28th March 2024
Share
G.S.Basavaraj.Sai Gurusiddappa.Neralapura kumar.Katenahalli Kumar & Kundaranahalli Ramesh

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದಲ್ಲಿ ಕರ್ನಾಟಕ ರಾಜ್ಯದಲ್ಲಿ ಜಲಕ್ರಾಂತಿಯಾಗಲಿದೆ ಎಂದು ತುಮಕೂರು ಸಂಸದ, ಕೇಂದ್ರ ಜಲಶಕ್ತಿ ಕನ್ಸಲ್‌ಟೇಟೀವ್ ಸಮಿತಿ ಸದಸ್ಯ ಮತ್ತು  ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್ ಪ್ರತಿಪಾದಿಸಿದ್ದಾರೆ.

 ಆನೇಕ ವರ್ಷಗಳಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ನಾನು ಮತ್ತು  ಕುಂದರನಹಳ್ಳಿ ರಮೇಶ್ ಈ ಯೋಜನೆಗಳ ಜಾರಿ ಬಗ್ಗೆ ನಿರಂತರವಾಗಿ ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದೇವು. ಪ್ರಸ್ತುತ ನಮ್ಮ ಪರಿಕಲ್ಪನೆ ಯೋಜನೆಗಳು ಸರ್ಕಾರಿ ಯೋಜನೆಗಳಾಗಿವೆ. ಇವುಗಳ ಯಶಸ್ವಿ ಅನುಷ್ಠಾನ ನಮ್ಮ ಮೊದಲ ಆಧ್ಯತೆ.  

ನಗರ ಜಲ ಶಕ್ತಿ: ಕೇಂದ್ರ ಸರ್ಕಾರ ದೇಶದಲ್ಲಿ 10 ನಗರಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದೆ. ಈ 10 ರಲ್ಲಿ ತುಮಕೂರು ಮಹಾನಗರ ಪಾಲಿಕೆಯು ಒಂದಾಗಿದೆ. ನಗರದ ಅಂತರ್ಜಲ ಅಭಿವೃದ್ಧಿ, ಕೊಳಚೆ ನೀರು ಜಲಸಂಗ್ರಹಾಗಾರಗಳಿಗೆ ಬರದಂತೆ ತಡೆಯಲು ಮತ್ತು ಕುಡಿಯುವ ನೀರಿನ ಯೋಜನೆಗೆ ಸುಮಾರು ರೂ 200 ಕೋಟಿವರೆಗೂ ಅನುದಾನ ಬರಲಿದೆ.

ಅಟಲ್ ಭೂ ಜಲ್: ಕೇಂದ್ರ ಸರ್ಕಾರವೂ ದೇಶದ ಪ್ರತಿಯೊಂದು ಗ್ರಾಮದ ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಸಿದ್ಧಪಡಿಸಲು ದೇಶದ ೭ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದೆ. ಇದರಲ್ಲಿ ನಮ್ಮ ರಾಜ್ಯವೂ ಸೇರ್ಪಡೆಯಾಗಿದೆ. ತುಮಕೂರು ಜಿಲ್ಲೆಯ ೬ ತಾಲ್ಲೋಕುಗಳು ಸೇರ್ಪಡೆಯಾಗಿವೆ.

ಜಲ ಜೀವನ್ ಮಿಷನ್ : ದೇಶದಲ್ಲಿರುವ  ಪ್ರತಿಯೊಂದು ಮನೆಗೂ, ಯಾವುದೇ ಒಂದು ಮನೆಯನ್ನು ಬಿಡದಂತೆ  ೨೦೨೪ ರೊಳಗೆ  ನಲ್ಲಿ ನೀರು ಸಂಪರ್ಕ ನೀಡಲು, ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದೆ. ಇದರಲ್ಲಿ 2023 ರೊಳಗೆ ಕರ್ನಾಟಕ ರಾಜ್ಯದಲ್ಲಿ ಯೋಜನೆ ಸಂಪೂರ್ಣ ಗೊಳಿಸ ಬೇಕು.

ಅಂಗನವಾಡಿ ಮತ್ತ ಸರ್ಕಾರಿ ಶಾಲೆಗಳಿಗೆ ನಲ್ಲಿ ನೀರು: ಮಾರ್ಚ್ 31 ರೊಳಗೆ ದೇಶದ ಪ್ರತಿಯೊಂದು ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೂ ನಲ್ಲಿ ನೀರು ಸಂಪರ್ಕ ಮಾಡಲು ಕೇಂದ್ರ ಸರ್ಕಾರ ಆಂದೋಲನ ರೂಪಿಸಿದೆ. ನಮ್ಮ ಜಿಲ್ಲೆಯಲ್ಲೂ ಪೂರ್ಣಗೊಳ್ಳಲಿದೆ.

