12th October 2024
Share

TUMAKURU:SHAKTHI PEETA FOUNDATION

 ಇಡೀ ದೇಶದಲ್ಲಿಯೇ ಕೇಸ್ ವರ್ಕರ್, ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್‌ಸ್ಪೆಕ್ಟರ್, ಸರ್ವೇಯರ್‍ಸ್, ತಹಶೀಲ್ಧಾರ್, ಪಿಡಿಓ, ಇಓ. ಪಾಲಿಕೆಯ ಅದಿಕಾರಿಗಳು ಮತ್ತು ಉಪವಿಭಾಗಾಧಿಕಾರಿಯವರ ಜೊತೆ ಯಾವ ಲೋಕಸಭಾ ಸದಸ್ಯರು ಸಹ ಸಭೆ ನಡೆಸುವುದಿಲ್ಲ.

 ಆದರೆ ತುಮಕೂರು ಸ್ಮಾರ್ಟ್ ಸಿಟಿ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆಯ ವ್ಯಾಪ್ತಿಯಲ್ಲಿ ಹೌಸಿಂಗ್ ಫಾರ್ ಆಲ್-2022 ಯಶಸ್ವಿ ಅನುಷ್ಠಾನಕ್ಕಾಗಿ ಈ ದಿಟ್ಟ ನಿರ್ಧಾರವನ್ನು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಕೈಗೊಂಡಿದ್ದಾರೆ.

 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಇಂತಹ 3 ಸಭೆಗಳನ್ನು ಶಾಸಕರಾದ ಮೊದಲನೆ ತಿಂಗಳಿನಿಂದ ಇಲ್ಲಿಯವರೆಗೂ ಮಾಡಿದ್ದಾರೆ, ಲೋಕಸಭಾ ಸದಸ್ಯರು 5 ನೇ ಭಾರಿ ಸಂಸದರಾದ ನಂತರ 2 ಸಭೆಗಳನ್ನು ಮಾಡಿದ್ದಾರೆ, ಸಂಸದರು ಮತ್ತು ಶಾಸಕರು ಸೇರಿ 2 ಸಭೆಗಳನ್ನು ಮಾಡಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯನಾಗಿ ನಾನು ಈ ಎಲ್ಲಾ 7 ಸಭೆಗಳಲ್ಲಿಯೂ ಭಾಗವಹಿಸಿದ್ದೇನೆ. ಜೊತೆಗೆ ದಿಶಾ ಸಭೆಯಲ್ಲೂ ಚರ್ಚೆಯಾಗಿದೆ.

 ನಾನು ಮತ್ತು ಸಂಸದರು ತುಮಕೂರಿನಲ್ಲಿ ಒಂದು ನಿವೇಶನ ನೀಡಿಲ್ಲ ಎಂದು ಮಾಜಿ ಶಾಸಕರುಗಳಾದ ಶ್ರೀ ಸೊಗಡು ಶಿವಣ್ಣನವರು ಮತ್ತು ಶ್ರೀ ಡಾ.ರಫೀಕ್ ಅಹಮ್ಮದ್‌ರವನ್ನು ಹಲವಾರು ಭಾರಿ ಮಾಧ್ಯಮಗಳಲ್ಲಿ ಟೀಕಿಸಿದ್ದೇವೆ. 

  ಈಗ ನಮಗೆ ಅರ್ಥ ಆಗಿದೆ ಅವರು ಏಕೆ ನಿವೇಶನ ನೀಡಲು ಆಗಿಲ್ಲ, ನಾನು ಈಗ ಏನೂ ಮಾತನಾಡುವುದಿಲ್ಲ. ದಿನಾಂಕ:05.09.2020 ರಂದು ಪುನಃ ನಡೆಯುವ 8 ನೇ ಸಭೆಗೆ ಅಧಿಕಾರಿಗಳು ಈ ಕೆಳಕಂಡ ಜಿಐಎಸ್ ಆಧಾರಿತ ಲೇಯರ್ ಸಹಿತ ಆಗಮಿಸುವಂತೆ ಕ್ರಮ ವಹಿಸುವುದು ನಿಮ್ಮ ಜವಾಬ್ಧಾರಿ.

