29th March 2024
Share

TUMAKURU:SHAKTHIPEETA FOUNDATION

 ತುಮಕೂರಿನ ಶಕ್ತಿಪೀಠ ಫೌಂಡೇಷನ್ ಹೊರತಂದಿರುವ ನಿಮಗಿದು ಗೊತ್ತೆ ? https://epaper.shakthipeeta.in ಒಂದು ವರ್ಷ ಪೂರ್ಣಗೊಳಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಒಂದು ವರ್ಷದಲ್ಲಿ 561 ಪೋಸ್ಟ್‌ಗಳನ್ನು ಪ್ರಕಟಿಸಿದೆ, ವಿಶ್ವದ 44 ದೇಶಗಳ, ಬಹುಷಃ ಗೂಗಲ್‌ನ 268 ಪ್ರಾಂತೀಯ ಪ್ರದೇಶಗಳ/ವಿಭಾಗದ, 21501 ಜನ users,   21730  ಜನ new users,  51564 sessions,  ಈವರೆಗೂ  84220   pageveiws  ಮೂಲಕ ಬೆಂಬಲ ವ್ಯಕ್ತಪಡಿಸಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ.

 ಶಕ್ತಿಪೀಠ ಫೌಂಡೇಷನ್ ಟ್ರಸ್ಟ್ ನೋಂದಣೆ ಮಾಡಿಸಿ,  www.Shakthipeeta.in ವೆಬ್‌ಸೈಟ್ ನೋಂದಾಯಿಸಲಾಗಿತ್ತು. ವೆಬ್‌ಸೈಟ್ ರಚನೆ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ದಿನಾಂಕ:19.12.2019 ರಂದು  ಅನಿರೀಕ್ಷಿತವಾಗಿ ಏಕಾಏಕಿ https://epaper.shakthipeeta.in ಆರಂಭ ಮಾಡಲಾಯಿತು. ನನ್ನ ಮಗ ಚಿ.ಕೆ.ಆರ್.ಸೋಹನ್ ಬಹಳ ದಿನಗಳಿಂದ ಯಾವುದಾದರು ಒಂದು ಇ- ಪೇಪರ್ ಮಾಡಿ ಎಂದು ಸಲಹೆ ನೀಡುತ್ತಲೇ ಇದ್ದರು. 

 ಅಭಿವೃದ್ಧಿ ಒಂದು ಡ್ರೈ ಸಬ್ಜೆಟ್’ ಯಾರಿಗೂ ಅಷ್ಟು ಬೇಗ ಹಿಡಿಸುವುದಿಲ್ಲ. ನನ್ನ 32 ವರ್ಷದ ಅಭಿವೃದ್ಧಿ ತಪಸ್ಸಿನ ಅಂಶಗಳ ಆಧಾರದ ಮೇಲೆ ನಡೆಯುವವನು ಎಡವದೇ ಇರುತ್ತಾನೇಯೇ?’ ಎಂಬ ಗಾದೆಯಂತೆ  ನೋಡೋಣ – ಆರಂಭ ಮಾಡೋಣ – ತಪ್ಪಾದಲ್ಲಿ ತಿದ್ದಿಕೊಳ್ಳೋಣ’ ಎಂಬ ಭಾವನೆ ನನಗೂ ಬಂತು.

  ಒಂದು ನಗರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲು ಆರಂಭಿಸಿದ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಳೆದ 20 ವರ್ಷಗಳಿಂದ ತನ್ನದೇ ಆದ ಚಾಪು ಮೂಡಿಸಿದೆ. ಕಳೆದ ಒಂದು ವರ್ಷದ ಅವಧಿಯ ಶಕ್ತಿಪೀಠ ಫೌಂಡೇಷನ್ ದೇಶ, ವಿದೇಶಗಳಲ್ಲಿರುವ ಅಭಿವೃದ್ಧಿ ಆಸಕ್ತರಿಗೆ ತಲುಪಲು ಇ-ಪೇಪರ್ ಒಂದು ಸಾಧನವಾಗಿದೆ.

