26th April 2024
Share

TUMAKURU:SHAKTHIPEETA FOUNDATION

ಕರ್ನಾಟಕದ ಇತಿಹಾಸದಲ್ಲಿ ಕುಡಿಯುವ ನೀರಿಗೆ ಮತ್ತು ಅಂತರ್ಜಲ ಅಭಿವೃದ್ಧಿ ಯೋಜನೆಗೆಗಾಗಿ ರೂಪಿಸಿದ ವಿಶಿಷ್ಠವಾದ ಯೋಜನೆ ಎತ್ತಿನಹೊಳೆ. ಆದರೂ ಪೂರ್ಣಗೊಳಿಸುವ ಇಚ್ಚಾಶಕ್ತಿ ಇದೂವರೆಗೂ ಆಡಳಿತ ನಡೆಸಿದ ಯಾವುದೇ ಪಕ್ಷಗಳಿಗೂ ಇಲ್ಲ. ಈ ಯೋಜನೆ ಶ್ರೀ ಬಸವರಾಜ್ ಬೊಮ್ಮಾಯಿಯವರ ಕೂಸು ಎಂದರೆ ತಪ್ಪಾಗಲಾರದು.

ಬೊಮ್ಮಾಯಿ ಸಾಹೇಬ್ರೇ ಕೆಳಕಂಡ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸುವಿರಾ?

  1. ಯೋಜನೆ ವಿಳಂಭವಾದಷ್ಟು ಲಾಭ ಬರಲಿದೆ ಎಂಬ ದುರುದ್ದೇಶದಿಂದ, ಹೈಡ್ರೋ ಪಾಜೆಕ್ಟ್ ಯೋಜನೆಯ ಮಾಲೀಕರೊಬ್ಬರÀ ಕೇವಲ 10 ಗುಂಟೆ ಜಮೀನು ಮತ್ತು ಇನ್ನೊಬ್ಬ ಮಾಲೀಕರ ಕೇವಲ 3 ಎಕರೆ ಜಮೀನಿನ ಭೂ ಸ್ವಾಧಿನ ಮಾಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯಾವಗಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ, ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ?
  2. 3 ಎಕರೆ 10 ಗುಂಟೆ ಜಮೀನು ಭೂ ಸ್ವಾಧೀನ ಆದರೇ ಹರವನಹಳ್ಳಿವರೆಗೆ ಸಂಪೂರ್ಣವಾಗಿ ಯೋಜನೆ ಪೂರ್ಣ ಗೊಳ್ಳಲಿದೆ. ಅರಸಿಕೆರೆ ಶಾಸಕರು ವಿಧಾನಸಭೆ ಒಳಗೆ ಮಾತನಾಡಿದ ಹಾಗೆ ವ್ಯವಹಾರ ಮಾಡಿಕೊಂಡು ಹೋಗುವವರಿಗೆ ಇಂಥಹ ಸಮಸ್ಯೆ ಅರಿವಿಗೆ ಬರುದಿಲ್ಲವೇ? ಇದರಲ್ಲಿ ವ್ಯವಹಾರ ಆಗಿದ್ದರೆ ಗಮನಹರಿಸುತ್ತಿದ್ದರೇನೋ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಬರುವುದಿಲ್ಲವೇ? ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ?
  3. ಭೂಸ್ವಾಧಿನಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದರೂ, ಅಧಿಕಾರಿಗಳ ಸಂಭಂಧಿಕರು ರೈತರಿಂದ ಹಣ ವಸೂಲಿ ಆಗುವವರೆಗೂ ಹಣ ಬಿಡುಗಡೆ ಮಾಡುತ್ತಿಲ್ಲವಂತೆ. ಒಂದಲ್ಲ ಒಂದು ಕಾರಣ ಹುಡುಕಿ ರೈತರ ಮನೆ ಹಾಳುಮಾಡುತ್ತಿದ್ದಾರಂತೆ.ಜೊತೆಗೆ ಯೋಜನೆಗೂ ವಿಳಂಭವಾಗಲಿದೆ.ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ?
  4. ತಾವೇ ಕಾಲಮಿತಿ ಹಾಕಿಕೊಂಡರೇ, ತಮ್ಮ ಅವಧಿಯಲ್ಲಿ ಕಡೇ ಪಕ್ಷ ವಾಣಿವಿಲಾಸ ಡ್ಯಾಂಗೆ ನೀರು ತುಂಬಿಸಬಹದು. ಇನ್ನೂ ರಿಸ್ಕ್ ತೆಗೆದುಕೊಂಡರೆ ತುಮಕೂರು ಜಿಲ್ಲೆಯಲ್ಲಿ ನಿಮ್ಮ ಕಚೇರಿಯ ಜಲತಂಡ’ ಗುರುತಿಸಿರುವ ಡ್ಯಾಂಗೆ ನೀರು ಹರಿಸಬಹುದು. ಒಂದು ಹೊಸ ದಾಖಲೇ ಸೃಷ್ಠಿಸಿದ ಕೀರ್ತಿ ತಮಗೆ ಕೀರೀಟ ಆಗಲಿದೆ.
  5. ಬೈರುಗೊಂಡ್ಲು ಡ್ಯಾಂ ಒಂದಲ್ಲ ಒಂದು ದಿವಸ ಮಾಡಲೇ ಬೇಕು. ಸಮಸ್ಯೆ ಮುಗಿಯುವವರೆಗೂ ತುಮಕೂರು ಜಿಲ್ಲೆಯಲ್ಲಿ ಹಲವಾರು ಡ್ಯಾಂಗಳ ಸ್ಥಳಗಳನ್ನು ನಿಮ್ಮ ಕಚೇರಿಯ ‘ಜಲತಂಡ ಕೂಂಬಿಂಗ್ ಆಪರೇಷನ್’ ಮಾಡುವ ಮೂಲಕ ಹುಡುಕಿದೆಯಂತೆ. ಬಹಳ ಕಡಿಮೆ ವೆಚ್ಚದಲ್ಲಿ ಜಾಸ್ತಿ ನೀರು ನಿಲ್ಲಿಸುವ ಹೊಸ ಡ್ಯಾಂಗಳ ಅವುಷ್ಕಾರಗಳಾಗಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಅತೀ ಶೀಘ್ರವಾಗಿ ಬಹು ಮಹತ್ವದ ಡ್ಯಾಂಗೆ ಅಡಿಪಾಯ ಹಾಕುವ ಮನಸ್ಸು ನಿಮಗಿಲ್ಲವೇ?
  6. ಈ ಹೊಸ ಡ್ಯಾಂ ನಿಮಗೆ ಎರಡು ಕೀರ್ತಿ ತರಲಿದೆ ಒಂದು ಎತ್ತಿನಹೊಳೆ ಸಮಸ್ಯೆ ಬಗೆಹರಿದರೇ, ಬೆಂಗಳೂರಿಗೆ ಕುಡಿಯುವ ನೀರು ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಒಂದು ಬೃಹತ್ ವಾಟರ್ ಬ್ಯಾಂಕ್ ನಿರ್ಮಾಣ ಮಾಡಿದ ಕೀರ್ತಿ ತಮಗೆ ಬರಲಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆಯೂ ಅಡಗಿದೆ ಎನ್ನಿಸುತ್ತದೆ.
  7. ಇದರಲ್ಲಿ ಸುಮಾರು 50 ರಿಂದ 55 ಟಿಎಂಸಿ ಅಡಿ ನೀರು ನಿಲ್ಲಿಸುವ ಒಂದು ಡ್ಯಾಂ ಸ್ಥಳವನ್ನು ಶ್ರೀ ಜಿ.ಎಸ್.ಬಸವರಾಜ್ ರವರು ಹೇಳುತ್ತಿದ್ದರೇ? ಇದಕ್ಕಿಂತ ದೊಡ್ಡದಾದ ಸುಮಾರು 70 ರಿಂದ 100 ಟಿಎಂಸಿ ಅಡಿ ನೀರು ನಿಲ್ಲಿಸುವ ಮತ್ತು ಕಡಿಮೆ ಖರ್ಚಿನ ಇನ್ನೊಂದು ಡ್ಯಾಂ ಸ್ಥಳವನ್ನ್ನು ನಿಮ್ಮ ಕಚೇರಿಯ ಜಲತಂಡ ಗುರುತಿಸಿದೆಯಂತೆ?

ನೀವೂ ತುಮಕೂರಿಗೆ  ನಾಳೆ(24.09.2021) ಬರುತ್ತಿದ್ದೀರಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ನಿಮ್ಮ ಅಣಿಮುತ್ತುಗಳಿಗೆ ಕಾಯುತ್ತಿದ್ದೇವೆ ಸ್ವಾಮಿ ಮುಖ್ಯ ಮಂತ್ರಿಯವರೇ?

-ಕುಂದರನಹಳ್ಳಿ ರಮೇಶ್. ಅಧ್ಯಕ್ಷ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ.