29th March 2024
Share

TUMAKURU:SHAKTHIPEETA FOUNDATION                 

ಸಾಗರನಹಳ್ಳಿ ಜಗದೀಶ್ ದೂರವಾಣಿ ಕರೆಮಾಡಿ, ಕುಂದರನಹಳ್ಳಿ ರಮೇಶ್ ಅವರೇ ನಿಮ್ಮ ಶಕ್ತಿಪೀಠ ಇ ಪೇಪರ್ ನಲ್ಲಿ ಕುಂದರನಹಳ್ಳಿ- ಅದಲಗೆರೆ ರಸ್ತೆಯ ವಿವಾದವನ್ನು ಸಿದ್ಧಗಂಗಾ ಶ್ರೀಗಳ ಮತ್ತು ನಮ್ಮಪ್ಪ ಸಾಗರನಹಳ್ಳಿ ರೇವಣ್ಣನವರು ರಾಜಿ ಸಂಧಾನ ಮಾಡಿರುವ ಬಗ್ಗೆ ಬರೆದಿದ್ದೀರಿ.

ಇದು ಸ್ವಾಗಾತಾರ್ಹ, ಆದರೇ ಅರ್ಧ ಸತ್ಯ ಬರೆದು, ಉಳಿದ ಅರ್ಧ ಸತ್ಯವನ್ನು ಮರೆಮಾಚಿದ್ದೀರಿ ಏಕೆ? ಇದು ನಿಮಗೆ ನ್ಯಾಯ ಎನಿಸುತ್ತಿದಯೇ?  ಎಂದು ನೇರವಾಗಿ ಪ್ರಶ್ನೆ ಮಾಡಿದರು.

ನಾನು ಅವರಿಗೆ ತಿಳಿಸಿದೆ ಸ್ವಾಮಿ ಜಗದೀಶ್ ರವರೇ ನೀವೂ ಕೇಳುವ ಮಾಹಿತಿ ಬಗ್ಗೆ ನನಗೆ ಅರಿವಿದೆ. ನಾನು 2015 ಹೆಚ್.ಎ.ಎಲ್ ಉಳಿಸಿ ಎಂಬ ಪುಸ್ತಕ ಬರೆದಿದ್ದೇನೆ. ಅದರಲ್ಲಿ ಕುಂದರನಹಳ್ಳಿ- ಅದಲಗೆರೆ ರಸ್ತೆಯ ಸಂತ್ರಸ್ಥರಿಗೆ ಜಮೀನು ನೀಡುವ ಭರವಸೆ  ಬಗ್ಗೆಯೂ ಪ್ರಸ್ತಾಪ ಮಾಡಿದ್ದೇನೆ. ಆದರೇ ಇದೂವರೆಗೂ ಯಾವೊಬ್ಬ ಸಂತ್ರಸ್ಥರು ನನ್ನ ಬಳಿ ಬಂದು ಈ ಬಗ್ಗೆ ಮಾತನಾಡಿಲ್ಲ. ಕಡೇ ಪಕ್ಷ ಇಂದು ನೀವಾದರೂ ಕೇಳಿದಿರಲ್ಲಿ ನಿಮಗೆ ಧನ್ಯವಾದಗಳು ಎಂದು ಉತ್ತರಿಸಬೇಕಾಯಿತು.

ಹೌದು ಈ ನ್ಯಾಯ, ರಾಜಿ ಸಂಧಾನ ಮಾಡುವ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ನೀಡುವ ಭರವಸೆ ಮತ್ತು ಆಶ್ವಾಸನೆಯ ಬಗ್ಗೆ ಸಂಭಂಧಿಸಿದವರು ಕಡತದ ಅನುಸರಣೆ ಮಾಡಬೇಕು. ಉಂಡು ಮನೆಯಲ್ಲಿ ಮಲಗಿದರೆ ಯಾರು ಮನೆ ಬಾಗಿಲಿಗೆ ಬಂದು ಭರವಸೆ ಹೀಡೇರಿಸುವುರು ಯಾರು ನೀವೇ ಹೇಳಿ?’

ಈಗ ನ್ಯಾಯ ಮಾಡಿದ ಸಿದ್ಧಗಂಗಾ ಶ್ರೀಗಳು ನಮ್ಮ ಮುಂದೆ ಇಲ್ಲ. ದಿ.ಸಾಗರನಹಳ್ಳಿ ರೇವಣ್ಣನವರು ನಮ್ಮ ಮುಂದೆ ಇಲ್ಲ. ಈಗ ಯಾರ ಬಳಿ ನಿಮ್ಮ ಅಹವಾಲು ? ರಾಜಿ ಸಂಧಾನದಂತೆ ಈಗ ನೀವು ಕುಂದರನಹಳ್ಳಿ- ಅದಲಗೆರೆ ರಸ್ತೆ ಸಂತ್ರಸ್ಥರಿಗೆ ಪರಿಹಾರ ಕೊಡಿಸಿ ಎಂದು ಕೇಳುವುದು ನ್ಯಾಯ.

 ಈಗಲೂ ಕಾಲಮಿಂಚಿಲ್ಲ ಕಿರಿಯ ಸಿದ್ಧಗಂಗಾ ಶ್ರೀಗಳು ಇದ್ದಾರೆ. ದಿ.ಸಾಗರನಹಳ್ಳಿ ರೇವಣ್ಣನವರ ಆಪ್ತರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು  ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಬಗ್ಗೆ ಎಲ್ಲಾ ಗೊತ್ತಿರುವ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇದ್ದಾರೆ. ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‍ರವರು ಇದ್ದಾರೆ, ಅವರ ಬಳಿ ನಿಮ್ಮ ಅಹವಾಲು ಮಾಡಿಸಿ, ಮುಂದೆ ಏನಾಗುತ್ತೋ ನೋಡೋಣ? ಅಗತ್ಯವಿದ್ದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ  ಎಂಬ ಉತ್ತರವನ್ನು ನೀಡಿದ್ದೇನೆ.