  ಜಿಲ್ಲೆಯ, ರಾಜ್ಯದ, ದೇಶದ ಮತ್ತು ವಿದೇಶಗಳ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಜನ ಜಾಗೃತಿ ಮೂಡಿಸಲು, ಬರೆಯುವ ನಿರ್ಧಿಷ್ಠ ಉದ್ದೇಶ ನನ್ನದಾಗಿದೆ. ಅಭಿವೃದ್ಧಿ ಪರ ಆಸಕ್ತಿ ಇರುವ ಜನತೆಗೆ ಅನುಕೂಲವಾಗಬಹುದು.

 ಕನಸು ಕಾಣುವುದು ಸುಲಭ, ಅದನ್ನು ನನಸು ಮಾಡುವುದು ಒಂದು ತಪಸ್ಸು. ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಮಾಡಬೇಕು ಎಂಬುದು ನನ್ನ ಕನಸಲ್ಲ. ಹೇಗೆ ಈ ವಿಚಾರ ನನಗೆ ಹೊಳೆಯಿತು ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ.

 ನನಗೆ ಆಗಾಗ ನಮ್ಮ ಶ್ರೀ ಟಿ.ಆರ್.ರಘೋತ್ತಮರಾವ್‌ರವರು ನೀವೂ ಏನಾದರೂ ಮಾಡಿ, ಬರೀ ಸರ್ಕಾರಿ ಯೋಜನೆಗಳಿಗೆ ಹಗಲು ಇರಳು ಶ್ರಮಿಸುತ್ತೀರಿ, ಮುಂದೆ ಒಂದು ದಿವಸ ನೀವೂ ಮಾಡಿದ ಆಸ್ತಿ ಯಾವುದು ಎಂದು ನಿಮ್ಮ ಮಕ್ಕಳು ಕೇಳಿದರೇ ನೀವೂ ಏನು ಉತ್ತರ ಕೊಡುತ್ತೀರಿ ಎನ್ನತ್ತಿದ್ದರು. 

 ಶಕ್ತಿದೇವತೆಯ ಕೃಪೆಯಿಂದ ನನಗೆ ಪರಿಚಯವೇ ಇಲ್ಲದ, ಗೊತ್ತೇ ಇಲ್ಲದ ಊರಿನಲ್ಲಿ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕ್ಯಾಂಪಸ್ ಆರಂಭವಾಗಿದೆ. ಈ ಕ್ಯಾಂಪಸ್ ಒಂದು ತರಹ ಒಂದು ಲೈವ್ ಆರ್ & ಡಿ’ ಏಕೆಂದರೆ ಇಡೀ ವಿಶ್ವದಲ್ಲಿ ಎಲ್ಲಾದರೂ, ಈ ರೀತಿ ಇದೆಯಾ ಎಂದು ಗೂಗಲ್ ಹುಡುಕಿ ಸಾಕಾಯಿತು.

ಇಂಥಹ ಹುಚ್ಚರು ಎಲ್ಲೂ ಸಿಗಲಿಲ್ಲ, ವಿಶ್ವದಲ್ಲಿಯೇ ಒಂದು ವಿನೂತನವಾದ ಯೋಜನೆ ಆರಂಭಿಸಲು ಶಕ್ತಿದೇವತೆ ನನಗೆ ಸೂಚಿಸಿರುವುದು ನಿಜಕ್ಕೂ ತೃಪ್ತಿ ತಂದಿದೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಅದೇನಪ್ಪಾ ಅಷ್ಟು ದೂರ ಹೋಗಿ ಏನು ಮಾಡುತ್ತಿದ್ದೀಯಾ, ಇದರಿಂದ ನಿನಗೆ ಬರುವ ಲಾಭ ಏನು? ಎಂದು ಹೇಳುತ್ತಲೇ ಇದ್ದಾರೆ.