 ಉಪವಿಭಾಗಾಧಿಕಾರಿಗಳ ಜೊತೆಗೆ ತಾವೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿದ್ದೀರಿ. ಜೊತೆಗೆ ವಸತಿ ರಹಿತರಿಗೆ 2022 ರೊಳಗೆ ವಸತಿ ನೀಡಲೇ ಬೇಕು. ಆಗಿದ್ದಲ್ಲಿ ಈ ಕೆಳಕಂಡ ಅನಾಲೀಸಿಸ್ ಅಗತ್ಯವಾಗಿದೆ ಸಾರ್.

  1. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಜಿಐಎಸ್ ಲೇಯರ್- ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ನಿಂದ ಪಡೆಯುವುದು.
  2. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು
  3. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮಗಳ ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು
  4. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮಲೆಕ್ಕಿಗರ (ಗ್ರಾಮಗಳ ವ್ಯಾಪ್ತಿ) ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು
  5. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ರೆವಿನ್ಯೂ ಇನ್‌ಸ್ಪೆಕ್ಟರ್ (ಗ್ರಾಮಗಳ ವ್ಯಾಪ್ತಿ) ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು
  6. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮವಾರು ಸರ್ಕಾರಿ ಜಮೀನುಗಳ ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು(ಗ್ರಾಮ ಲೆಕ್ಕಿಗರು, ಆರ್‌ಐ ಮತ್ತು ಸರ್ವೆಯರ್ ಮಾಹಿತಿ ನೀಡಬೇಕು)
  7. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮವಾರು ಆಶ್ರಯ ಯೋಜನೆಗಳಿಗೆ ನಿಗದಿಗೊಳಿಸಿರುವ ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್ , ತುಮಕೂರು. (ತಾಲ್ಲೂಕು ಪಂಚಾಯತ್ ಇಓ ಮತ್ತು ಪಿಡಿಓಗಳು ಮಾಹಿತಿ ನೀಡಬೇಕು)
  8. ತುಮಕೂರು ಮಹಾನಗರ ಪಾಲಿಕೆಯಲ್ಲಿನ ವಾರ್ಡ್‌ವಾರು ನಿಯಾಮುನುಸಾರ ನಿವೇಶನ ರಹಿತರ ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಪಾಲಿಕೆ ಆಯಕ್ತರು)
  9. ತುಮಕೂರು ನಗರದ 10 ಕೀಮೀ ವ್ಯಾಪ್ತಿಯ ಗ್ರಾಮವಾರು  ನಿವೇಶನ ರಹಿತರ ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್, ತುಮಕೂರು. (ತಾಲ್ಲೂಕು ಪಂಚಾಯತ್ ಇಓ ಮತ್ತು ಪಿಡಿಓಗಳು ಮಾಹಿತಿ ನೀಡಬೇಕು)
  10. ತುಮಕೂರು ನಗರದ ಅಧಿಕೃತ ಕೊಳಗೇರಿಗಳಲ್ಲಿರುವ ಸ್ವತ್ತಿನ ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಎಇಇ, ಸ್ಲಮ್ ಬೋರ್ಡ್ ಮತ್ತು ಪಾಲಿಕೆ ಆಯಕ್ತರು)
  11. ತುಮಕೂರು ನಗರದ ಅನಧಿಕೃತ ಕೊಳಗೇರಿಗಳಲ್ಲಿರುವ ಸ್ವತ್ತಿನ ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಜಮೀನು ಮಾಲೀಕತ್ವದ ಇಲಾಖೆ ಅಧಿಕಾರಿಗಳು, ಎಇಇ, ಸ್ಲಮ್ ಬೋರ್ಡ್ ಮತ್ತು ಪಾಲಿಕೆ ಆಯಕ್ತರು)
  12. ತುಮಕೂರು ನಗರದ 10 ಕೀಮೀ ವ್ಯಾಪ್ತಿಯಲ್ಲಿನ ಹೌಸಿಂಗ್ ಬೋರ್ಡ್ ನಿರ್ಮಾಣ ಮಾಡಿರುವ ಹಾಲಿ ಬಡಾವಾಣೆಗಳು ಮತ್ತು ಹೊಸದಾಗಿ ಮಾಡಲು ಉದ್ದೇಶಿಸಿರುವ ಬಡಾವಾಣೆಗಳ   ಜಿಐಎಸ್ ಲೇಯರ್- ಎನ್.ಆರ್.ಡಿ.ಎಂ.ಎಸ್. ಜಿಲ್ಲಾ ಪಂಚಾಯತ್, ತುಮಕೂರು. (ಎಇಇ, ಹೌಸಿಂಗ್ ಬೋರ್ಡ್ ಮತ್ತು ಪಾಲಿಕೆ ಆಯಕ್ತರು)
  13. ತುಮಕೂರು ನಗರದ 10 ಕೀಮೀ ವ್ಯಾಪ್ತಿಯಲ್ಲಿನ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಹಾಲಿ ಬಡಾವಾಣೆಗಳು ಮತ್ತು ಹೊಸದಾಗಿ ಮಾಡಲು ಉದ್ದೇಶಿಸಿರುವ ಬಡಾವಾಣೆಗಳ   ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಟೂಡಾ ಆಯಕ್ತರು)
  14. ತುಮಕೂರು ನಗರದ 10 ಕೀಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳಲ್ಲಿ ವಸತಿ ಯೋಗ್ಯ ಪ್ರದೇಶ ಗಳ ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಮುಖ್ಯ ಇಂಜಿನಿಯರ್ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್)
  15. ತುಮಕೂರು ನಗರದ 10 ಕೀಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳಲ್ಲಿ ವಸತಿ ಯೋಗ್ಯ ಪ್ರದೇಶ ಗಳಿಗೆ ಸಂಪರ್ಕ ರಸ್ತೆ ಜಿಐಎಸ್ ಲೇಯರ್- ಐಸಿಸಿಸಿ ತುಮಕೂರು ಸ್ಮಾರ್ಟ್ ಸಿಟಿ (ಆಯುಕ್ತರು ಟೂಡಾ ಇಓ ಮತ್ತು ಪಿಡಿಓ)