ನನಗಂತೂ ರಾಜಿ ಸಂಧಾನಗಾರರು ಸಂತ್ರಸ್ಥರಿಗೆ ಮೋಸ ಮಾಡುತ್ತಾರೇನೋ ಎನಿಸಿದೆ.

  1. ತುಮಕೂರು ನಗರದ ಗಂಗಸಂದ್ರದಲ್ಲಿ ಟೂಡಾ ಜಮೀನು ಭೂಸ್ವಾಧೀನ ಮಾಡಿದಾಗ ಜಮೀನುದಾರರಿಗೆ ಒಂದೊಂದು ನಿವೇಶನ ನೀಡುವ ಭರವಸೆಯನ್ನು ಅಂದಿನ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಿದ್ದರಂತೆ. ಅವರು ಮೋಸಮಾಡಿದ್ದಾರೆ ಎಂದು ಅವರ ಊರಿನ ಸಂತ್ರಸ್ಥರು ಈಗಲೂ ದೂರುತ್ತಿದ್ದಾರೆ. ಇದೂವರೆಗೂ ನಿವೇಶನ ಕೊಡಿಸಿಲ್ಲ.
  2. ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಜಮೀನನ್ನು ಹೆಚ್.ಎ.ಎಲ್ ಗೆ ಕೊಡಿಸುವಾಗಲೂ ಜಮೀನು ಉಳುಮೆ ಮಾಡುತ್ತಿದ್ದ ರೈತರಿಗೆ ಹೆಚ್.ಎ.ಎಲ್ ನಲ್ಲಿ ಉದ್ಯೋಗ ಮತ್ತು ಒಂದೊಂದು ನಿವೇಶನ ನೀಡುವುದಾಗಿ ಅಂದಿನ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಭರವಸೆ ನೀಡಿದ್ದರು. ಇದೂವರೆಗೂ ಭರವಸೆ ಹಿಡೇರಿಸಿಲ್ಲ.
  3. ಕುಂದರನಹಳ್ಳಿಯ ಸುಮಾರು 17 ಜನರು ಗ್ರಾಮಠಾಣದಲ್ಲಿರುವ ತಮ್ಮ ನಿವೇಶನಗಳನ್ನು ಗಂಗಮಲ್ಲಮ್ಮ ದೇವಾಲಯಕ್ಕೆ ಉಚಿತವಾಗಿ ನೀಡುವ ಸಂದರ್ಭದಲ್ಲಿ ನಾನು ಸಹ ಅವರಿಗೆ ಭರವಸೆ ನೀಡಿದ್ದೆ. ಇದಕ್ಕೆ ಪರ್ಯಾಯವಾಗಿ ಬಿದರೆಹಳ್ಳಕಾವಲ್ ನಲ್ಲಿ ನಿವೇಶನ ಕೊಡಿಸುತ್ತೇನೆ ಎಂದು ಆದರೇ ಈಗಲೂ ನನ್ನ ಕೈಯಿಂದ ಸಾಧ್ಯಾವಾಗಿಲ್ಲ.
  4. ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಹೆಚ್.ಎ.ಎಲ್ ಘಟಕ ಮಾಡುವಾಗ ಹೆಚ್.ಟಿ ಲೈನ್ ಶಿಫ್ಟ್ ಮಾಡುವಾಗ ಸಂತ್ರಸ್ಥರಿಗೆ ಒಂದೊಂದು ನಿವೇಶನ ಕೊಡಿಸುವುದಾಗಿ ಆಗಿನ ಮಾಜಿ ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಭರವಸೆ ನೀಡಿದ್ದರು, ಇದೂವರೆಗೂ ಭರವಸೆ ಹಿಡೇರಿಸಿಲ್ಲ. ಮಾರಶೆಟ್ಟಿಹಳ್ಳಿ ಶ್ರೀ ಬೋರೇಗೌಡರು ನನ್ನನ್ನು ಇನ್ನೂ ಹೊಡೆದಿಲ್ಲ ಅಷ್ಟೆ, ಎಲ್ಲವನ್ನೂ ಮಾತನಾಡಿದ್ದಾರೆ.
  5. ಇದೇ ರೀತಿ ಕುಂದರನಹಳ್ಳಿ- ಅದಲಗೆರೆ ರಸ್ತೆ ಸಂತ್ರಸ್ಥರಿಗೂ ಪರ್ಯಾಯವಾಗಿ ಬಿದರೆ ಹಳ್ಳಕಾವಲ್ ನಲ್ಲಿ ಜಮೀನು ಕೊಡಿಸುವ ಭರವಸೆಯನ್ನು ನೀಡಿದ್ದ ಸಿದ್ಧಗಂಗಾ ಶ್ರೀಗಳು ಮತ್ತು ದಿ.ಸಾಗರನಹಳ್ಳಿ ರೇವಣ್ಣನವರು ಭರವಸೆ ಹೀಡೇರಿಸಿಲ್ಲ.

 ಇಂಥ ಭರವಸೆಗಳು ತುಮಕೂರು ಜಿಲ್ಲೆಯಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಮತ್ತು ವಿಶ್ವದಲ್ಲಿ ಎಷ್ಠಾಗಿವೆಯೋ? ದೇವರೇ ಬಲ್ಲ!