 ನನಗಂತೂ ಈ ಕ್ಯಾಂಪಸ್ ಪರಿಕಲ್ಪನೆ ಬಹಳ ತೃಪ್ತಿ ತಂದಿದೆ. ನಿಜಕ್ಕೂ ಅದ್ಭುತ ಅಲೋಚನೆಯಾಗಿದೆ. ಈ ಐಡಿಯಾ’ ನನ್ನದಂತು ಅಲ್ಲ. ಶಕ್ತಿದೇವತೆಯ ಐಡಿಯಾ ಇರಬಹುದು’ ಮುಂದಿನ ಮೂರು ತಿಂಗಳೊಳಗೆ ಕ್ಯಾಂಪಸ್‌ನ ಸಂಪೂರ್ಣ ಪರಿಕಲ್ಪನೆಯನ್ನು ಭೂಮಿಯ ಮೇಲೆ ಗುರುತಿಸಿ, ಮುಂದೆ ಏನೇನು ಮಾಡಬೇಕು ಎಂಬ ಬಗ್ಗೆ ಲೈವ್  ಮಾಹಿತಿ ಲಭ್ಯವಾಗಲಿದೆ.

 ಈ ಯೋಜನೆಯ ಯಶಸ್ವಿಗೆ ನೂರಾರು ಜನರು ಉಚಿತವಾಗಿ, ಸಾಲದ ರೂಪದಲ್ಲಿ, ಹಣ ಪಡೆದು ಅಥವಾ ನನ್ನ ಈ ಕೆಲಸ ಮಾಡಿಕೊಡಿ, ನಾನು ನಿಮ್ಮ ಕ್ಯಾಂಪಸ್‌ಗೆ ಈ ಸಹಾಯ ಮಾಡುತ್ತೇನೆ ಎಂಬ ಮುಯ್ಯಾಳು’ ಪದ್ಧತಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚು ಜನ ನಗುತ್ತಿದ್ದಾರೆ.

 ಕೆಲವರಂತು ಭಯಪಡುತ್ತಿದ್ದಾರೆ, ನನ್ನ ಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ ಶಕ್ತಿದೇವತೆಯ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಯನ್ನು ಒಂದೇ ಕಡೆ ತರುವ ಕೆಲಸ ಕಷ್ಟದ ಕೆಲಸ, ಅಪೂರ್ಣವಾದರೇ ದೇವಿಯ ಸಿಟ್ಟಿಗೆ ಗುರಿಯಾಗಬೇಕು, ಇದು ಬೇಕಿತ್ತಾ? ಎಂದು ಹುಚ್ಚು ಹಿಡಿಸಿಕೊಳ್ಳುವ ಹಂತ ತಲುಪಿದ್ದವರು, ಈಗ ಕ್ಯಾಂಪಸ್ ನಿರ್ಮಾಣಕ್ಕಾಗಿ ಟೊಂಕಕಟ್ಟಿ ನಿಂತಿದ್ದಾರೆ.

 ಆದರೇ ನನ್ನ ಮಗ ಚಿ.ಕೆ.ಆರ್. ಸೋಹನ್ ಮತ್ತು ಮಗಳು ಶ್ರೀಮತಿ ಆರ್.ಇಂಚರ ನನಗೆ ಧೈರ್ಯ ತುಂಬುತ್ತಿದ್ದಾರೆ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಮಾಡಿ, ಉಳಿದ ಕೆಲಸವನ್ನು ನಾವು ಮುಂದುವರೆಸುತ್ತೇವೆ. ಇದು ನಿಜಕ್ಕೂ ಒಳ್ಳೆಯ ಯೋಜನೆ ಎಂದು ಹುರಿದುಂಬಿಸುತ್ತಿದ್ದಾರೆ.

