22nd December 2024
Share

TUMAKURU:SHAKTHI PEETA FOUNDATION

 ಪ್ರಧಾನಿ ಮೋದಿಜಿಯವರ ಕನಸು ಮತ್ತು ಆಶಯಗಳಿಗೆ ಅನುಗುಣವಾಗಿ, ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ, ಪ್ರತಿಯೊಂದು ಇಂಚು ಭೂ ಬಳಕೆಯ ಹಾಗೂ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಿಸಿದ  ಜಿಐಎಸ್ ಆಧಾರಿತ ಅಭಿವೃದ್ಧಿ ಮಾಹಿತಿಗಳನ್ನು ತುಮಕೂರು ಜಿಐಎಸ್’ ಪೋರ್ಟಲ್ ಅಫ್ ಲೋಡ್ ಮಾಡಲು ಆರಂಭಿಸಲಾಗಿದೆ.

 ಒಂದೇ ಜಿಐಎಸ್ ಮ್ಯಾಪ್‌ನಲ್ಲಿ ಎಲ್ಲಾ ಇಲಾಖೆಗಳು ಅಫ್ ಲೋಡ್ ಮಾಡುವ ಮಹತ್ವದ ಯೋಜನೆಗೆ 2022 ರ ಕಾಲಮಿತಿ ಗಡುವು ಹಾಕಿಕೊಂಡು ಸಾಕ್ಷರತೆ ಜಿಲ್ಲೆ, ಶೌಚಾಲಯ ರಹಿತರ ಜಿಲ್ಲೆ, ಹೀಗೆ ಹಲವಾರು ಯೋಜನೆಗಳಡಿಯಲ್ಲಿ ಘೋಶಿಸುವಂತೆ ‘GIS DATA DIST TUMAKURU- PM MISSION 2022’    ಘೋಷವಾಕ್ಯದಡಿ ಸಂಪೂರ್ಣವಾಗಿ  ಜಿಐಎಸ್ ಡೇಟಾ ಜಿಲ್ಲೆಯನ್ನಾಗಿ ಘೋಷಣೆ ಮಾಡಲು ಅಧಿಕಾರಿಗಳು ಮತ್ತು ಜನತೆಯ ಸಹಭಾಗಿತ್ವದಲ್ಲಿ ಶ್ರಮಿಸಲು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಕರೆನೀಡಿದರು.

 ಅವರು ದಿನಾಂಕ:15.08.2020 ರಂದು ತುಮಕೂರು ನಗರದ ಶ್ರೀ ಸಾಯಿಬಾಬಾ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯ ಸಂಘ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದರು.

 ಪ್ರಧಾನಿ ಮೋದಿಯವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಲು, ಕಾಲಮಿತಿ ಘೋಷಣೆ ಮಾಡಿದ್ದರೂ, ಇದೂವರೆಗೂ ಸಮರೋಪಾದಿಯಲ್ಲಿ ಯೋಜನೆಗಳನ್ನು  ಪೂರ್ಣಗೊಳಿಸಲು ತಾಜಾ ಮಾಹಿತಿಗಳ ಸಂಗ್ರಹದ ಕೊರತೆ ಇಲಾಖೆಗಳಲ್ಲಿ ಎದ್ದು ಕಾಣುತ್ತಿದೆ, ಇದಕ್ಕೆ ಇಲಾಖೆಗಳ ಸಮನ್ವಯತೆ ಕೊರತೆ ಪ್ರಮುಖ ಕಾರಣ, ಈ ಕೊರತೆ ನೀಗಿಸುವ ಮಹತ್ವದ ಜವಾಬ್ಧಾರಿಯನ್ನು ದಿಶಾ’ ಸಮಿತಿಗೆ ನೀಡಲಾಗಿದೆ.

 ತುಮಕೂರು ಜಿಲ್ಲಾ ದಿಶಾ ಸಮಿತಿ ಈಗಾಗಲೇ ನಾಲ್ಕು ಸಭೆಗಳನ್ನು ನಡೆಸಿದೆ, ಎಲ್ಲಾ ಇಲಾಖೆಗಳು  ಮೋದಿಜಿಯವರ ಹಲವಾರು ಯೋಜನೆಗಳ ಜಾರಿಗೆ ನಿರ್ಧಿಷ್ಠ ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಗ್ರಾಮದ ಹಂತದಲ್ಲೂ ಸಂಘಸಂಸ್ಥೆಗಳು ಮತ್ತು ಪರಿಣಿತರು ಅಭಿವೃದ್ಧಿ ವಾಚ್‌ಡಾಗ್’ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.

 ಪ್ರಧಾನಿಯ ಮೋದಿಜಿಯವರ ಸ್ಮಾರ್ಟ್ ಸಿಟಿ ಮಾರ್ಗದರ್ಶಿಯಂತೆ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಂಸದರ ಆದರ್ಶ ಗ್ರಾಮ ಯೋಜನೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು ಶ್ರಮಿಸುವುದು ಅಗತ್ಯವಾಗಿದೆ.

  ಈ ಯೋಜನೆಗಳಡಿಯಲ್ಲಿ ಕೆಲವು ಯೋಜನೆಗಳಿಗೆ ಹಣದ ಅಗತ್ಯವಿದ್ದರೆ, ಹಲವಾರು ಯೋಜನೆಗಳು ಇರುವ ಆರ್ಥಿಕ ಸಂಪನ್ಮೂಲಗಳಡಿಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ, ಇದಕ್ಕೆ ಅಧಿಕಾರಿಗಳಲ್ಲಿ ಬದ್ಧತೆ ಇರಬೇಕು, ಜೊತೆಗೆ ಜನತೆಯೂ ಸಹ ಪಾಲುದಾರರಾಗ ಬೇಕು ಎಂದರು.

 ಸಭೆಯಲ್ಲಿ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಪ್ರಜಾಪ್ರಗತಿ ಸಂಪಾದಕ ಎಸ್, ನಾಗಣ್ಣ, ಗುರುಸಿದ್ದಪ್ಪ, ಪರಮಶಿವಯ್ಯ, ಚಂದ್ರಪ್ಪ, ವಿವಿಧ ಗ್ರಾಮ ಪಂಚಾಯಿತಿಗಳನ್ನು ಪ್ರತಿನಿಧಿಸಿದ್ದ ತುಂಡೋಟಿ ನರಸಿಂಹಯ್ಯ, ಶಿವರುದ್ರಯ್ಯ, ಪುಟ್ಟ ಶಾಮಯ್ಯ, ವೀರೇಂದ್ರಪಾಟೀಲ್, ಗುರುಪ್ರಸಾದ್, ಉಮಾಮಹೇಶ್, ಚಿದಾನಂದ್, ನೇತ್ರಾನಂದ್, ನರಸಿಂಹಮೂರ್ತಿ, ಶಿವಲಿಂಗಯ್ಯ, ಶಶಿಧರ್, ನಿಜಗುಣಮೂರ್ತಿ, ರಂಗನಾಥ್, ರಂಗಾರೆಡ್ಡಿ, ಪ್ರಕಾಶ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ, ಸಲಹೆ ಮಾರ್ಗದರ್ಶನ ನೀಡಿದರು.