19th April 2024
Share

TUMAKURU:SHAKTHIPEETA FOUNDATION

2047 ಕ್ಕೆ ಭಾರತ ವಿಶ್ವಗುರು ವಾಗುವತ್ತ ಸಾಗಿದೆ. ದೇಶದಲ್ಲಿ ಯಾವುದೇ ಸರ್ಕಾರದ ಆಡಳಿತವಿರಲಿ ‘ಇದು ಬಾರತಕ್ಕೆ ಹೆಮ್ಮೆಯ ವಿಚಾರ’.

ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮುಖ್ಯ ಮಂತ್ರಿಗಳ ಮತ್ತು ಪ್ರಧಾನ ಮಂತ್ರಿ ಯವರ ಅವಧಿಯ ಸಾಲದ ಬಗ್ಗೆ ಮಾತನಾಡಿರುವುದು ನಿಜಕ್ಕೂ ಸ್ವಾಗಾತಾರ್ಹ. ಆದರೇ ಅಪೂರ್ಣ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಿರುವುದು ಸರಿಯಲ್ಲ.

1947 ರಿಂದ ಇಲ್ಲಿಯವರೆಗೂ ರಾಜ್ಯದ ಪ್ರತಿಯೊಬ್ಬ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಮಾಡಿರುವ ಸಾಲ ಎಷ್ಟು, ಅಂದಿನ ಜಿಡಿಪಿ ಎಷ್ಟಿತ್ತು, ಸಾಲ ಮಾಡಿರುವ ಉದ್ದೇಶ ಏನು, ಸಾಲ ಮಾಡಿರುವುದರಿಂದ ಆಗಿರುವ ಪರಿಣಾಮಗಳು ಏನು ಎಂಬ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕಿತ್ತು.

ಅದೇ ರೀತಿ 1947 ರಿಂದ ಇಲ್ಲಿಯವರೆಗೂ ದೇಶದ ಪ್ರತಿಯೊಬ್ಬ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಮಾಡಿರುವ ಸಾಲ ಎಷ್ಟು, ಅಂದಿನ ಜಿಡಿಪಿ ಎಷ್ಟಿತ್ತು, ಸಾಲ ಮಾಡಿರುವ ಉದ್ದೇಶ ಏನು, ಸಾಲ ಮಾಡಿರುವುದರಿಂದ ಆಗಿರುವ ಪರಿಣಾಮಗಳು ಏನು ಎಂಬ ಬಗ್ಗೆ ಮತದಾರರಿಗೆ ಮಾಹಿತಿ ನೀಡಬೇಕಿತ್ತು.

ಜೊತೆಗೆ 1947 ರಿಂದ ಯಾವ ಪ್ರಧಾನಿಗಳು ಯಾವ ದೇಶಕ್ಕೆ ಎಷ್ಟು ಸಾಲ ನೀಡಿದ್ದಾರೆ, ಯಾವ ದೇಶಕ್ಕೆ ಎಷ್ಟು ಅನುದಾನ ನೀಡಿದ್ದಾರೆ, ಯಾವ ರಾಜ್ಯಗಳಿಗೆ ಎಷ್ಟೆಷ್ಟು ಸಾಲ ನೀಡಿದ್ದಾರೆ. ಅವುಗಳಿಂದ ಆಗಿರುವ ಪರಿಣಾಮಗಳು ಏನು ಎಂಬ ಬಗ್ಗೆಯೂ ಮತದಾರರಿಗೆ ಮಾಹಿತಿ ನೀಡಬೇಕಿತ್ತು.

ಅದೇ ರೀತಿ ದೇಶದ ಪ್ರತಿಯೊಂದು ರಾಜ್ಯಗಳ ಸಾಲ ಮತ್ತು ಪ್ರಪಂಚದ ವಿವಿಧ ದೇಶಗಳ ಸಾಲಗಳ ಬಗ್ಗೆಯೂ ವಿಶ್ಲೇಷಣೆ ಸೂಕ್ತವಾಗಿದೆ.

ಆದರೇ ಸಿದ್ಧರಾಮಯ್ಯನವರು ಬಿಜೆಪಿಯವರ ಅವಧಿಯ ಅಪೂರ್ಣ ಲೆಕ್ಕ ಹೇಳಿ, ರಾಜಕಾರಣಕ್ಕೆ ಲೆಕ್ಕ ಹೇಳಿದಂತಿದೆ. ಪ್ರಸ್ತುತ ರಾಜ್ಯದ ಮತ್ತು ದೇಶದ ಸಾಲದ ಸ್ಥಿತಿ ಗತಿ ಬಗ್ಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಗಂಭೀರ ಚರ್ಚೆ ಅಗತ್ಯವಾಗಿದೆ.

ಮುಂದೊಂದು ದಿವಸ ದೇಶ ಮತ್ತು ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗದೇ ಇರಲು ವ್ಯವಸ್ಥಿತ ಭದ್ರವಾದ ಅಡಿಪಾಯ ಹಾಕುವುದು ಒಳ್ಳೆಯದಲ್ಲವೇ? ಸಾರ್ವಜನಿಕರಿಗೂ ಈ ಮಾಹಿತಿ ಅಗತ್ಯವಿದೆ.

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು, ಈ ವಿಷಯವನ್ನು ಗಂಭಿರವಾಗಿ ತೆಗೆದು ಕೊಂಡು ಸ್ಪಷ್ಟನೆ ನೀಡುವುದು ಒಳ್ಳೆಯದು.