 ಇದೇ ಮಾದರಿಯಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಹೊಣೆಗಾರಿಕೆಯನ್ನು ಹಂಚಿ ಒಂದು ನಿಯಾಮುನುಸಾರ ಸುತ್ತೋಲೆ ನೀಡುವುದು ಸೂಕ್ತವಾಗಿದೆ. ನಂತರ ಸಾಧಕ ಭಾದಕಗಳನ್ನು ನೋಡಿಕೊಂಡು ಇಡೀ ಜಿಲ್ಲೆಯಲ್ಲಿ ಇದೇ ಮಾದರಿಯನ್ನು ಅನುಸರಿಸ ಬಹುದಾಗಿದೆ.

 ಈ ವ್ಯಾಪ್ತಿಯಲ್ಲಿ ಒಂದು ಗುಂಟೆ ಸರ್ಕಾರಿ ಜಮೀನು ದೊರೆತರು ಒಬ್ಬರಿಗೆ ನಿವೇಶನ ನೀಡಬಹುದು, ಉದಾಸೀನ, ಬಾಯಲ್ಲಿ ಸಿದ್ಧ ಉತ್ತರ ಸರಿಯಲ್ಲ, ಎಲ್ಲವೂ ಡಿಜಿಟಲ್ ದಾಖಲೆ ಸಹಿತ ಇರಲಿ ಸಾರ್, ಸರ್ಕಾರಿ ಜಮೀನು ಇಲ್ಲ ಎಂದಾದಲ್ಲಿ ನಂತರ ಭೂಸ್ವಾಧೀನ ಪ್ರಕ್ರೀಯೆಗೆ ಅಗತ್ಯ ಕ್ರಮ ಕೈಗೊಳ್ಳ ಬಹುದಾಗಿದೆ.

 ಯಾರ ಹಂತದಲ್ಲಿ ಯಾವ ಕಡತ ನೆನೆಗುದಿಗೆ ಬಿದ್ದಿದೆ ಎಂಬ ಬಗ್ಗೆ ತಾಜಾ ಡೇಟಾ ಇರಲಿ ಸಾರ್. ಸಭೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗಿವೆ. ಸುಮಾರು ನಾಲ್ಕು ಹಂತಗಳ ಯೋಜನೆಗಳ ಬಗ್ಗೆಯೂ ಚರ್ಚೆಯಾಗಿದೆ.

 8 ನೇ ಸಭೆಯಲ್ಲಿ ಒಂದು ಸ್ಪಷ್ಟ ಚಿತ್ರಣ ದೊರೆಯುವ ಆಶಾಭಾವನೆ ನನ್ನದಾಗಿದೆ.