ಆದ್ದರಿಂದ ನನಗೆ ಅನಿಸಿದ್ದನ್ನು ಕೆಲವರ ಕಿವಿಗೆ, ಮನಸ್ಸಿಗೆ ಹಾಕುವುದು ಒಳ್ಳೆಯದು. ಈ ಕಾರಣದಿಂದ   https://epaper.shakthipeeta.in ಮೂಲಕ ಕ್ಯಾಂಪಸ್‌ನ  ಪರಿಕಲ್ಪನೆಯನ್ನು ಹಂಚಿಕೊಳ್ಳುತ್ತಿದ್ದೇನೆ.

ಶಕ್ತಿಪೀಠ: ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಯನ್ನು ನೆಲದ ಮೇಲೆ ಭಾರತದ ನಕ್ಷೆಯನ್ನು ಮಾಡಿ ಒಂದೇ ಕಡೆ ಜಿಐಎಸ್ ಆಧಾರಿತ ಗುರುತಿಸುವುದು.

ಜಲಪೀಠ:  ದೇಶದ ಪ್ರಮುಖ ನದಿಗಳ ಜೋಡಣೆಯ ಪ್ರಾತ್ಯಾಕ್ಷಿಕೆಯನ್ನು ನೆಲದ ಮೇಲೆ ಭಾರತದ ನಕ್ಷೆಯನ್ನು ಮಾಡಿ ಜಿಐಎಸ್ ಆಧಾರಿತ ಗುರುತಿಸುವುದು. ಕರ್ನಾಟಕ ರಾಜ್ಯದ 36608 ಕೆರೆ-ಕಟ್ಟೆಗಳಿಗೆ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಎಂಬ ಯೋಜನೆ ಮೂಲಕ ಸಾಮಾಜಿಕ ನ್ಯಾಯದಡಿ ನದಿ ನೀರುಹಂಚಿಕೆ ಬಗ್ಗೆ ಮನವರಿಕೆ ಮಾಡುವುದು.  ನೀರನ್ನು ಗಂಗಾಮಾತೆ’ ಎಂದು ಪೂಜಿಸಿ, ಸಂರಕ್ಷಣೆ ಮಾಡಿ, ಸದ್ಭಳಕೆ ಮಾಡಲು ಶಕ್ತಿದೇವತೆಯ ಹೆಸರಿನಲ್ಲಿ ಭಕ್ತಿಭಾವನೆ ಮೂಡಿಸುವುದು.

ಅಭಿವೃದ್ಧಿ ಪೀಠ: ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಸದಸ್ಯರ, 75 ವಿಧಾನಪರಿಷತ್ ಸದಸ್ಯರ, 28 ಲೋಕಸಭಾ ಸದಸ್ಯರ, 12 ರಾಜ್ಯಸಭಾ ಸದಸ್ಯರ ಮತ್ತು ದೆಹಲಿ ಪ್ರತಿನಿಧಿಗಳ ಕರ್ತವ್ಯದ ಬಗ್ಗೆ ಚಿಂತನೆ ಮಾಡಿ ಅವರ ಜವಾಬ್ಧಾರಿಗಳನ್ನು ನೆನಪಿಸುವುದು.

 ಜಿಲ್ಲಾವಾರು ಅಧ್ಯಯನಗಾರರಿಗೆ ಜಿಲ್ಲಾಭವನಗಳನ್ನು  ಕ್ಯಾಂಪಸ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ. ಇದಕ್ಕೆಂದು 35 ನಿವೇಶನಗಳನ್ನು ಮಾಡಲಾಗುತ್ತಿದೆ.

ಶಕ್ತಿದೇವತೆಯ ಕನಸಿನ ಯೋಜನೆಗಳ ಬಗ್ಗೆ ನೀವೂ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ, ನಮ್ಮೊಂದಿಗೆ ಕೈಜೋಡಿಸಿ, ಇತರರಿಗೂ ತಿಳಿಸಿ. ನಿಮ್ಮ ಬೆಂಬಲವೇ ನಮ್ಮ ನೈತಿಕ ಆಸ್ತಿ’