26th December 2024
Share

TUMAKURU: SHAKTHIPEETA FOUNDATION

   ಕೇಂದ್ರ ಸರ್ಕಾರ ಜಲಶಕ್ತಿ ಸಚಿವಾಲಯ ಸ್ಥಾಪಿಸಿ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದೆ. ಕರ್ನಾಟಕ ರಾಜ್ಯ ಸರ್ಕಾರ 2020-21 ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರದ ರೀತಿ ಘೋಷಣೆ ಮಾಡಲು ಚಿಂತನೆ ಮಾಡಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕೊನೆಗೂ ‘2020-21 ನೇ ಸಾಲಿನ ಆಯವ್ಯಯದ 150  ನೇ ವಿಷಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ಸಮನ್ವಯ ಸಾಧಿಸಲು ಹಾಗೂ ಕುಡಿಯುವ ನೀರನ್ನು ಪೂರೈಸಲು ಸಮಗ್ರ ನೀತಿ ರೂಪಿಸಲಾಗುವುದು ಹಾಗೂ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳನ್ನು ಒಂದೇ ಸಚಿವಾಲಯದಡಿ ತರಲಾಗುವುದು’ ಎಂದಿದ್ದಾರೆ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸಹ ಮುಖ್ಯ ಮಂತ್ರಿಗಳಿಗೆ ಕೇಂದ್ರದ ಮಾದರಿ ಜಾರಿ ಮಾಡಿ ಎಂದು ಮನವಿ ಮಾಡಿದ್ದರು. ನನಗೂ ಈ ವಿಚಾರದ ಬಗ್ಗೆ ವಿಶೇಷ ಆಸಕ್ತಿ ಇತ್ತು.

 ನಮ್ಮ ರಾಜ್ಯ ಸರ್ಕಾರ ಇಂಥಹ ಒಂದು ಚಿಂತನೆಯನ್ನು 2011-12 ನೇ ಸಾಲಿನ ಆಯವ್ಯಯದಲ್ಲಿ ಮಂಡಿಸಿ, ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ (ACIWRMADVANCED CENTRE FOR INTEGRATED WATER RESOURCES MANAGEMENT) ವನ್ನು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದೆ.

  ಈ ಸಂಸ್ಥೆಯ ಘನ ಉದ್ದೇಶವೂ ನೀರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಒಂದೇ ಕಡೆ ತರುವುದಾಗಿದೆ. ಜಲಶಕ್ತಿ ಮಾದರಿಯ ಚಿಂತನೆಯನ್ನೆ ನಮ್ಮ ರಾಜ್ಯ ಸರ್ಕಾರ ಮಾಡಿದೆ. ಆದರೆ ಈ ಸಂಸ್ಥೆ ಯಾವ ರೀತಿ ಕಾರ್ಯನಿರ್ವಹಿಸಿದೆ ಎಂಬ ನಿಖರವಾದ ಮಾಹಿತಿ ಬಗ್ಗೆ ಅಧ್ಯಯನ ಮಾಡಬೇಕಿದೆ.

   ರಾಜ್ಯ ಸರ್ಕಾರ ಈ ಸಂಸ್ಥೆಗೆ ಜಲಶಕ್ತಿ’ ಎಂಬ ಹೆಸರಿಗೆ ಬದಲಾಯಿಸಿ, ಚುರುಕಾಗಿ ಕಾರ್ಯನಿರ್ವಹಣೆ ಮಾಡುವುದು ಸೂಕ್ತವಾಗಿದೆ. ಇದರ ಜೊತೆಗೆ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ’ ಯನ್ನು ವಿಲೀನಗೊಳಿಸುವುದು ಉತ್ತಮ.

    ಈಗ ವಿವಿಧ ಇಲಾಖೆಯಡಿಯಲ್ಲಿ ಇರುವ ಹತ್ತಾರು ಸಂಸ್ಥೆಗಳನ್ನು ಇದರಡಿ ತರಲು ತನ್ನ ಉದ್ದೇಶದಲ್ಲಿ ಈ ಸಂಸ್ಥೆ ಈಗಾಗಲೇ ಸೇರ್ಪಡೆ ಮಾಡಿರುವುದರಿಂದ ಮತ್ತೊಂದು ಸಂಸ್ಥೆಯ ಅಗತ್ಯವಿಲ್ಲ.

   ಈ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನರು ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸುವುದು ಅನಿವಾರ್ಯವಾಗಿದೆ. ಕೇಂದ್ರದ ಜಲಶಕ್ತಿ ಅಭಿಯಾನ, ಜಲಗ್ರಾಮ, ಜಲಶಕ್ತಿ ಮಿಷನ್, ಅಟಲ್ ಭೂಜಲ್ ಹಾಗೂ ರಾಜ್ಯ ಸರ್ಕಾರದ ಜಲಾಮೃತ, ಜಲಧಾರೆ, ಜಲವರ್ಷ, ಮನೆ-ಮನೆಗೆ ಗಂಗೆ, ಜಲಗ್ರಾಮ ಕ್ಯಾಲೆಂಡರ್, ಕೆರೆ ಸಂರಕ್ಷಣೆ ಪ್ರಾಧಿಕಾರ, ವಾಲ್ಮಿ, ಸೂಕ್ಷ್ಮ ನೀರಾವರಿ ನಿಗಮ ಹೀಗೆ ಹತ್ತಾರು ಹೆಸರಿನ ಯೋಜನೆಯಿಂದ ಅನಗತ್ಯ ನೂರಾರು ಕೋಟಿ ಹಣ ವ್ಯಯವಾಗಲಿದೆ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಜಲಗ್ರಾಮ ಕ್ಯಾಲೆಂಡರ್ ರಚಿಸಲು ಈ ಎಲ್ಲಾ ಸಂಸ್ಥೆಗಳ ಯೋಜನೆ ಕ್ರೋಢಿಕರಿಸಿ ರೂಪುರೇಷೆ ಸಲ್ಲಿಸಲು ರಾಜ್ಯದ ಯೋಜನಾ ಇಲಾಖೆಗೆ ಸೂಚಿಸಿ ಎಂದು ಮನವಿ ಮಾಡಿದ್ದಾರೆ. ಪಲಿತಾಂಶ ಕಾದು ನೋಡಬೇಕಿದೆ.