25th September 2023
Share

TUMAKURU:SHAKTHIPEETA FOUNDATION

 ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ 2022 ರೊಳಗೆ ಹೌಸಿಂಗ್ ಫಾರ್‌ಆಲ್ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ನೀಡಲು ಒಂದು ತಿಂಗಳೊಳಗಾಗಿ ಸರ್ಕಾರಿ ಜಮೀನು ಗುರುತಿಸಿ ಜಿಐಎಸ್ ಲೇಯರ್ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ರೆವಿನ್ಯೂ ಇಲಾಖೆಯ ಅಧಿಕಾರಿಗಳು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದ ಅಪರೂಪದ ಪ್ರಸಂಗ ನಡೆಯಿತು.

  ತುಮಕೂರು ಉಪವಿಭಾಗಾಧಿಕಾರಿಯಾದ ಶ್ರೀ ಅಜಯ್‌ರವರು, ಗುಬ್ಬಿ ತಹಶೀಲ್ಧಾರ್ ಶ್ರೀ ಪ್ರದೀಪ್‌ಕುಮಾರ್‌ರವರು, ತುಮಕೂರು ತಾಲ್ಲೂಕು ತಹಶೀಲ್ಧಾರ್ ಶ್ರೀ ಮೋಹನ್ ಕುಮಾರ್ ಸೇರಿದಂತೆ ರೆವಿನ್ಯೂ ಇನ್‌ಸ್ಪೆಕ್ಟರ್, ತುಮಕೂರು ಇಓ ಶ್ರೀ ಜೈಪಾಲ್, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಆಡಾಳಿತಾಧಿಕಾರಿ ಶ್ರೀ ಸೋಮಶೇಖರ್, ಪಿಡಿಓ ಶ್ರೀ ಗುರುಮೂರ್ತಿ, ತಾಲ್ಲೂಕು ಸರ್ವೇಯರ್, ಕೇಸ್ ವರ್ಕರ್ ಮತ್ತು ಗ್ರಾಮ ಲೆಕ್ಕಿಗರ ಸಭೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಮತ್ತು ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆ ವ್ಯಾಪ್ತಿಯಲ್ಲಿ ಮಾದರಿಯಾಗಿ ನಿವೇಶನ ಮತ್ತು ವಸತಿ ರಹಿತರ ನಗರ ಮತ್ತು ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡಲೇ ಬೇಕು ಎಂಬ ಸಂಸದರ ಕರೆಗೆ ಅಧಿಕಾರಿಗಳು ಸ್ಪಂದಿಸಿದರು. 

 ದಿನಾಂಕ:19.08.2020 ರಂದು  ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಶ್ರೀ ಜಿ.ಎಸ್. ಬಸವರಾಜ್‌ರವರು ಮಾತನಾಡಿ, ಅಧಿಕಾರಿಗಳು ಬಡವರಿಗೆ ಸೇವೆ ಮಾಡಲೇ ಬೇಕು ಎಂದು ಮನಸ್ಸು ಮಾಡಿದರೆ ನಿವೇಶನ ನೀಡುವುದು ಸಮಸ್ಯೆಯೇ ಅಲ್ಲ, ಗ್ರಾಮವಾರು ಸರ್ಕಾರಿ ಜಮೀನು ಗುರುತಿಸಲು ಕರೆನೀಡಿದರು.

  ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಗುಬ್ಬಿ ತಾಲ್ಲೂಕು, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 18 ಗ್ರಾಮಗಳಲ್ಲಿನ ಎಲ್ಲಾ ವಿಧವಾದ ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್’ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ತುಮಕೂರು ಮಹಾನಗರ ಪಾಲಿಕೆಯ ಸುತ್ತ 10 ಕೀಮೀ ವ್ಯಾಪ್ತಿಯ ಸರ್ಕಾರಿ ಜಮೀನು ಗುರುತಿಸಿ ಪಟ್ಟಿ ಮಾಡಿ ತಂದಿದ್ದ ಅಧಿಕಾರಿಗಳಿಗೆ ಸಂಸದರು ಬೆನ್ನು ತಟ್ಟಿದ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಗರ್ ಹುಕುಂ ಯೋಜನೆಯಡಿಯಲ್ಲಿ ಫಾರಂ ೫೭ ರಲ್ಲಿ ಜಮೀನು ಮಂಜೂರಾತಿಗೆ ರೈತರು ಅರ್ಜಿ ಸಲ್ಲಿಸಿದ್ದಾರೆ, ನಿಯಮ ಪ್ರಕಾರ ಪಾಲಿಕೆಯ ಸುತ್ತ 10  ಕೀಮೀ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ, ಈ ಜಮೀನನ್ನು ಬಡವರಿಗೆ ನಿವೇಶನ ನೀಡಲು ಮತ್ತು ಸರ್ಕಾರಿ ಯೋಜನೆಗಳಿಗೆ ಕಾಯ್ದಿರಿಸಲು ಸೂಚಿಸಿದರು.

  ಉಪವಿಭಾಗಾಧಿಕಾರಿರವರು ದಿನಾಂಕ:05.08.2020 ರಂದು ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ವೇಳೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ ನೀಡಿದರು.

ಸಭೆಯಲ್ಲಿ ಶ್ರೀ ಗುರುಸಿದ್ಧಪ್ಪ, ಶ್ರೀ ಉಮಾಶಂಕರ್, ಶ್ರೀ ಲೋಕೇಶ್ ಇನ್ನೂ ಮುಂತಾದವರು ಭಾಗವಹಿಸಿದ್ದರು.