20th December 2024
Share

TUMAKURU. SHAKTHIPEETA FOUNDATION

ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿರವರು ನದಿ ಜೋಡಣೆ ಬಗ್ಗೆ ನೀಡಿರುವ ಹೇಳಿಕೆ   ದಿನಾಂಕ:29.02.2020 ರಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿರವರ ಕನಸಿನ ನದಿ ಜೋಡಣೆ ಯೋಜನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿರವರು ಕಂಕಣ ಬದ್ದರಾಗಿದ್ದಾರೆ. ಹಂತ-ಹಂತವಾಗಿ ನದಿ ಜೋಡಣೆ ಜಾರಿಮಾಡಲಾಗುವುದು ಎಂದಿದ್ದಾರೆ.

 ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಿಗೆ ಮೂರು ಪತ್ರಗಳನ್ನು ಬರೆದು ನದಿ ಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯ ಬಗ್ಗೆ ವಿಶೇಷ ಗಮನಹರಿಸಲು ಮನವಿ ಮಾಡಿದ್ದಾರೆ.

  ಮಾನ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮುಂದಿನ ಅಧಿವೇಶನದ ವೇಳೆಯಲ್ಲಿ ಈ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿರವರ ಬಳಿ ಸಮಾಲೋಚನೆ ಮಾಡಲು ಚಿಂತನೆ ನಡೆಸಿದ್ದರು. ಕಾಕತಾಳೀಯವಾಗಿ ಜೋಶಿರವರ ಹೇಳಿಕೆ ಮಹತ್ವ ಪಡೆದಿದೆ. ರಾಜ್ಯದ ನದಿ ಜೋಡಣೆ- ಕೆರೆಗಳ ಜೋಡಣೆಗೆ ಒಂದು ಹೊಸ ತಿರುವು ಪಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

  ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಮತ್ತು ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಇವರ ಪಾತ್ರ ಮಹತ್ತರವಾಗಿದೆ. ನಾವು ರಾಜ್ಯದಲ್ಲಿ ಏನೇನು ಸ್ಪಷ್ಟ ಕಾರ್ಯಕ್ರಮ ರೂಪಿಸುತ್ತೇವೆ ಎಂಬು ಗುರಿ ಮುಖ್ಯವಾಗಿದೆ.

1.ಜಲ ಗ್ರಾಮ ಕ್ಯಾಲೆಂಡರ್:- ರಾಜ್ಯದ 29340 ಗ್ರಾಮಗಳ WATER BUDGET- WATER AUDIT- WATER STRTAGY ಮಾಡುವುದು, ಮಳೆ ನೀರಿನ ಬಳಕೆ ಮತ್ತು ಮರಗಿಡ ಹಾಕಿ ಗತ ಕಾಲದ ವೈಭವ ಮರುಕಳಿಸುವಂತೆ ಮಾಡುವುದು ಮತ್ತು ಬೋರ್‌ವೆಲ್‌ಗಳಿಗೆ ನೀರಿನ ಮೀಟರ್ ಹಾಕುವುದು. (ಕ್ರಮ:ಮಾನ್ಯ ಸಣ್ಣ ನೀರಾವರಿ ಸಚಿವರು)

2.ವಿವಾದವಿಲ್ಲದ ನದಿ ನೀರನಲ್ಲಿ ಕೆರೆಗಳಿಗೆ ಅಲೋಕೇಷನ್: ರಾಜ್ಯದ ಕೃಷ್ಣಾ, ಕಾವೇರಿ, ಗೋದಾವರಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಮತ್ತು ಪಾಲಾರ್, ಪೆನ್ನಾರ್ ಸೇರಿದಂತೆ ಸುಮಾರು 1246  ಟಿಎಂಸಿ ಅಡಿ ನೀರಿನ ಎಲ್ಲಾ ಯೋಜನೆಗೆ ಪ್ಲಡ್ ಇರ್ರಿಗೇಷನ್ ರದ್ಧು ಗೊಳಿಸಿ ಮೈಕ್ರೋ ಇರ್ರಿಗೇಷನ್ ಮಾಡಿ ಉಳಿಯುವ ನೀರನ್ನು ರಾಜ್ಯದ 36000 ಕೆರೆಗಳಿಗೆ ಅಲೋಕೇಷನ್ ಮಾಡುವುದು. (ಕ್ರಮ:ಮಾನ್ಯ ಸಣ್ಣ ನೀರಾವರಿ ಸಚಿವರು)

