29th March 2024
Share

TUMAKURU: SAKTHIPEETA FUONDATION

ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳೆರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಬಗ್ಗೆ ಸಮಾಲೋಚನೆ ನಡೆಸಿದರು.

 ಶ್ರೀ ರಮೇಶ್ ಜಾರಕಿ ಹೊಳೆರವರು ತುಮಕೂರು ಬ್ರ್ಯಾಂಚ್ ನಾಲಾ 70  ನೇ ಕೀಮೀ ನಿಂದ 166.90  ನೇ ಕೀಮೀ ರವರೆಗೆ ರೂ 550  ಕೋಟಿ ವೆಚ್ಚದ ನಾಲಾ ಆಧುನೀಕರಣದ ಯೋಜನೆಗೆ ಸಚಿವ ಸಂಪುಟಕ್ಕೆ ಮಂಡಿಸಲು ಒಪ್ಪಿಗೆ ನೀಡಿದರು.

  ಸಚಿವರು ತೆಲಂಗಾಣದ ಕಾಳೇಶ್ವರಂ ಯೋಜನೆ, ಇಸ್ರೇಲ್ ಮಾದರಿ ಯೋಜನೆ, ರಾಜ್ಯದ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಸೇರಿದಂತೆ ಆನೇಕ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಿ ಮಾತನಾಡಿದರು.

   ರಾಜ್ಯದ ಸಮಗ್ರ ನೀರಾವರಿಗೆ ಅಗತ್ಯವಿರುವ ಎಲ್ಲಾ ಯೋಜನೆಗಳ ಅಧ್ಯಯನ ಮಾಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಬಸವರಾಜ್‌ರವರು ಗಮನ ಸೆಳೆದರು. ಅಧಿವೇಶನ ಮುಗಿದ ಬಳಿಕ ಪರಿಣಿತರ ಸಲಹೆ ಪಡೆದು ಯೋಜನೆ ರೂಪಿಸಲು ಸಚಿವರು ಚಿಂತನೆ ನಡೆಸಿರುವುದಾಗಿ ವಿಷಯ ಹಂಚಿ ಕೊಂಡರು.

    ಸಚಿವರು ಹೇಮಾವತಿ ಕಡತಕ್ಕೆ ಸಹಿ ಹಾಕಿದ ನಂತರ ಜಲಸಂಪನ್ಮೂಲ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಕೇಸ್ ವರ್ಕರ್, ಆಪ್ತ ಸಹಾಯಕರು ಹೀಗೆ ಪ್ರತಿಯೊಬ್ಬರ ಕುರ್ಚಿ ಮುಂದೆ ಕುಳಿತು ಕೆಲಸ ಮಾಡಿಸಿ ಸಚಿವ ಸಂಪುಟದಲ್ಲಿ ಮಂಡಿಸಲು ಮುಖ್ಯ ಕಾರ್ಯದರ್ಶಿ ಕಚೇರಿಗೆ ತಲುಪಿಸುವವರೆಗೂ ಜಿ.ಎಸ್.ಬಸವರಾಜ್ ರವರು ಅವಿರತವಾಗಿ ಶ್ರಮಿಸಿದ್ದು ನೋಡಿ ಇಡೀ ಇಲಾಖೆ ಅಧಿಕಾರಿಗಳು ಅಚ್ಚರಿ ವ್ಯಕ್ತ ಪಡಿಸಿದರು.

   ಲೋಕಸಭಾ ಸದಸ್ಯ ಎಂಬ ಯಾವುದೇ ಬಿಗುಮಾನವಿಲ್ಲದೆ ಅವರು ಕೆಲಸ ಮಾಡುವ ರೀತಿ ನಿಜಕ್ಕೂ ಮೆಚ್ಚುವಂತದ್ದು ಎಂದು ನೌಕರರು ಹರ್ಷ ವ್ಯಕ್ತ ಪಡಿಸದರು. ಈ ಯೋಜನೆ ಕಡತದ ಅನುಸರಣೆ ಮಾಡಲು ಲೋಕಸಭಾ ಅಧಿವೇಶನಕ್ಕೆ ಹಾಜರಾಗಿದ್ದವರು ಕಡತ ವಿಳಂಭವಾದ ನಂತರ ದೆಹಲಿಯಿಂದ ವಾಪಾಸ್ಸು ಬಂದು ಕೆಲಸ ಮುಗಿಸಿ ನಂತರ ದೆಹಲಿಗೆ ತೆರಳುವ ಮೂಲಕ ಮತದಾರರ ಋಣ ತೀರಿಸಲು ಹರಸಾಹಸ ಮಾಡಿದರು.

  ಹಣಕಾಸು ಇಲಾಖೆ ಒಪ್ಪಿಗೆ ನೀಡಿದ ನಂತರ ಸ್ವಲ್ಪ ವಿಳಂಭವಾದ ಹಿನ್ನೆಲೆಯಲ್ಲಿ ಎರಡು ಭಾರಿ ಸಚಿವರೊಂದಿಗೆ ಚರ್ಚೆ, ಪುನಃ ಮುಖ್ಯ ಮಂತ್ರಿಯವರೊಂದಿಗೆ  ಚರ್ಚಿಸಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಹೇಳಿಸಿ, ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲು ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿ ದೆಹಲಿಗೆ ತೆರಳಿದರು. ನಾಳೆ (11.03.2020) ಸಚಿವ ಸಂಪುಟದಲ್ಲಿ ವಿಷಯ  ಮಂಡನೆಯಾಗಲಿದೆ.

   ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು. ಸಚಿವರ ಓಎಸ್‌ಡಿ ಶ್ರೀ ರುದ್ರಯ್ಯನವರು, ಕೆಎನ್‌ಎನ್‌ಎಲ್  ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಮಲ್ಲಿಕಾರ್ಜುನ್ ಗುಂಗೆ, ಅಭಿವೃದ್ಧಿ ರೆವೂಲ್ಯೂಷನ್ ಫೊರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮತ್ತು ಕಾಳೆನಹಳ್ಳಿ ನರಸಿಂಹಮೂರ್ತಿ ರವರು ಇದ್ದಾರೆ.