29th March 2024
Share

BEST VDP ಉಪವಿಭಾಗಾಧಿಕಾರಿ ಶ್ರೀ ಅಜಯ್, ಶ್ರೀ ಸತ್ಯಾನಂದ್ ಮತ್ತು ಕುಂದರನಹಳ್ಳಿ ರಮೇಶ್ ಸಮಾಲೋಚನೆ ನಡೆಸುವ ಸಂದರ್ಭ.

TUMAKURU:SHAKTHI PEETA FOUNDATION

  ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯನ್ನು 2019-20 ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆಗೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಆಯ್ಕೆ ಮಾಡಿಕೊಂಡಿದ್ದಾರೆ.

 ಮೋದಿಯವರ ಕನಸಿನ ಈ ಯೋಜನೆಯ ಸಾರಾಂಶ ಜನರಿಗೆ ಬೇಕಾದ (NEED BASED) ಯೋಜನೆಗಳನ್ನು ಮಾಡುವುದು. ಈ ಹಿನ್ನಲೆಯಲ್ಲಿ ವಿಲೇಜ್ ಡೆವಲಪ್‌ಮೆಂಟ್ ಪ್ಲಾನ್ ಮೊದಲು ಸಿದ್ಧಪಡಿಸಬೇಕು.

 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳ ಜನತೆ  ವೈಯಕ್ತಿಕವಾಗಿ, ಕುಟುಂಬಕ್ಕಾಗಿ, ತಮ್ಮ ಜಮೀನುಗಳಿಗೆ ಮತ್ತು ಸಮದಾಯಕ್ಕಾಗಿ ಏನು ಬೇಕು ಎಂಬ ಬಗ್ಗೆ ಗ್ರಾಮಪಂಚಾಯಿತಿಗೆ ಅರ್ಜಿಕೊಡಿ.

 ಯಾವುದೇ ಆರ್ಥೀಕ ನೆರವು ಇಲ್ಲದೆ ಹಲವಾರು ಯೋಜನೆಗಳನ್ನು ಶೇ ೧೦೦ ರಷ್ಟು ಜಾರಿಗೊಳಿಸುವುದು ಮೊದಲ ಆಧ್ಯತೆಯಾಗ ಬೇಕು. ಜನರ ನೆಮ್ಮದಿ ಕೆಡಿಸುತ್ತಿರುವ ಸಾಕಷ್ಟು ವಿವಾದಗಳಿಗೂ ಶೀಘ್ರ ಪರಿಹಾರ ದೊರಕಿಸುವುದು ಒಂದು ಉತ್ತಮ ಯೋಜನೆ.

 ನಮ್ಮ ಜಮೀನಿಗೆ ದಾರಿ ಇಲ್ಲ, ಮಗಳ ವಿಚ್ಚೇಧನಾಗಿಲ್ಲ, ನಮ್ಮ ಮಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಮ್ಮ ಮನೆ ಬೇರೆಯವರ ಹೆಸರಿನಲ್ಲಿದೆ, ನಮ್ಮ ಜಮೀನು ಅದಲು ಬದಲಾಗಿದೆ. ನನಗೆ ನಮ್ಮ ಸೊಸೆ ಊಟಹಾಕುತ್ತಿಲ್ಲ, ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ  ಕಷ್ಟವಾಗಿದೆ. ನಮ್ಮ ಜಮೀನಿಗೆ ಹಲವಾರು ಬೋರು ಕೊರೆಸಿದೆ ನೀರೇ ಇಲ್ಲ. ನನಗೆ ಈ ಕಾಯಿಲೆಯಿಂದ ಸಮಸ್ಯೆ ಆಗಿದೆ.

 ಕರಾಬು ಒತ್ತುವರಿಯಾಗಿದೆ, ಶಾಲೆ ಬಿದ್ದು ಹೋಗಿದೆ, ಅಂಗನವಾಡಿಗೆ ನೀರು ಬರುತ್ತಿಲ್ಲ, ನಿವೇಶನ ಇಲ್ಲ, ಮನೆ ಇಲ್ಲ, ಉದ್ಯೋಗ ಇಲ್ಲ, ಸ್ವಯೋ ಉದ್ಯೋಗ ಮಾಡಲು ಸಾಲ ಕೊಡಲ್ಲ, ಕೈಸಾಲ ಜಾಸ್ತಿ ಆಗಿದೆ ಕುಟುಂಬದ ನೆಮ್ಮದಿ ಹಾಳು ಆಗಿದೆ ಇದಕ್ಕೆ ಪರಿಹಾರ, ಹೀಗೆ ಯಾವುದೇ ಕಷ್ಟವಿರಲಿ ಯಾವುದೇ ಇಲಾಖೆಯ ಯೋಜನೆಯಡಿ ಬರಲಿ ಗ್ರಾಮ ಪಂಚಾಯಿತಿಗೆ ಅರ್ಜಿಕೊಡಿ,  ನಾಚಿಕೆ ಬೇಡ, ಅಂಜಿಕೆ ಬೇಡ, ಹೇಗೆ ನಮ್ಮ ಕಷ್ಟ ಹೇಳಿಕೊಳ್ಳುವುದು ಎಂಬ ಹಿಂಜರಿಕೆ ಬೇಡ.

 ಅಂಗವಿಕಲರ ಹಣ ಕೊಟ್ಟಿಲ್ಲ, ರೇಷನ್ ಕಾರ್ಡ್ ಕೊಟ್ಟಿಲ್ಲ, ಆಧಾರ್ ಕಾರ್ಡ್ ಇಲ್ಲ, ವಿಧವಾ ವೇತನ ಕೊಟ್ಟಿಲ್ಲ, ಹಿರಿಯ ನಾಗರೀಕರ ಮಾಸಾಶನಕ್ಕಾಗಿ ತಿರುಗಿ ಸತ್ತಿದ್ದೇನೆ. ಇ ಸ್ವತ್ತು ಮಾಡಿಲ್ಲ, ಖಾತೆ ಮಾಡಿಲ್ಲ ಹೀಗೆ ಯಾವುದೇ ಸಮಸ್ಯೆಯಿರಲಿ ನಿಮ್ಮ, ನಿಮ್ಮ ಕುಟುಂಬದ ನೆಮ್ಮದಿ ಮುಖ್ಯ. ಇದಕ್ಕೆ ನಿಯಾಮುನುಸಾರ ಪರಿಹಾರ ದೊರಕಿಸುವುದು ಯೋಜನೆಯ ಮುಖ್ಯ ಉದ್ದೇಶ.

  ಹೆಚ್.ಎ.ಎಲ್ ನಿಮ್ಮ ಪಂಚಾಯಿತಿಗೆ ಬಂದಿದೆ ಎಂದರೆ ಯಾವ ಯೋಜನೆಯನ್ನು ಬೇಕಾದರೂ ತರಬಹುದು. ಹಣದ ಬಗ್ಗೆ ನಿಮಗೆ ಚಿಂತೆ ಬೇಡ, ನಿಮ್ಮ ಪರಿಕಲ್ಪನೆ ಯೋಜನೆಗಾಗಿ ಒಂದು ಅರ್ಜಿ ನೀಡಿ.

 ಪಿಡಿಓರವರು ಅರ್ಜಿ ಬಂದ ದಿವಸ ಯಾವ ಇಲಾಖೆಯ ವ್ಯಾಪ್ತಿಗೆ ಬರಲಿದೆ, ಆಯಾ ಇಲಾಖೆಗೆ ರವಾನಿಸುವುದು, ಎಲ್ಲಾ ಡಿಜಿಟಲ್ ಮಯ, ಮೇಲ್ ಮಾಡಿ ಉತ್ತರ ಪಡೆಯಿರಿ. ಅಧಿಕಾರಿಗಳು ಅವರ ಇಲಾಖೆಯ ವ್ಯಾಪ್ತಿಗೆ ಬರುವ ಪ್ರತಿಯೊಂದು ಅರ್ಜಿಯ ಬಗ್ಗೆ ಪರಿಶೀಲಿಸಿ ಪರಿಹಾರ ಅಥವಾ ಕಾರಣ ಸಿದ್ಧಗೊಳಿಸುವುದು.  

 ನ್ಯಾಯಾಲಯದ ಮೊಕೊದ್ದಮೆಗಳು, ಪೋಲೀಸ್ ವ್ಯವಹಾರಗಳನ್ನು ಮಾತ್ರ ಹಾಗೆಯೇ ಇಟ್ಟು ಕೊಳ್ಳಿ, ವಿವಾದಗಳ ಬಗ್ಗೆ ಕೌನ್ಸಿಲಿಂಗ್ ಮಾಡಿಸಿ ನಂತರ ಕಾರ್ಯ ಪ್ರವೃತ್ತರಾಗ ಬೇಕಿದೆ.

 ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಾಲಿ ಇರುವ ಯೋಜನೆಗಳೆಲ್ಲವನ್ನು ಶೇ 100 ರಷ್ಟು ಜಾರಿ ಮಾಡಲು ಯೋಜನೆ ರೂಪಿಸಿ, ಜೊತೆಗೆ ಇನ್ನೋವೇಟಿವ್ ಆಗಿ ಇನ್ನೇನು ಹೊಸದಾಗಿ ಮಾಡಬಹುದು ಎಂಬ ಬಗ್ಗೆ ಚಿಂತನೆ ಮಾಡಿ ಅಂದಾಜು ಪಟ್ಟಿ ತಯಾರಿಸಿ. ಲೈನ್ ಎಸ್ಟಿಮೇಟ್ ಮಾಡಿ.  ವಿಡಿಪಿಯಲ್ಲಿ ಸೇರ್ಪಡೆ ಮಾಡುವುದು ಖಚಿತವಾದ ಮೇಲೆ, ಅಪ್ರೂವ್ ಆದ ಮೇಲೆ ವಿವರವಾದ ಯೋಜನಾ ವರದಿ ತಯಾರಿಸ ಬಹುದು.

  ಅವರವರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ರಾಜ್ಯ ಸರ್ಕಾರದ ಅನುದಾನ, ಕೇಂದ್ರ ಸರ್ಕಾರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು. ಕೆಲವು ಯೋಜನೆಗೆ ಇತರೆ ಮೂಲಗಳಿಂದ ಆರ್ಥಿಕ ನೆರವು ಪಡೆಯುವುದು ಮಾರ್ಗಸೂಚಿಯಲ್ಲಿದೆ. ವಿಡಿಪಿ ಅಪ್ರೂವ್ ಆಗುವ ಸಂದರ್ಭದಲ್ಲಿಯೇ ಯಾವ ಯೋಜನೆಯನ್ನು ಯಾವ ಅನುದಾನದಲ್ಲಿ ಮಾಬಹುದು ಎಂಬ ಪಟ್ಟಿ ಸಿದ್ಧವಾಗಲಿದೆ.

  ಜನತೆಯ ಅರ್ಜಿ ಜೊತೆಗೆ ಯಾವ ಯೋಜನೆ ಮಾಡಬೇಕು ಎಂಬ ಬಗ್ಗೆ ಅಧಿಕಾರಿಗಳ ಚಿಂತನೆ ಬಹಳ ಮುಖ್ಯ. ದೇಶದ ಯಾವುದೇ ಭಾಗದಲ್ಲಿ ಇರುವವರು ಸಹ ತಮ್ಮ ಐಡಿಯಾ ನೀಡಬಹುದು. ಇದೇ ಸಂಸದರ ಆದರ್ಶ ಮಾಸ ಆಚರಣೆ ಪ್ರಮುಖ ಉದ್ದೇಶ.

  ಜಿ.ಎಸ್.ಬಸವರಾಜ್‌ರವರ ಕನಸು, ಈ ಸಂಸದರ ಆದರ್ಶ ಗ್ರಾಮ ದೇಶಕ್ಕೆ ಮಾದರಿಯಾಗಿರ ಬೇಕು. ಮೋದಿಯವರೇ ಈ ಗ್ರಾಮ ಪಂಚಾಯಿತಿಗೆ ಒಮ್ಮೆ ಬಂದು ಹೋಗಿದ್ದಾರೆ, ಇನ್ನೊಮ್ಮೆ ಶೀಘ್ರವಾಗಿ ಬರಲಿದ್ದಾರೆ. ಅವರು ಬರುವ ವೇಳೆಗೆ ಕೆಲವು ಪಲಿತಾಂಶ ದೊಂದಿಗೆ ನಮ್ಮ ವಿಡಿಪಿ ಅವರ ಕೈ ಸೇರಬೇಕು.

 ಕಾಲಮಿತಿ ನಿಗದಿ ಇದೆ, ಇಂದಿನಿಂದಲೇ ಅರ್ಜಿಕೊಡುವ ಕೆಲಸ ಆರಂಭಿಸಿ. ಜನರಿಗೆ,  ಅಧಿಕಾರಿಗಳಿಗೆ ಅನೂಕೂಲವಾಗಲು ಅಸ್ಸಾಂ ರಾಜ್ಯದ ಒಂದು ವಿಡಿಪಿಯನ್ನು ಸೋಶಿಯಲ್ ಮೀಡಿಯಾ ಗ್ರೂಪ್‌ನಲ್ಲಿ ಹಾಕಲಾಗಿದೆ.

ಸಾಗಿ ವಾಚ್‌ಡಾಗ್ ಸಮಿತಿ ಸದಸ್ಯರು, ಮನೆ ಮನೆಗೆ ಹೋಗಿ ವಿಚಾರ ತಿಳಿಸಿ, ಕನಿಷ್ಟ ಕುಟುಂಬಕ್ಕೆ ಒಂದು ಅರ್ಜಿಯಾದರೂ ಇರಬೇಕು. ಯಾವುದೇ ಕಟುಟುಂಬ ಅರ್ಜಿ ನೀಡಲಿಲ್ಲ ಎಂದರೆ  ಅವರ ಕುಟುಂಬ ಬಹಳ ನೆಮ್ಮದಿಯಿಂದ ಇದೆ ಎಂಬ ಅರ್ಥವಾಗಲಿದೆ. ಇದೂ ಒಂದು ಸಾಧನೆಯೇ ಆಗಲಿದೆ. ಇದೇ ಯೋಜನೆಯ ಪ್ರಮುಖ ಅಂಶ.