3.ರಾಜ್ಯದ ನದಿ ಜೋಡಣೆಗಳ ಅಧ್ಯಯನ: ರಾಜ್ಯದ ನದಿ ಜೋಡಣೆಗಳ ಅಧ್ಯಯನ ಮತ್ತು ದೊರೆಯುವ ನೀರಿನಲ್ಲಿ  ರಾಜ್ಯದ 29340ಗ್ರಾಮಗಳಿಗೂ ಅಲೊಕೇಷನ್. (ಕ್ರಮ:ಮಾನ್ಯ ಜಲ ಸಂಪನ್ಮೂಲ ಸಚಿವರು)

4.ಕೇಂದ್ರ ಸರ್ಕಾರದ ನದಿ ಜೋಡಣೆ:- ಕೇಂದ್ರ ಸರ್ಕಾರದ ನದಿ ಜೋಡಣೆಗಳಿಂದ   ದೊರೆಯುವ ನೀರಿನಲ್ಲಿ  ರಾಜ್ಯದ 29340 ಗ್ರಾಮಗಳಿಗೂ ಅಲೊಕೇಷನ್.  (ಕ್ರಮ:ಮಾನ್ಯ ಜಲ ಸಂಪನ್ಮೂಲ ಸಚಿವರು)

5.ನೀರಿನಲ್ಲಿ ಸಾಮಾಜಿಕ ನ್ಯಾಯ: ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ದೊರೆಯುವಷ್ಟು ನೀರಿನಲ್ಲಿ ರಾಜ್ಯದ 29340 ಗ್ರಾಮಗಳಿಗೂ ನೀರಿನ ಹಂಚಿಕೆ ಮಾಡಿ ಗೆಜೆಟ್ ನೋಟಿಫಿಕೇಷನ್ ಮಾಡುವುದು. (ಕ್ರಮ:ಮಾನ್ಯ ಮುಖ್ಯ ಮಂತ್ರಿಗಳು ಮತ್ತು ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನ ಸಭಾ ಸದಸ್ಯರು ಮತ್ತು 75 ಜನ ವಿಧಾನ ಪರಿಷತ್ ಸದಸ್ರು ಸೇರಿದಂತೆ 340 ಜನಪ್ರತಿನಿಧಿಗಳು)

ಈ 5 ಅಂಶಗಳ ಜಾರಿಗೆ ಕೇಂದ್ರ ಸರ್ಕಾರದ ಕೆಲಸಗಳಿಗೆ ಶ್ರೀ ಜೋಶಿರವರು ಸೇರಿದಂತೆ ಕೇಂದ್ರದ ಎಲ್ಲಾ ಸಚಿವರ ಸಹಾಯ ಬೇಕಾಗಿದೆ.

 ಈ ವಿಚಾರದಲ್ಲಿ ಮಾತ್ರ ರಾಜ್ಯದ ಎಲ್ಲಾ ಪಕ್ಷದ 340 ಜನರು ನೀರಿನ ಪಕ್ಷವಾಗುವ ರೀತಿಯಲ್ಲಿ ಕೆಲಸ ಮಾಡುವುದು ತಮ್ಮ ಗುರಿಯಾಗಿರಲಿ. ತಮ್ಮಗಳ ಒಗ್ಗಟ್ಟು ಇಲ್ಲಿ ಬಹಳ ಮುಖ್ಯ.