TUMAKURU:SHAKTHIPEETA FOUNDATION
REPORT BY T.R.RAGHOTTAMA RAO.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಳ್ಳಕೆರೆ-ಹಿರಿಯೂರು-ಹುಳಿಯಾರು-ಚಿ.ನಾ.ಹಳ್ಳಿ-ತುರುವೇಕೆರೆ-ಚನ್ನರಾಯಪಟ್ಟಣ ಹೊಸ ರೈಲು ಮಾರ್ಗ ಮತ್ತೆ ಚಾಲನೆ ಬರಲಿದೆ.
ದೆಹಲಿಯ ರೈಲ್ವೆ ಭವನದಲ್ಲಿ ದಿನಾಂಕ:13.02.2021 ರಂದು ಶ್ರೀ ಜಿಎಸ್.ಬಸವರಾಜ್‌ರವರು ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಶ್ರಿ ಕುಂದರನಹಳ್ಳಿ ರಮೇಶ್‌ರವರು ಭೇಟಿಯಾಗಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವಾರು ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ, ಈ ಯೋಜನೆಯನ್ನು ಪುನಃ ಸಮೀಕ್ಷೆ ಮಾಡಿಸಲು ರೈಲ್ವೇ ಬೋರ್ಡ್ ಅಧ್ಯಕ್ಷ ಹಾಗೂ ಸಿಇಓ ರವರಾದ ಶ್ರೀ ಸುನಿಲ್ ಶರ್ಮರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ತಿಳಿಸಿದ್ದಾರೆ.
ಹಿನ್ನೆಲೆ:
ಚಳ್ಳಕೆರೆ-ಹಿರಿಯೂರು-ಹುಳಿಯಾರು-ಚಿ.ನಾ.ಹಳ್ಳಿ-ತುರುವೇಕೆರೆ-ಚನ್ನರಾಯಪಟ್ಟಣ ಹೊಸ ರೈಲು ಮಾರ್ಗ ಯೋಜನೆಯು ಚಿತ್ರದುರ್ಗ ಚಳ್ಳಕೆರೆ,ಹಿರಿಯೂರು,ತುಮಕೂರು ಜಿಲ್ಲೆಯ ಚಿ.ನಾ.ಹಳ್ಳಿ ತಾಲ್ಲೂಕು,ತುರುವೇಕೆರೆ ತಾಲ್ಲೂಕುಗಳ ಮೈನಿಂಗ್ ಚಟುವಟಿಕೆಗೆ ಪೂರಕವಾಗಿ ನವ ಮಂಗಳೂರು ಬಂದರು ತಡೆಯಿಲ್ಲದ ಸಾಗಾಣಿಕೆಗೆ ಪೂರಕವಾಗುವ ಯೋಜನೆ.
ಶ್ರೀ ಜಿಎಸ್ ಬಸವರಾಜ್‌ರವರು ತಮ್ಮ ಹಿಂದಿನ ಅವಧಿಯಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಶ್ರೀ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಆಗ್ರಹ ಪೂರಕವಾಗಿ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಫೆಬ್ರವರಿ 2004 ರೈಲ್ವೆ ಮುಂಗಡ ಪತ್ರದಲ್ಲಿ 183 ಕಿ.ಮಿ ಉದ್ದದ ಹೊಸ ರೈಲ್ವೆ ಮಾರ್ಗ ಯೋಜನೆಗೆ ಮಂಜೂರಾತಿಗೆ ಅವಶ್ಯಕವಾದ ಇಂಜನಿಯರಿಂಗ್ ಮತ್ತು ಟ್ರಾಫಿಕ್ ಸರ್ವೇಗೆ ಆದೇಶ ನೀಡಲಾಗಿತ್ತು.
ಮುಂದಿನ ಕ್ರಮದ ಅನುಸರಣೆಯಾಗಿ ಈ ಯೋಜನೆಯನ್ನು ರೈಲ್ವೆ ಮಂಡಳಿಯ 2017-18 ರೈಲ್ವೆ ನೈರುತ್ಯವಲಯದ ಪಿಂಕ್ ಪುಸ್ತಕದಲ್ಲಿಯೂ ಸಹ ಈ ಬಗ್ಗೆ ವಿವರಿಸಲಾಗಿತ್ತು. ಈ ರೈಲ್ವೆಮಾರ್ಗದ ಸರ್ವೇ ಆಗಿ ರೈಲ್ವೆ ಮಂಡಳಿಗೆ ಮಂಜೂರಾತಿಗಾಗಿ ಮುಂದಿನ ವರ್ಷದ ಮುಂಗಡ ಪತ್ರದಲ್ಲಿ ಸೇರ್ಪಡೆಗೆ ಪೂರಕವಾಗಲು ಈ ಯೋಜನೆಯ ಸರ್ವೇ ವಿವರಗಳನ್ನು ಒಳಗೊಂಡ ಕಡತವನ್ನು ಸಲ್ಲಿಸಿರುವ ಬಗ್ಗೆ ಜಿ.ಎಸ್‌ಬಸವರಾಜ್ ರವರು ದಿನಾಂಕ ಪತ್ರ ಸಂಖ್ಯೆ ಎಂಪಿ/ಸಿಆರ್500/2019-20 ರಲ್ಲಿ ರೈಲ್ವೆ ಇಲಾಖೆಯ ನೈರುತ್ಯ ವಲಯದ ಸಂಬಂಧಿತ ಕಚೇರಿಗೆ ಪತ್ರ ಬರೆದು ವಿವರ ಕೋರಿದ್ದರು.
ಮುಖ್ಯ ನಿರ್ವಹಣಾಧಿಕಾರಿಗಳು[ನಿರ್ಮಾಣ] ನೈರುತ್ಯರೈಲ್ವೆ ವಲಯ, ಅವರು ದಿ.26.08.2019 ತಮ್ಮ ಪತ್ರಸಂಖ್ಯೆ CAO/cons/SWR/BNC/SY/CHKE-CNPT /ರಲ್ಲಿ ಕೋರಿರುವ ಅಂಶಗಳಿಗೆ ಉತ್ತರಿಸಿ ಸದರಿ ಯೋಜನೆಯ ಸರ್ವೇ ಕಾರ್ಯ ಮುಗಿಸಿ, ಸದರಿ ಯೋಜನೆಯ ಹೂಡಿಕೆಯಮೇಲಿನ ಉತ್ಪಾದಿತ ಅಂಶವು -15.719 % [ROR] ಇದ್ದು ಮುಂದಿನ ಕ್ರಮಕ್ಕೆ ರೈಲ್ವೆ ಮಂಡಲಿಗೆ ದಿನಾಂಕ:27.09.2019 ರಲ್ಲಿ ಸಲ್ಲಿಸಲಾಗಿದೆ ಎಂದು ತಿಳಿಸಿರುತ್ತಾರೆ.
ಶಿವಮೊಗ್ಗ ಮಾದರಿಯೂ ಈ ಯೋಜನೆ ಜಾರಿಗೆ ಅಗತ್ಯ.
ಶ್ರೀ ಜಿ.ಎಸ್.ಬಸವರಾಜ್‌ರವರು ದಿನಾಂಕ:05.11.2019 ರಂದು ಮಾನ್ಯ ಮುಖ್ಯ ಮಂತ್ರಿಗಳು, ಅಂದಿನ ರಾಜ್ಯ ರೈಲ್ವೆ ಸಚಿವರು ಆಗಿದ್ದ ಆಂಗಡಿಯವರ ಸಮ್ಮುಖದಲ್ಲಿ ಎಲ್ಲಾ ಲೋಕಸಭಾ ಸದಸ್ಯರ ಸಭೆ ಕರೆದಿದ್ದ ಸಚೆಯಲ್ಲೂ ಸಹಾ ಸದರಿ ಯೋಜನೆಯ ಹೂಡಿಕೆಯಮೇಲಿನ ಉತ್ಪಾದಿತ ಅಂಶವು -15.719 % [ROR] ಹಿನ್ನಲೆಯಲ್ಲಿ ರೈಲ್ವೆ ಮಂಡಳಿಯು ವಿಲೆ ಇಟ್ಟಿದ್ದಾರೆ.
ಆದರೆ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ತವರಿನ ರೈಲ್ವೆ ಯೋಜನೆಯಾದ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕೆ ಸಪೋರ್ಟ್ ಮೆಕಾನಿಸ್ಂ ಗಳಾದ ಯೋಜನೆಗೆ ಬೇಕಾದ ಭೂಮಿ ಪುಕ್ಕಟೆಯಾಗಿ ರಾಜ್ಯ ಸರಕಾರವೇ ಹಸ್ತಾಂತರ ಮತ್ತು ಯೋಜನೆಯ ವೆಚ್ಚದ ಶೇ.50 ಭಾಗ ರಾಜ್ಯ ಸರಕಾರ ಹೊಣೆ ಹೊರಲು ಒಪ್ಪಿಗೆ ಸೂಚಿಸಿ ಉತ್ಪಾದಿತ ಅಂಶ ಕಡಿಮೆ ಇರುವ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ.
ಚಳ್ಳಕೆರೆ-ಹಿರಿಯೂರು-ಹುಳಿಯಾರು-ಚಿ.ನಾ.ಹಳ್ಳಿ-ತುರುವೇಕೆರೆ-ಚನ್ನರಾಯಪಟ್ಟಣ ಹೊಸ ರೈಲು ಮಾರ್ಗಕ್ಕೂ ಅನ್ವಯಿಸಬೇಕೆಂದು ಆಗ್ರಹಿಸಿದ್ದರು. ಈ ಯೋಜನೆ ಅನುಮೋದನೆ ಪಡೆಯಲು ಮಾನ್ಯ ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶಿಸ ಬೇಕೆಂದು ಸಭೆಯಲ್ಲಿ ಆಗ್ರಹಿಸಿದ್ದರು.
ಮುಂದುವರೆದಂತೆ 2013 ರ ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮ ಗಣಿಗಾರಿಕೆ ಅದಿರನ್ನು ಮುಟ್ಟು ಗೋಲು ಹಾಕಿಕೊಂಡು ಹರಾಜು ಮೂಲಕ ಸಂಗ್ರಹಿಸಲಾದ ಮೊತ್ತವನ್ನು ರಾಜ್ಯ ಸರಕಾರ ಸ್ಥಾಪಿಸಿರುವ ಕರ್ನಾಟಕ ಮೈನ್ಸ್ ಎನ್ವರೋಮೆಂಟ್ ರೆಸ್ಟೋರೇಶನ್ ಕಾರ್‍ಪೋರೇಶನ್ ಎಸ್.ಪಿ.ವಿ ಮೂಲಕ ಚಿತ್ರದುರ್ಗ/ಬಳ್ಳಾರಿ/ತುಮಕೂರು ಜಿಲ್ಲೆಗಳಲ್ಲಿ ಅಲೋಕೇಶನ್ ಮೂಲಕ ಈ ಯೋಜನೆಗೆ ಬಳಸಲು ಅವಕಾಶವನ್ನು ರಾಜ್ಯ ಸರಕಾರ ದಿನಾಂಕ:13.06.2014 ರಲ್ಲಿ ಕಲ್ಪಿಸಿಕೊಂಡಿದೆ.
ಅನುಸರಣೆ ಕ್ರಮವಾಗಿಈ ಬಗ್ಗೆ ಸುಪ್ರೀಂಕೋರ್ಟ್ ರಚಿಸಿರುವ ಪ್ಯಾನೆಲ್ ಅವಗಾಹನೆ ಮತ್ತು ಒಪ್ಪಿಗೆಗಾಗಿ ಕ್ರಿಯಾ ಯೋಜನೆ ಸಿದ್ದಪಡಿಸಿಸಲ್ಲಿಸಿದ್ದು, ಇದರ ಬಗ್ಗೆ ಸದ್ಯ ಗಣಿ ಸಚಿವರು ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ ರವರು ಈ ಬಗ್ಗೆ ಹಿಂದುಳಿದ ಚಿತ್ರದುರ್ಗ/ಬಳ್ಳಾರಿ/ತುಮಕೂರು ಜಿಲ್ಲೆಗಳಲ್ಲಿ ಅಲೋಕೇಶನ್ ಮೂಲಕ ಬಳಸಿಕೊಳ್ಳಲು ಪ್ರಯತ್ನ ಮಾಡಿರುವುದು ನಿಜಕ್ಕೂ ಒಳ್ಳೆಯ ಕ್ರಮವಾಗಿದೆ.
ಇದುವರಿಗೂ ನೆನೆಗುದಿ ಬಿದ್ದಿದ್ದ ಈ ಕಡತಕ್ಕೆ ಚಾಲನೆ ಸಿಕ್ಕಿದೆ. ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲ್ಲೂಕು ಅಭಿವೃಧ್ಧಿ ಆಗಲು ಪೂರಕವಾಗುವ ಈ ಯೋಜನೆಯ ಹೂಡಿಕೆಯ ಮೇಲಿನ ಉತ್ಪಾದಿತ ಅಂಶ -15.719 % [ROR] ಇರುವುದರಿಂದ ಯೋಜನೆ ಮಂಜೂರು ಆಗಲು ತಮ್ಮ ನೇತ್ರತ್ವದ ರಾಜ್ಯ ಸರಕಾರ ಮಧ್ಯಪ್ರವೇಶಿಸಿ, ಈಗಾಗಲೇ ಇತರೆ ರೈಲ್ವೆ ಯೋಜನೆಗಳಿಗೆ ಒಪ್ಪಿರುವಂತೆ ಶೇ.50 ಯೋಜನೆಯ ವೆಚ್ಚದ ಜೊತೆಗೆ ಯೋಜನೆಗೆ ಬೇಕಾದ ಭೂಮಿಯನ್ನು ರೈಲ್ವೆ ಇಲಾಖೆಗೆ ಪುಕ್ಕಟೆಯಾಗಿ ಹಸ್ತಾಂತರಿಸಲು ಒಪ್ಪಿ ಆದೇಶ ಹೊರಡಿಸದರೆ ಮಾತ್ರ ಈ ಯೋಜನೆ ಸಾಕರ ಆಗಲು ಕಾರಣ ಆಗುತ್ತದೆ.