20th April 2024
Share

TUMAKURU: SHAKTHIPEETA FOUNDATION

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ  Consultative committee for the ministry of jalashakthi ಸಮಿತಿ ಸದಸ್ಯರು, ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು  ಗುಟುರು ಎತ್ತುಗಳೋ ಅಥವಾ ನೀರಾವರಿ ಜೋಡೆತ್ತುಗಳೋ’ ಶೀಘ್ರದಲ್ಲಿ ರಾಜ್ಯದ ಜನತೆಗೆ ಅರಿವಾಗಲಿದೆ. ಕೇವಲ ನೀರಾವರಿ ಯೋಜನೆಗಳು ಗುಟುರು ಹಾಕಿದರೇ ಜಾರಿಯಾಗಲ್ಲ, ಒಂದು ರೀತಿ ತಪಸ್ಸು ಮಾಬೇಕಿದೆ.

 ಜಿಎಸ್‌ಬಿ ರವರು ಲೋಕಸಭಾ ಸದಸ್ಯರಾಗಲು ಪ್ರಮುಖ ಕಾರಣ ’ಗಂಗಾಮಾತೆ’ ಆರಂಭದಿಂದ ಕರ್ನಾಟಕ  ರಾಜ್ಯದ ಮತ್ತು ‘ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಫೈಲಟ್ ‘ಯೋಜನೆಯಾಗಿ ಆರಂಭಿಸಲು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯಕೈಗೊಂಡು ನಿಯಾಮುನುಸಾರ ಪ್ರಜಾಪ್ರಭುತ್ವದ ಹಾದಿಯಲ್ಲಿ ವಿವಿಧ ಹಂತಗಳಲ್ಲಿ ಸಭೆ ನಡೆಸುವ ಮೂಲಕ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಯವ್ಯಯ ಪತ್ರದಲ್ಲಿ ಅವರ ಅನಿಸಿಕೆಗಳ ಯೋಜನೆಗಳು ಬರುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.

 ಜೆಸಿಎಂ ಶಾಸಕರಾದ ಆರಂಭದಲ್ಲಿಯೇ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ಪ್ರಯತ್ನ ಆರಂಭ ಮಾಡಿದರು, ವರದಾನವೆಂಬಂತೆ ಸಣ್ಣ ನೀರಾವರಿ ಸಚಿವರು ಆದರು. ಕಾಕತಾಳಿಯವೆಂಬಂತೆ ಕೇಂದ್ರ ಸರ್ಕಾರ ಅಟಲ್ ಭೂಜಲ್’ ಯೋಜನೆಯನ್ನು ಈಗಲೇ ಘೋಷಣೆ ಮಾಡಿತು. ರಾಜ್ಯ ಸರ್ಕಾರವೂ ಜಲಾಮೃತ, ಅಂತರ್ಜಲ ಚೇತನ, ಜಲಗ್ರಾಮ ಕ್ಯಾಲೆಂಡರ್, ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿದ್ದಾರೆ.

 ಇವರಿಬ್ಬರೂ ಒಬ್ಬರಿಗಿನ್ನ, ಇನ್ನೊಬ್ಬರು ಪ್ರಚಂಡರೇ? ಎರಡು ಮಾತಿಲ್ಲ, ಜೆಸಿಎಂ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಮಾಡಿ ನಂತರ ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಚಿಂತನೆ ನಡೆಸಿರುವಂತಿದೆ.

 ಜಿಎಸ್‌ಬಿ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಮಾಡಿ ಕೇಂದ್ರ ಮಟ್ಟದಲ್ಲಿ ಇದೇ ಮಾದರಿಯಲ್ಲಿ ವಿಸ್ತರಣೆ ಮಾಡಿ ಎಂಬ ಅನುಭವ ಹಂಚಿಕೊಳ್ಳುವ ಚಿಂತನೆ ನಡೆಸಿರುವಂತಿದೆ.

 ಜಿಲ್ಲೆಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀರಾವರಿಯ ಕೆಲಸದ ಒತ್ತಡವೇ ಜಾಸ್ತಿಯಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ಸಚಿವರುಗಳ ಮಟ್ಟದಲ್ಲೂ ದೊಡ್ಡ ಸುದ್ದಿ ಇವರಿಬ್ಬರ ನೀರಿನ ಜಗಳ’

ಇವರಿಬ್ಬರ ನೀರಿನ ಜಗಳ ಮುಖ್ಯಮಂತ್ರಿಗಳ ಕದ ತಟ್ಟಿರುವಂತಿದೆ, ಏನೇ ಆದರೂ ಇದು ಒಂದು ಒಳ್ಳೆಯ ಬೆಳವಣಿಗೆ ನೀರಾವರಿ ಅಭಿವೃದ್ಧಿಗಾಗಿ ನಡೆಸುತ್ತಿರುವ ಮುಸುಕಿನ ಕಾಳಗ.

  ಇವರಿಬ್ಬರು ಏನು ಮಾಡುತ್ತಿದ್ದಾರೆ? ಏನು ಮಾಡಬೇಕಾಗಿತ್ತು? ಇವರಿಬ್ಬರ ಅಡಕ ಕತ್ತರಿಯಲ್ಲಿ ಸಿಲುಕಿ ಅಧಿಕಾರಿಗಳು ಏನುಮಾಡಿದ್ದಾರೆ? ಏನು ಮಾಡಬೇಕಾಗಿತ್ತು? ಎಂಬ ಬಗ್ಗೆ ’ಹಂಸಕ್ಷೀರ’ ನ್ಯಾಯದಂತೆ ಜಿಲ್ಲೆಯ ಮತ್ತು ರಾಜ್ಯದ ಜನರು ಉತ್ತರಕೊಡಬೇಕಿದೆ. ಇದಕ್ಕೆ ಪೂರಕವಾಗಿ ತುಮಕೂರಿನ ಶಕ್ತಿಪೀಠ ಫೌಂಡೇಷನ್ www.shakthipeeta.in  –   epaper shakthipeeta.in  – FOURM ಡಿಜಿಟಲ್ ಚರ್ಚೆಗೆ ಅವಕಾಶ ಕಲ್ಪಿಸಿದೆ. ತಾವೂ ಸಹ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಳ್ಳಬಹುದು.

ಡಿಜಿಟಲ್ ಚರ್ಚೆಗೆ ವೇದಿಕೆಯನ್ನು ಅತಿ ಶೀಘ್ರದಲ್ಲಿ ಅವರಿಬ್ಬರ ಸಮ್ಮುಖದಲ್ಲಿಯೇ ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿದೆ.