಾಸವಿರುವ ಪ್ರತಿಯೊಬ್ಬ ನಿವಾಸಿಗಳÀ ‘ಊರಿಗೊಂದು ಪುಸ್ತಕ- ಊರಿಗೊಂದು ಪವಿತ್ರವನ- ಊರಿಗೊಂದು ಥೀಮ್ ಪಾರ್ಕ್’ ಯೋಜನೆ ಅನುಷ್ಠಾನದ ಬಗ್ಗೆ ಒಂದು ಟೆಂಪ್ಲೇಟ್ ಸಿದ್ಧಪಡಿಸಲು ಗ್ರಂಥಾಲಯ ತಜ್ಞ ಶ್ರೀ SHIVA SHANKAR ಕಾಡುದೇವರ ಮಠ ರವರು ದಿನಾಂಕ: 18.05.2023 ರಂದು ರಾತ್ರಿ 7.30 ಗಂಟೆಗೆ ಪಿಜೆಸಿ ರೀಡಿಂಗ್ ರೂಂ ನಲ್ಲಿ ಉಪನ್ಯಾಸ ನೀಡಲಿದ್ದಾರೆ, ಆಸಕ್ತರು ಭಾಗವಹಿಸಲು ಪಿಜೆಸಿ ನಿವಾಸಿ ಶ್ರೀ ಸಿದ್ದಗಂಗಪ್ಪನವರು ಮನವಿ ಮಾಡಿದ್ದಾರೆ. 

ಪಿಜೆಸಿ ಗ್ರಂಥಾಲಯದ ಪರಿಕಲ್ಪನೆ ಬಗ್ಗೆಯೂ ಚರ್ಚೆ ಮಾಡಿ, ಒಂದು ರೂಪುರೇಷೆ ಸಿದ್ಧಪಡಿಸಿ ಪಿಜೆಸಿ ಅಸೋಶೀಯೇಷನ್ ಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಪಿಜೆಸಿ ನಿವಾಸಿ ಶ್ರೀಮತಿ ಸುಪ್ರೀತರವರು ಮತ್ತು ಶ್ರೀಮತಿ ಆಪೇಕ್ಷರವರು ತಿಳಿಸಿದ್ದಾರೆ.

ಪಿಜೆಸಿ ನಿವಾಸಿ ಶ್ರೀ ರಾಜೇಶ್ ರವರು ಇರುವ ಪುಟ್ಟ ರೀಡಿಂಗ್ ರೂಂ ಸ್ಥಳದ ಬಳಕೆ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿಲಿದ್ದಾರೆ.

ಪಿಜೆಸಿ ನಿವಾಸಿ ವಿದ್ಯಾರ್ಥಿಗಳ, ಹಿರಿಯ ನಾಗರೀಕರ, ಮಹಿಳೆಯರ ಹಾಗೂ ವಿವಿಧ ವರ್ಗದವರ ನೀಡ್ ಬೇಸ್ಡ್ ಗ್ರಂಥಾಲಯದ ಸ್ಥಾಪಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವಾರು ನಿವಾಸಿಗಳು ವಿಷಯ ಹಂಚಿಕೊಂಡಿದ್ದಾರಂತೆ.

ಪಿಜೆಸಿ ರೋಟರಿಕ್ಲಬ್ ಪಧಾದಿಕಾರಿಗಳು ಮತ್ತು ಪಿಜೆಸಿ ಅಸೋಶಿಯೇಷನ್ ಪದಾಧಿಕಾರಿಗಳೊಂದಿಗೆ ಗ್ರಂಥಾಲಯದ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ ನಿಗದಿ ಮಾಡುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಆಸಕ್ತ ಪಿಜೆಸಿ ನಿವಾಸಿಗಳು ಭಾಗವಹಿಸುವುದು ಅಗತ್ಯವಾಗಿದೆ.