ರೈಯಿನ್ ದಿ ಕ್ಯಾಚ್ : ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ದೇಶಾಧ್ಯಾಂತ ಮಳೆ ನೀರು ಸಂಗ್ರಹಿಸಲು  ಕರೆ ನೀಡಿದ್ದಾರೆ.

ಊರಿಗೊಂದು ಕೆರೆ ಕೆರೆಗೆ ನದಿ ನೀರು: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಪರಿಕಲ್ಪನೆಯಾಗಿದ್ದ, ನಮ್ಮ ಬಹುದಿನಗಳ ಬೇಡಿಕೆಯಾದ ಊರಿಗೊಂದು ಕೆರೆ ಕೆರೆಗೆ ನದಿ ನೀರು’ ಯೋಜನೆಗೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಆದೇಶ ನೀಡಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೋಡೆಲ್ ಆಫೀಸರ್ ಆಗಿ ನೇಮಿಸಿದ್ದಾರೆ.

ರಾಷ್ಟ್ರೀಯ ನದಿ ಜೋಡಣೆ: ಕೇಂದ್ರ ಸರ್ಕಾರದ ನದಿ ಜೋಡಣೆ ವ್ಯಾಪ್ತಿಗೆ ಭಧ್ರಾಮೇಲ್ದಂಡೆ ಯೋಜನೆ ಸೇರ್ಪಡೆಗೆ ಇನ್ ಪ್ರಿನ್ಸಿಪಲ್ ಆಪ್ರೂವಲ್, ಬೇಡ್ತಿ-ವರದಾ ಡಿಪಿಆರ್ ಸಿದ್ಧ ಪಡಿಸಲು ಕೇಂದ್ರ ಸರ್ಕಾರದ ಹಸಿರು ನಿಶಾನೆ. ಹೇಮಾವತಿ- ನೇತ್ರಾವತಿ ಲಿಂಕ್ ಯೋಜನೆಗೆ ಬದಲಾಗಿ ಎತ್ತಿನಹೊಳೆ ಯೋಜನೆ ಸೇರ್ಪಡೆಗೆ ಚಾಲನೆ. ಕೇಂದ್ರದ ಇತರೆ ನದಿ ಜೋಡಣೆ ಯೋಜನೆಗಳಿಂದ ರಾಜ್ಯದ ಪಾಲಿನ ನದಿ ನೀರು ಬಳಕೆಯ ಯೋಜನೆಗೆ ಆಗ್ರಹ.

ರಾಜ್ಯದ ನದಿ ಜೋಡಣೆ: ರಾಜ್ಯದ ನದಿ ಜೋಡಣೆ ಯೋಜನೆಗೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ನೀಡಿದ್ದಾರೆ. 

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ: ಕೇಂದ್ರ ಸರ್ಕಾರ 2016  ರಲ್ಲಿಯೇ ದೇಶದ ಎಲ್ಲಾ ಜಿಲ್ಲೆಗಳ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್  ಮತ್ತು ರಾಜ್ಯಗಳ ಸ್ಟೇಟ್ ಇರ್ರಿಗೇಷನ್ ಪ್ಲಾನ್ ಮಾಡಿದೆ. ಈ ಯೋಜನೆಯ ಅಂಶಗಳನ್ನು ಪರಿಗಣನೆಗೆ ತೆಗೆದು ಕೊಳ್ಳ ಬೇಕಿದೆ.

ತುಮಕೂರು ಜಿಲ್ಲೆ ಪೈಲಟ್ ಯೋಜನೆ: ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ ತುಮಕೂರು ಜಿಲ್ಲೆಯನ್ನು ಸಮಗ್ರ ನೀರಾವರಿ ಫೈಲಟ್ ಯೋಜನೆಯಾಗಿ ತೆಗೆದು ಕೊಳ್ಳಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ಹಿನ್ನಲೆಯಲ್ಲಿ ಮೇಲ್ಕಂಡ ಎಲ್ಲಾ ಜಲಶಕ್ತಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ  ತುಮಕೂರು ಜಿಲ್ಲೆ ದೇಶದಲ್ಲಿಯೇ ಮಾದರಿ ಯೋಜನೆಯಾಗಲು ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.