6th December 2024
Share
KUNDARANAHALLI RAMESH

TUMAKURU:SHAKTHIPEETA FOUNDATION

 ತುಮಕೂರಿನಲ್ಲಿ ಹೂಡಿಕೆದಾರರ ಸಮಾವೇಶ ಮಾಡಬೇಕು ಎಂಬುದು ಕೆಲವರ ಅನಿಸಿಕೆಯಾಗಿದೆ. ಇದು ಯಾವ ರೀತಿ ಇರಬೇಕು ಎಂಬುದು ಒಂದು ಯಕ್ಷಪ್ರಶ್ನೆಯಾಗಿದೆ. ಒಂದು ಸಮಾವೇಶ ಮಾಡಿ ಢಾಂ ಢೂಂ ಎಂದು ಅಬ್ಬರಿಸಿ ಸುಮ್ಮನಾಗುವುದಾ? ಅಥವಾ ಜಿಲ್ಲೆಯಲ್ಲಿ ಹೂಡಿಕೆ ಮಾಡುವವರ ಪರ ನಿರಂತರವಾಗಿ ಕೈಜೋಡಿಸುವುದಾ?

ಹೂಡಿಕೆ ಮಾಡಿಸಲು ಇರುವ ಗುರಿ.

  1. ಸ್ಥಳೀಯ ಹೂಡಿಕೆದಾರರು
  2. ಎನ್‌ಆರ್‌ಐ ಹೂಡಿಕೆದಾರರು
  3. ದೇಶದ ವಿವಿಧ ರಾಜ್ಯದ ಹೂಡಿಕೆದಾರರು
  4. ವಿದೇಶದ ಹೂಡಿಕೆದಾರರು
  5. ಚೀನಾದಿಂದ ಕಾಲ್ತೆಗೆಯುವ ಹೂಡಿಕೆದಾರರು
  6. ಮೇಲ್ಕಂಡ ಹೂಡಿಕೆದಾರರಿಗೆ ಬನ್ನಿ, ಬನ್ನಿ ಎಂದು ಕರೆ ನೀಡುವ ಮೊದಲು ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಹೂಡಿಕೆ ಮಾಡಿರುವವರ ಸ್ಥಿತಿ ಗತಿ ಏನಾಗಿದೆ ಎಂಬ ಬಗ್ಗೆ ಒಂದು ಅಧ್ಯಯನ ಮಾಡಿ ರ್‍ಯಾಂಕಿಂಗ್ ನೀಡುವುದು ಅಗತ್ಯವಾಗಿದೆ.
  7. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಯೋಜನೆಗೆ ಭೂಮಿ ಕಳೆದು ಕೊಂಡ ಕುಟುಂಬಗಳ ಸ್ಥಿತಿ ಗತಿ ಏನಾಗಿದೆ ಎಂಬ ಬಗ್ಗೆ ಒಂದು ಅಧ್ಯಯನ ಮಾಡಿ ರ್‍ಯಾಂಕಿಂಗ್ ನೀಡುವುದು ಅಗತ್ಯವಾಗಿದೆ.
  8. ತುಮಕೂರಿನ ವಿವಿಧ ಕೈಗಾರಿಕೆಗಳ ವಸಾಹತುವಿನಲ್ಲಿ ಜಮೀನು ಪಡೆದಿರುವವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಬಗ್ಗೆ ಒಂದು ಅಧ್ಯಯನ ಮಾಡಿ ರ್‍ಯಾಂಕಿಂಗ್ ನೀಡುವುದು ಅಗತ್ಯವಾಗಿದೆ.
  9. ತುಮಕೂರು ಜಿಲ್ಲೆಯಲ್ಲಿ ಹೂಡಿಕೆ ಮಾಡಿ ತೊಂದರೆ ಅನುಭವಿಸಿದವರು ಅಥವಾ ಒಳ್ಳೆಯ ಅನುಕೂಲವಾಗಿದ್ದರೆ ತಮ್ಮ ಒಳ್ಳೆಯ ಅನುಭವವನ್ನು ಧೈರ್ಯವಾಗಿ ಹಂಚಿಕೊಳ್ಳಬಹುದು.

ಈ ಬಗ್ಗೆ  ವಿಷನ್‌ಗ್ರೂಪ್ ಮತ್ತು ಪ್ರಷರ್‌ಗ್ರೂಪ್’ ರಚಿಸಲಾಗುವುದು ಆಸಕ್ತರು ಕೈಜೋಡಿಸಲು ಮನವಿ.