12th September 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಆರ್ಕಿಟೆಕ್ಟ್ ಶ್ರೀ ಚಿದಾನಂದ್ ದಂಪತಿಗಳು  ಲೇ ಔಟ್ ಮಾಡುವಾಗ ವೃತ್ತದ ಮಧ್ಯೆ ಜಲಭಾರತ ಬರಲಿ ಎಂಬ ಸಲಹೆ ನೀಡಿದ್ದರ ಹಿನ್ನಲೆಯಲ್ಲಿ, ಭೂಮಿಯ ಮೇಲೆ ಸುಮಾರು ಒಂದು ಎಕರೆಯ ವಿಸ್ಥೀರ್ಣದಲ್ಲಿ ಭಾರತ ನಕ್ಷೆಯನ್ನು ಗುರುತಿಸಲಾಗಿದೆ.

ನನ್ನ ಸ್ನೇಹಿತ ರಾಣಿಬೆನ್ನೂರಿನ ಶ್ರೀ ಬಸವರಾಜ್ ಸುರಣಗಿರವರು ಹ್ಯಾಂಡ್ ಜಿಪಿಎಸ್‌ನಲ್ಲಿ ಈಗಾಗಲೇ ಭೂಮಿಯ ಮೇಲೆ ಭಾರತದ ಗಡಿ ಪ್ರದೇಶವನ್ನು ಗುರುತಿಸಿದ್ದಾರೆ. ಇದು ಬಹಳ ಚಾಲೇಂಜ್ ಕೆಲಸ ಆಗಿದೆ ಎಂಬುದು ನನ್ನ ಭಾವನೆ.

ಕೃತಕ ಅರಬ್ಭಿ ಸುಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ನಿರ್ಮಾಣ ಮಾಡಲಾಗಿದೆ. ಮಳೆಯ ನೀರು ನಿರೀಕ್ಷೆಗೂ ಮೀರಿ ಖುಷಿಯಾಗುವಷ್ಟು ಸಂಗ್ರಹವಾಗಿದೆ. ಈ ಬೇಸಿಗೆಯಲ್ಲಿ ತಳ ನೋಡಲು ಆಗಿಯೇ ಇಲ್ಲ.

ಬೆಂಗಳೂರಿನ ಇಐ ಟೆಕ್ನಾಲಾಜಿಸ್‌ನ ಶ್ರೀ ಎನ್. ರಂಗನಾಥ್‌ರವರ ಟೀಮ್ ನೆಲದ ಮೇಲಿರುವ ಭಾರತ ನಕ್ಷೆಯನ್ನು ಡ್ರೋಣ್ ಸಮೀಕ್ಷೆ ಮಾಡಿಸಿ ಸೆರೆ ಹಿಡಿದಿದ್ದಾರೆ.

ಡ್ರೋಣ್‌ನಲ್ಲಿ ಸೆರೆ ಹಿಡಿದ ನಕ್ಷೆ ಮತ್ತು ನಿಜವಾದ ಭಾರತ ನಕ್ಷೆಯನ್ನು ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್‌ನ ಶ್ರೀ ಸತ್ಯಾನಂದ್‌ರವರು ಒಂದಕ್ಕೊಂದು ಓವರ್ ಲ್ಯಾಪ್ ಮಾಡಿದ್ದಾರೆ. ಇದರಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಇದನ್ನು ಸರಿಪಡಿಸಿ ಮತ್ತೆ ಭೂಮಿಯ ಮೇಲೆ ಗುರುತು ಮಾಡುವ ಕೆಲಸ ಆರಂಭವಾಗಿದೆ.

ಜಲಭಾರತದ ಗಡಿಯ ನಿರ್ಮಾಣದ ಸುಮಾರು ವಿಧಗಳ ಬಗ್ಗೆ ಗೊಂದಲವಿದೆ ನಿಮ್ಮ ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನಮಗೆ ಸಹಕಾರಿಯಾಗಲಿದೆ.

  1. ಭಾರತ ನಕ್ಷೆಯ ಗಡಿ ಭಾಗದಲ್ಲಿ ಆರ್.ಸಿ.ಸಿ’ ಹಾಕಿ ಭೂಮಿಯ ಮೇಲೆ ಸುಮಾರು ಎರಡು ಅಡಿ ಎತ್ತರ ಅಂದರೆ ಸುತ್ತಲೂ ಕುಳಿತು ಕೊಳ್ಳುವ ಹಾಗೆ ಮಾಡುವುದು
  2. ಭಾರತ ನಕ್ಷೆಯ ಗಡಿ ಭಾಗದಲ್ಲಿ ಕಲ್ಲಿನಲ್ಲಿ ಕೆತ್ತನೆ’ ಮಾಡಿ ಭೂಮಿಯ ಮೇಲೆ ಸುಮಾರು ಎರಡು ಅಡಿ ಎತ್ತರ ಅಂದರೆ ಸುತ್ತಲೂ ಕುಳಿತು ಕೊಳ್ಳುವ ಹಾಗೆ ಮಾಡುವುದು
  3. ಭಾರತ ನಕ್ಷೆಯ ಗಡಿ ಭಾಗದಲ್ಲಿ ಆವರಣ ಗೋಡೆ’ಯನ್ನು ಭೂಮಿಯ ಮೇಲೆ ಸುಮಾರು ಎರಡು ಅಡಿ ಎತ್ತರ ಅಂದರೆ ಸುತ್ತಲೂ ಕುಳಿತು ಕೊಳ್ಳುವ ಹಾಗೆ ಮಾಡುವುದು
  4. ಭಾರತ ನಕ್ಷೆಯ ಗಡಿ ಭಾಗದಲ್ಲಿ ಬೇವಿನ ಗಿಡ’ಗಳನ್ನು ಹಾಕಿ ಭೂಮಿಯ ಮೇಲೆ ಸುಮಾರು ನಾಲ್ಕು  ಅಡಿ ಎತ್ತರ ಬೆಳೆಸಲು ಚಿಂತನೆಯಿದೆ.
  5. ಭಾರತ ನಕ್ಷೆಯ ಗಡಿ ಭಾಗದಲ್ಲಿ ಸಿಮೆಂಟ್ ಕಂಬ’ ಗಳನ್ನು ಹಾಕಿ ಭೂಮಿಯ ಮೇಲೆ ಸುಮಾರು ನಾಲ್ಕು  ಅಡಿ ಎತ್ತರ ವಿವಿಧ ಜಾತಿಯ ಔಷಧಿ ಬಳ್ಳಿಗಳನ್ನು ಬೆಳೆಸಲು ಚಿಂತನೆಯಿದೆ.

   ಭಾರತ ನಕ್ಷೆಯಲ್ಲಿ ಪ್ರಮುಖ ನದಿಗಳು ಹುಟ್ಟುವ ಜಾಗ ಮತ್ತು ಅವುಗಳು ಹರಿದು ಸಮುದ್ರ ಸೇರುವ ಜಾಗದಲ್ಲಿ ನಕ್ಷೆಯ ಗಡಿಯಲ್ಲಿ   ಪೈಪ್ ಹಾಕಲು ಉದ್ದೇಶಿಸಲಾಗಿದೆ. ಜೊತೆಗೆ ಸುತ್ತಲೂ ನೀರು ಹರಿಯುವ ಹಾಗೆ ಹೊಳೆ ಮಾಡಲು ಯೋಚಿಸಲಾಗಿದೆ.