19th April 2024
Share

TUMAKURU:SHAKTHIPEETA FOUNDATION

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಗಲಾವಾಡಿ ಜುಂಜಪ್ಪನವರ ಸುಕ್ಷೇತ್ರದಲ್ಲಿ ಕಾಡೊಗೊಲ್ಲರ ಸಮಾವೇಶ ನಡೆದಿತ್ತಂತೆ. ತುಮಕೂರು ಜಿಲ್ಲೆಯ 738 ಕಾಡುಗೊಲ್ಲರ ಹಟ್ಟಿಯ ಜನ ಭಾಗವಹಿದ್ದರಂತೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್ ರವರಿಗೆ ಕಾಡೊಗೊಲ್ಲರನ್ನು ಎಸ್.ಟಿ.ಜನಾಂಗಕ್ಕೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರಂತೆ.

ಅವರು ಹೀಗೆ ಹೇಳಿದ್ದರಂತೆ ನಾನು ಈ ಚುನಾವಣೆಯಲ್ಲಿ ನಿಂತು ಗೆದ್ದರೇ ನಿಮ್ಮ ಬೇಡಿಕೆಗೆ ಬೇಂಬಲ ನೀಡುತ್ತೇನೆ. ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂಬ ಖಚಿತ ಭರವಸೆ ನೀಡಿದ್ದರಂತೆ. ಎರಡು ವರ್ಷ ಕಳೆದರೂ ಈ ಬಗ್ಗೆ ಚಕಾರವೆತ್ತಿದ ಹಾಗೆ ಕಾಣುತ್ತಿಲ್ವಂತೆ. 

ಮಧುಗಿರಿಯ ಶ್ರೀ ವೀರಣ್ಣನವರು ನನಗೆ ಕೇಳಿದ ಪ್ರಶ್ನೆ ನಮ್ಮ ಅಣ್ಣ ಬಸವರಾಜಣ್ಣ ಎಲ್ಲಾ ವಿಚಾರದಲ್ಲಿ ಶ್ರಮಿಸುತ್ತಿದ್ದಾರೆ. ಕಾಡುಗೊಲ್ಲರ ವಿಚಾರದಲ್ಲಿ ಏಕೆ ಸುಮ್ಮನಿದ್ದಾರೆ. ಲೋಕಸಭೆಯಲ್ಲಿ ಕುಂಚಿಟಿಗರ ಬಗ್ಗೆಯೂ ಪ್ರಸ್ತಾಪ ಮಾಡುವ ಮೂಲಕ ಅವರ ಧ್ವನಿಯಾದರೂ, ನಾವೇನು ಮಾಡಿದ್ದೇವೆ?

ರಮೇಶಣ್ಣನವರೇ ನೀವೂ ಯಾವುದೇ ವ್ಯಕ್ತಿಯ ಪರವಾಗಿ, ಜಾತಿಯ ಪರವಾಗಿ, ಒಂದು ಪಕ್ಷದ ಪರವಾಗಿ ಇಲ್ಲ, ತಪ್ಪು ಮಾಡಿದ ಎಲ್ಲರನ್ನೂ ಎಚ್ಚರಿಸುತ್ತೀರಿ, ಒಳ್ಳೆಯ ಕೆಲಸ ಮಾಡಿದ ಎಲ್ಲರನ್ನೂ ಪ್ರಶಂಸೆ ಮಾಡುತ್ತೀರಿ, ನೀವೇ ತಪ್ಪು ಮಾಡಿದರೆ ಕ್ಷಮೆ ಕೇಳುತ್ತೀರಿ.

ತುಮಕೂರು ಜಿಲ್ಲೆಯ ಜನರಲ್ಲಿ ಒಂದು ಭಾವನೆ ಇದೆ. ಕುಂದರನಹಳ್ಳಿ ರಮೇಶ್ ರವರ ಮನಸ್ಸಿಗೆ ಬಂದರೆ ಎಂಪಿಯವರಿಂದ ಕೆಲಸ ಮಾಡಿಸಲು ಖಂಡಿತ ಶ್ರಮಿಸುತ್ತಾರೆ ಎನ್ನುತ್ತಾರೆ. ಈಗ ನೀವೂ ಬಸವರಾಜ್ ಅಣ್ಣನವರಿಗೆ ಒಂದು ಭಾರಿ ಮಾತನಾಡಿ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ನಾನು ಅವರಿಗೆ ಹೇಳುವುದಿಷ್ಟೆ ಮಾನ್ಯ ಶ್ರೀ ವೀರಣ್ಣನವರೇ, ನೀವೂ ಈ ಬಗ್ಗೆ ಒಂದು ಸಂವಾದ ಇಟ್ಟುಕೊಳ್ಳಿ. ಪರಿಣಿತರನ್ನು ಕರೆಯಿರಿ, ಸಾಧಕ-ಭಾಧಕಗಳ ಬಗ್ಗೆ, ಪರ-ವಿರೋಧಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಿ. ಬಸವರಾಜ್ ರವರು ಒಮ್ಮೆ ಮಾತು ಕೊಟ್ಟರೇ ಬದಲಾಗುವುದಿಲ್ಲ ಎಂಬ ಕಟು ಸತ್ಯ ನಿಮಗೆ ತಿಳಿದಿರಲಿ ಸ್ವಾಮಿ.

ನಂತರ ಬಸವರಾಜ್ ರವರು ಏನು ಹೇಳಿದ್ದರೂ, ಈಗ ಏನು ಮಾಡಬೇಕು ಎಂಬ ರೋಡ್ ಮ್ಯಾಪ್ ಮಾಡಿಕೊಂಡು ಶ್ರಮಿಸಲಿ, ನಿಮ್ಮ ಅನಿಸಿಕೆಯಂತೆ ನಾನೂ ಜೊತೆಯಲ್ಲಿ ಇರುತ್ತೇನೆ.

ಆದರೇ ಊರುಗೊಲ್ಲರು ಮತ್ತು ಕಾಡುಗೊಲ್ಲರ ಕಿತ್ತಾಟ ಎಷ್ಟು ಸರಿ? ರಾಜಕಾರಣಿಗಳು ಕಿತ್ತಾಡಿಸಿ ಬೇಳೆ ಬೇಯಿಸಿಕೊಳ್ಳತ್ತಾರೇಯೇ? ನೀವೇ ಕುಳಿತು ಚರ್ಚೆ ಮಾಡಿ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಅನಿಸಿಕೆ ನನ್ನದು. ತೀರ್ಮಾನ ನಿಮ್ಮದು.

ಜಾತಿ-ಜಾತಿ, ಜಾತಿ-ಉಪಜಾತಿ ಕಿತ್ತಾಡಿಸಿ ಮಜಾ ತೆಗೆದುಕೊಳ್ಳುವ ರಾಜಕಾರಣಿಗಳ ಬಗ್ಗೆ ಎಚ್ಚರ! ಎಚ್ಚರ!! ಎಚ್ಚರ!!! ಸ್ವಾಮಿ.

ಶಿರಾದಲ್ಲಿರುವ ಜುಂಜಪ್ಪನವರ ಸುಕ್ಷೇತ್ರದ ಅಭಿವೃದ್ಧಿ???