28th March 2024
Share

ಶಕ್ತಿಪೀಠ ಕ್ಯಾಂಪಸ್‌ ನಲ್ಲಿ ಸುಮಾರು 500 ಮೀ ಉದ್ದದ ರಿಂಗ್‌ ರಸ್ತೆ ಕಾಮಗಾರಿ ಆರಂಭವಾಗಿದೆ. ಈ ರಸ್ತೆಗೆ ಅಡ್ಡಲಾಗಿ ಕೆಲವು ಗಿಡಗಳು ಬರಲಿವೆ. ಈ ಗಿಡಗಳನ್ನು ತೆಗೆಯಲು ಗೋವುಗಳಿಗೆ ಪೂಜೆ ಮಾಡಿ, ಅವುಗಳಿಂದ ಗಿಡ ಕೆಡವಲು ವಾಸ್ತು ಮತ್ತು ಜ್ಯೋತಿಷಿಗಳು ಹೇಳಿದ್ದರಿಂದ ನಾಟಿ ಹಸುವಿಗೆ ಪೂಜೆ ಮಾಡಿ ಗಿಡ ತೆಗೆಯಿಲಾಯಿತು.

ಕ್ಯಾಂಪಸ್‌ನ ಈಶಾನ್ಯ ಭಾಗದಲ್ಲಿ ಬರುವ ಗಿಡಗಳನ್ನು ತೆಗೆಯಲೇ ಬೇಕು ಎಂಬ ವಾಸ್ತು ನಿಯಮ ಪಾಲಿಸುವಾಗ, ತೆಗೆದ ಒಂದು ಗಿಡಕ್ಕೆ ಬದಲಾಗಿ ಹತ್ತು ಗಿಡ ಹಾಕಿ ಎಂಬ ಪರಿಕಲ್ಪನೆಯಿಂದ ಗಿಡ ತೆಗೆಯಲೇ ಬೇಕಾಗಿ ಬಂತು. ಉಳಿದ ದಿಕ್ಕುಗಳಲ್ಲಿ ರಸ್ತೆಗೆ ಬಂದಿರುವ ಗಿಡಗಳನ್ನು ಉಳಿಸಲಾಗಿದೆ.

ಶ್ರೀ ಅಶೋಕ್‌ , ಡಾ. ಶ್ರೀ ಮುರುಳಿಧರ್‌, ಶ್ರೀ ನವೀಂದ್ರ, ಶ್ರೀ ಸತ್ಯಾನಂದ್‌ ಮತ್ತು ಕುಂದರನಹಳ್ಳಿ ರಮೇಶ್‌

ಭಾರತ ನಕ್ಷೆಯಲ್ಲಿ ಗುರುತಿಸಿರುವ ನಮ್ಮ ರಾಜ್ಯದ ಭಾಗದಲ್ಲಿ ಕುಳಿತು ಸಮಾಲೋಚನೆ ಸಭೆ ನಡೆಸಲಾಯಿತು.‌ ಭೂಮಿಯ ಮೇಲೆ ಗುರುತಿಸಿರುವ ಭಾರತ ನಕ್ಷೆಯಲ್ಲಿ ಶಕ್ತಿಪೀಠ ಕ್ಯಾಂಪಸ್‌ ಆರಂಭಿಸಲು ಪ್ರೇರಣೆ ಆಗಿರುವ ಕುಂದರನಹಳ್ಳಿ ಗ್ರಾಮದ ಗಂಗಮಲ್ಲಮ್ಮ ದೇವಾಲಯದ ಭಾಗದಲ್ಲಿ ಕುಳಿತು ದೇವಿ ಪುಸ್ತಕ ಪಾರಾಯಣ ಮಾಡಲು ಒಂದು ಮಂಟಪ ರೀತಿಯಲ್ಲಿ ಕಾಮಗಾರಿ ಆರಂಭಿಸಲು ಚಿಂತನೆ ಆರಂಬವಾಗಿದೆ.